”An Appeal to help Saleem to reunite with his family”
Manjeswar: On October 22, 2024, the dedicated Snehalaya team, led by Br. Joseph Crasta, rescued 33-year-old Saleem, who had been aimlessly wandering the streets of Thokottu, Mangalore. Originally from Mumbai, Saleem appeared disoriented, wearing tattered clothes and neglecting personal hygiene, while speaking to himself in Hindi.
Currently, Saleem receives excellent care and medical support at Snehalaya Psycho-Social Rehabilitation Home for Men. His most urgent need, however, is to reunite with his family. If you have any information that could help bring him back to his loved ones, please contact 9446547033 or 7994087033.
Let’s bring Saleem back to the warmth and security of his home.
”ಸಲೀಂ ರವರನ್ನು ತಮ್ಮ ಕುಟುಂಬದೊಡನೆ ಪುನಃ ಸೇರಿಸಲು ನಮ್ರ ವಿನಂತಿ”
ಮಂಜೇಶ್ವರ: 2024ರ ಅಕ್ಟೋಬರ್ 22ರಂದು ಬ್ರದರ್ ಜೋಸೆಫ್ ಕ್ರಾಸ್ಟಾ ಅವರ ನೇತೃತ್ವದಲ್ಲಿ ಸ್ನೇಹಾಲಯದ ಅವಿರತ ಪರಿಶ್ರಮಿ ತಂಡ ತೊಕ್ಕೊಟ್ಟು, ಮಂಗಳೂರು ಬೀದಿಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಿದ್ದ 33 ವರ್ಷದ ಸಲೀಂ ಅವರನ್ನು ರಕ್ಷಣೆಗೈದರು. ಮುಂಬೈ ಮೂಲದ ಸಲೀಂ ತುಂಬಾ ಕಳವಳಗೊಳಿಸುವ ಮಾನಸಿಕ ಸ್ಥಿತಿಯಲ್ಲಿ ಕಂಡುಬಂದರು – ಅವರ ಬಟ್ಟೆ ತೇರ್ಪಣೆಗೊಂಡಿದ್ದವು, ಶಾರೀರಿಕ ಸ್ವಚ್ಛತೆ ಅಸಮರ್ಪಕ ಸ್ಥಿತಿಯಲ್ಲಿತ್ತು, ಮತ್ತು ತಮ್ಮಷ್ಟಕ್ಕೆ ಮಾತನಾಡುವ ಪ್ರವರ್ತಿಯನ್ನು ಹೊಂದಿದ್ದರು . ಅವರು ಹಿಂದಿ ಭಾಷೆಯನ್ನು ಅರಿತಿದ್ದಾರೆ.
ಸಧ್ಯಕ್ಕೆ ಸಲೀಂ ರವರು ಮಂಜೇಶ್ವರ ಸ್ನೇಹಾಲಯದ ಪುರುಷರ ಮನೋಸಾಮಾಜಿಕ ಪುನಶ್ಚೇತನ ಕೇಂದ್ರದಲ್ಲಿ ಉತ್ತಮ ಆರೈಕೆಯನ್ನು ಪಡೆಯುತ್ತಿದ್ದಾರೆ. ಈ ಆರೈಕೆಯ ನಂತರ ಸಲೀಂ ಅವರನ್ನು ತಮ್ಮ ಕುಟುಂಬದ ಸಂರಕ್ಷಣೆಗೆ ಮರಳಿಸಬೇಕಾಗಿದೆ.
ಸ್ನೇಹಾಲಯ ತಂಡವು ಸಲೀಂ ರವರ ಗುರುತು ಅಥವಾ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದೆ. ಈ ವ್ಯಕ್ತಿಗೆ ಸಂಬಂಧಿತ ಯಾವುದೇ ಮಾಹಿತಿಯನ್ನು ಯಾರಾದರೂ ಹೊಂದಿದ್ದರೆ ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ.