”Pammo Bai Returns to Her Family After Two Years of Separation”
Manjeshwar, October 3, 2024 In a deeply emotional reunion, Pammo Bai, lovingly known as Kammu, reunited with her mother, sister, and brother’s family in her hometown of Ghughra, Jabalpur, Madhya Pradesh. After two long years of separation, their tearful embraces expressed the depth of their longing and hope.
Kammu, a resilient daily wage laborer, struggled for more than a decade with mental illness after losing her husband. Her family searched tirelessly for her, driven by worry and love. Finally, their prayers found an answer.
Snehalaya and Shraddha Foundation provided unwavering support and compassion, helping Kammu transform her life. The care and patience during her rehabilitation gave her a renewed sense of peace and stability.
Her return filled her family with overwhelming joy. This was the moment they had dreamed of for years. Their tear-streaked smiles and warm embraces reflected the strength of love and hope.
The family’s reunion showcases the power of persistence, community support, and the healing strength of love.
”ಎರಡು ವರ್ಷದ ಅಗಲಿಕೆಯ ನಂತರ ಪಮ್ಮೋ ಬಾಯಿಯವರ ಭಾವುಕ ಪುನರ್ಮಿಲನ”
ಮಂಜೇಶ್ವರ, ಅಕ್ಟೋಬರ್ 3, 2024 – ಪ್ರೀತಿಯಿಂದ ಕಮ್ಮು ಎಂದು ಕರೆಯಲ್ಪಡುವ ಪಮ್ಮೋ ಬಾಯಿಯವರು ಎರಡು ವರ್ಷಗಳ ಧೀರ್ಘ ಬೇರ್ಪಡಿಕೆಯ ನಂತರ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಗುಘ್ರಾದಲ್ಲಿ ತಮ್ಮ ತಾಯಿ, ತಂಗಿ ಮತ್ತು ತಮ್ಮನ ಕುಟುಂಬದೊಂದಿಗೆ ಪುನರ್ಮಿಲನಗೊಂಡರು.ದಿನಗೂಲಿ ಕಾರ್ಮಿಕಳಾದ ಕಮ್ಮು, ತನ್ನ ಪತಿಯ ದುರಂತಮಯ ಸಾವಿನ ನಂತರ ಕೆಲವು ವರ್ಷಗಳಿಂದ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಬಲಿಯಾಗಿ ಒಂದು ದಿನ ಮನೆಯಿಂದ ಕಾಣೆಯಾಗಿದ್ದರು. ಪ್ರೀತಿ, ನಲ್ಮೆಯಿಂದ ಬೆಳೆದ ಅವರ ಕುಟುಂಬ ಕಮ್ಮುವನ್ನು ಹುಡುಕುವ ಅವಿರತ ಪ್ರಯತ್ನವನ್ನು ಮಾಡಿತ್ತು. ಕೊನೆಗೂ ಅವರ ಪ್ರಾರ್ಥನೆಯು ಫಲಿಸಿತು. ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ನ ಸಹಾಯದಿಂದ ಕಮ್ಮುರವರ ಪತ್ತೆಯಾಯಿತು ಹಾಗೂ ಈ ಸಂಸ್ಥೆಗಳ ನಿರಂತರ ಬೆಂಬಲ ಮತ್ತು ಕಾಳಜಿಯೊಂದಿಗೆ, ಕಮ್ಮುನವರು ಅದ್ಭುತ ಚೇತರಿಕೆಯನ್ನು ಪಡೆದರು. ಕೊನೆಗೆ ಅವರ ಪ್ರೀತಿಯ ಕುಟುಂಬದೊಂದಿಗೆ ಅವರ ಪುನರ್ಮಿಲನವಾಯಿತು.ಕಮ್ಮುವಿನ ಮರಳಿಕೆಯಿಂದ ಕುಟುಂಬವು ಮಿತಿ ಇಲ್ಲದ ಸಂತೋಷವನ್ನು ಅನುಭವಿಸಿತು ಹಾಗೂ ಅವರ ವರ್ಷಗಳ ಕನಸು ಸಾಕಾರವಾಯಿತು. ಪರಸ್ಪರ ಆನಂದ ಭಾಷ್ಪಗಳ ವಿನಿಮಯದ ನಡುವೆ ಒಬ್ಬರನ್ನೊಬ್ಬರು ಆಲಿಂಗಿಸುತ್ತಾ ತಮ್ಮ ಆನಂದವನ್ನುಹಂಚಿಕೊಂಡರು. ಕಮ್ಮುನವರ ಈ ಪುನರ್ಮಿಲನವು, ಸ್ನೇಹಾಲಯ ಮತ್ತು ಶ್ರದ್ದಾ ಸಂಸ್ಥೆಗಳ ನಿರಂತರ ಶ್ರಮ, ಸಾಮುದಾಯಿಕ ಕಾಳಜಿ ಮತ್ತು ಸಮಾಜದ ಪ್ರತಿ ನಿಸ್ವಾರ್ಥ ಸೇವೆಯ ಒಂದು ಅದ್ಭುತ ಪ್ರತೀಕವಾಗಿದೆ.