Manjeswar – November 19, 2024
In a deeply moving reunion, 65-year-old Shankaran C from Shornur finally reunited with his family on November 21, 2024, after six long months of separation.Shankaran went missing in June, leaving his family in despair as they searched tirelessly for him. On June 5, the compassionate team at Snehalaya Psycho-Social Rehabilitation Centre found him disoriented and struggling with dementia in Arikkad, Kasaragod. At the time, he appeared frail and confused.Over several months, Snehalaya’s team provided dedicated care, medication, and counseling. Shankaran gradually regained his strength and began to remember his name and home. This breakthrough allowed his family to be contacted, leading to an emotional reunion filled with tears and gratitude.
For Shankaran’s family, the reunion felt miraculous, marking the end of months of anguish and sleepless nights. They expressed their heartfelt thanks to Snehalaya, whose efforts reunited them with their beloved Shankaran—a powerful testament to hope and compassion.
ಆರು ತಿಂಗಳ ವಿಯೋಗದ ಬಳಿಕ ಶಂಕರನ ಭಾವೋಲ್ಲಾಸದ ಮಿಲನ
ಮಂಜೇಶ್ವರ – 2024ರ ನವೆಂಬರ್ 21ರಂದು, 65 ವರ್ಷದ ಶೋರ್ಣೂರು ಮೂಲದ ಶಂಕರನ್ ಸಿ, ಆರು ತಿಂಗಳ ಬೇರ್ಪಡಿಕೆಯ ನಂತರ, ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡರು. ಈ ಪುನರ್ಮಿಲನ ಮನಮಿಡಿಯುವಂತಿತ್ತು.
ಜೂನ್ ತಿಂಗಳಲ್ಲಿ ಶಂಕರನ್ ಕಾಣೆಯಾಗಿದ್ದು, ಕುಟುಂಬವು ನಿರಂತರವಾಗಿ ಹುಡುಕುತ್ತಿದ್ದರೂ, ಆತನ ಸುಳಿವು ಸಿಕ್ಕಿರಲಿಲ್ಲ. ಜೂನ್ 5ರಂದು ಕಾಸರಗೋಡು ಜಿಲ್ಲೆಯ ಅರಿಕ್ಕಾಡಿನಲ್ಲಿ, ವಿಚಲಿತ ಮತ್ತು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವ ಶಂಕರನನ್ನು ಮಂಜೇಶ್ವರ ಸ್ನೇಹಾಲಯ ಕೇಂದ್ರದ ತಂಡದವರು ಪತ್ತೆಹಚ್ಚಿ ರಕ್ಷಿಸಿದರು. ಆ ವೇಳೆ, ಅವರು ಶಾರೀರಿಕವಾಗಿ ಬಲಹೀನರಾಗಿದ್ದು ಮತ್ತು ಮಾನಸಿಕ ಸ್ತಿಮಿತತೆಯನ್ನು ಕಳೆದುಕೊಂಡಿದ್ದರು.
ಸ್ನೇಹಾಲಯದ ಸ್ನೇಹಭರಿತ ಆರೈಕೆ, ಪ್ರೀತಿಯ ಒಡನಾಟ, ಸಮಯೋಚಿತ ಸೂಕ್ತ ಔಷಧಿ, ಮತ್ತು ಅನುಕೂಲಕರ ಸಮಾಲೋಚನೆಯಿಂದ ಶಂಕರನ್ ನಿಧಾನವಾಗಿ ಚೇತರಿಸಿಕೊಂಡು, ತಮ್ಮ ಹೆಸರು ಮತ್ತು ಮನೆಗೆ ಸಂಬಂಧಿಸಿದ ನೆನಪುಗಳನ್ನು ವಿವರಿಸಲು ಪ್ರಾರಂಭಿಸಿದರು. ಶಂಕರ್ ನೀಡಿದ ಈ ಮಾಹಿತಿಯ ಮೇರೆಗೆ ಅವರ ಕುಟುಂಬವನ್ನು ಸಂಪರ್ಕಿಸಿ, ಅವರ ಪುನರ್ಮಿಲನಕ್ಕೆ ಸುಯೋಜಿತ ವ್ಯವಸ್ಥೆ ಮಾಡಲಾಯಿತು ಹಾಗೂ 2024ರ ನವೆಂಬರ್ 21ರಂದು ಹರ್ಷದ ಕಣ್ಣೀರಿನ ಹನಿಗಳ ಆಲಿಂಗನದ ಜೊತೆ ಆಭಾರಿ ಮನಸ್ಸಿನಿಂದ ತುಂಬಿದ ಸಂತಸದ ಈ ಸಮಾಗಮವನ್ನು ನೋಡಿ ಎಲ್ಲರೂ ಸಂಭ್ರಮಿಸಿದರು
ಶಂಕರನ್ ಅವರ ಕುಟುಂಬಕ್ಕೆ ಈ ಕ್ಷಣ ಒಂದು ಅದ್ಭುತ ಅನುಭವವಾಗಿದ್ದು, ಆರು ತಿಂಗಳ ದುಃಖ, ದುಮ್ಮಾನಗಳ, ಸಂದಿಗ್ದತೆ ಮತ್ತು ನಿದ್ರಾಹೀನತೆಯ ದಿನಗಳ ಅಂತ್ಯವಾಯಿತು. ಸ್ನೇಹಾಲಯದ ಈ ಮಾನವೀಯ ಕಾರ್ಯವನ್ನು ಶ್ಲಾಘಿಸುತ್ತಾ ಶಂಕರನ ಕುಟುಂಬದವರು ಹೃದಯಂತರಾಳದಿಂದ ಕೃತಜ್ಞತೆಗಳನು ಸಲ್ಲಿಸಿದರು