Malati Bera, a resident of Purbo Medinipur, West Bengal, has been reunited with her family after seven months, thanks to the combined efforts of Snehalaya and Shraddha Foundation. Malati, who suffers from mental illness, had gone missing multiple times in the past. On one occasion, she was found as far as Jammu and Kashmir. Due to previous experiences, her daughter was initially hesitant to bring her back.However, after receiving counseling and support, her daughter agreed to take her in, and Malati’s grandson has now taken responsibility for ensuring she receives her medication regularly. On August 12, 2024, the Snehalaya team rescued Malati and after the recovery she has been shifted to Shraddha Foundation, for the reunion process. Following this, she was successfully reunited with her family, where she is now receiving the care she needs.Thanks to the dedicated efforts of Snehalaya and Shraddha Foundation, Malati is back home and being well cared for by her loved ones.
ಪಶ್ಚಿಮ ಬಂಗಾಳದ ಪುರ್ಬೋ ಮೆದಿನಿಪುರ್ ನಿವಾಸಿ ಮಾಲತಿ ಬೆರಾ ಏಳು ತಿಂಗಳ ನಂತರ ತಮ್ಮ ಕುಟುಂಬದ ಜೊತೆ ಮತ್ತೆ ಸೇರ್ಪಡೆಯಾದರು. ಇದು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ನ ಜಂಟಿ ಪ್ರಯತ್ನದಿಂದ ಸಾಧ್ಯವಾಯಿತು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಾಲತಿ ಹಲವಾರು ಬಾರಿ ಮನೆಯಿಂದ ಕಣ್ಮರೆಯಾದಿದ್ದರು. ಒಮ್ಮೆ ಅವರನ್ನು ಹುಡುಕಲು ಮನೆಯವರು ಜಮ್ಮು ಮತ್ತು ಕಾಶ್ಮೀರದವರೆಗೂ ಹೋಗಿದ್ದರು. ಹಿಂದಿನ ಈ ಕಹಿ ಅನುಭವದಿಂದಾಗಿ ಅವರ ಮಗಳು ಅವರನ್ನು ಪುನಃ ಮನೆಗೆ ಕರೆದೊಯ್ಯಲು ಅಂಜುತ್ತಿದ್ದರು.ಆದರೆ, ಸ್ನೇಹಾಲಯದಿಂದ ದೊರೆತ ಸಲಹೆ ಮತ್ತು ಬೆಂಬಲದ ನಂತರ, ಅವರ ಮಗಳು ಮಾಲತಿಯನ್ನು ಮನೆಗೆ ಕರೆದುಕೊಂಡು ಹೋಗಲು ಒಪ್ಪಿದಳು. ಈಗ, ಮಾಲತಿಯ ಮೊಮ್ಮಗ ಅವಳ ಔಷಧಿಯನ್ನು ನಿಯಮಿತವಾಗಿ ನೀಡುವ ಜವಾಬ್ದಾರಿ ತೆಗೆದುಕೊಂಡಿದ್ದಾನೆ. 2024ರ ಆಗಸ್ಟ್ 12ರಂದು ಸ್ನೇಹಾಲಯದ ತಂಡ ಮಾಲತಿಯನ್ನು ಶ್ರದ್ಧಾ ಫೌಂಡೇಶನ್ಗೆ ಕರೆತಂದು ಪುನರ್ವಸತಿ ಪ್ರಕ್ರಿಯೆ ನಡೆಸಿತು. ನಂತರ, ಅವಳಿಗೆ ಅಗತ್ಯವಾದ ಚಿಕಿತ್ಸೆಯ ಜೊತೆ ಮಾಲತಿ ಪುನಃ ಅವಳ ಕುಟುಂಬದೊಂದಿಗೆ ಮತ್ತೆ ಸೇರಿದ್ದಾರೆ.ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ನ ಉದಾತ್ತ ಪ್ರಯತ್ನಗಳಿಂದ ಮಾಲತಿ ಇದೀಗ ಮನೆಗೆ ಹಿಂತಿರುಗಿದ್ದು, ಅವರ ಕುಟುಂಬದಿಂದ ಉತ್ತಮ ಸಂರಕ್ಷಣೆ ಮತ್ತು ಪೋಷಣೆ ಪಡೆಯುತ್ತಿದ್ದಾರೆ.