November 6, 2024
Manjeswar: In a heartwarming reunion, Ramesh, from Karnataka’s Chikamagalur district, has been reunited with his cousin brother after nearly five months of being missing.Ramesh, a resident of Hanuman Halli village in Kadur taluk, went missing in July.His mother’s passing in Bangalore exacerbated his struggles. Growing up without his father, Ramesh faced difficulties connecting with his family.Snehalaya Charitable Trust’s dedicated team rescued Ramesh on August 3, 2024. He received medical assistance and counseling at Shraddha, a rehabilitation center, starting October 7,2024Ramesh reunited with his cousin brother on November 6. His family provided one month of medication and counseling to support his transition.”We’re grateful for Snehalaya’s, and Shraddha Foundation’s efforts,” said Ramesh’s cousin.
ಸುಮಾರು ಐದು ತಿಂಗಳ ಕಾಲ ನಾಪತ್ತೆಯಾಗಿದ್ದ ರಮೇಶ್, ತನ್ನ ಈ ಅನಿರ್ದಿಷ್ಟ, ಕಷ್ಟದ ಅವಧಿಯ ಬಳಿಕ ತನ್ನ ಸೋದರ ಸಂಬಂಧಿ ಸಹೋದರನೊಂದಿಗೆ ಯಶಸ್ವಿಯಾಗಿ ಮತ್ತೆ ಸೇರಿದ್ದಾನೆ ಹಾಗೂ ಈ ಮೂಲಕ ತನ್ನ ಜೀವನದ ಇನ್ನೊಂದು ಹೊಸ ಅಧ್ಯಾಯವನ್ನು ಪ್ರಾರಂಬಿಸಿದ್ದಾನೆ. ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸಮರ್ಪಿತ ತಂಡವು ರಮೇಶ್ ನವರ ಈ ಪುನರ್ಮಿಲನವನ್ನು ಸುಗಮಗೊಳಿಸಿತು ಹಾಗೂ ಅವನನ್ನು ತನ್ನ ಕುಟುಂಬಕ್ಕೆ ಪುನಃ ಸೇರಿಸುವ ಈ ಪುನೀತ ಕಾರ್ಯವನ್ನು ನೆರವೇರಿಸಿತು.ಬಾಲ್ಯದಿಂದಲೇ ರಮೇಶನ ಜೀವನ ಸವಾಲಿನದ್ದಾಗಿದೆ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿ ತನ್ನ ತಾಯಿಗೆ ಆಸರೆಯಾಗಿದ್ದ. ರಮೇಶ್ ನಾಪತ್ತೆಯಾದ ಒಂದು ತಿಂಗಳಲ್ಲೇ ಆತನ ತಾಯಿ ಇಹಲೋಕವನ್ನು ತ್ಯಜಿಸಿದ್ದಾರೆ. ಬಾಲ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ತನ್ನ ಹುಟ್ಟೂರಾದ ಯಗಟಿಯಲ್ಲಿ ಶಾಲೆಯಲ್ಲಿ ಓದುತ್ತಿದ ರಮೇಶ್ ತನ್ನ ಚಿಕ್ಕವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದು ಆತ ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆಯುತ್ತಿದ್ದ. ಯುವ ವಯಸ್ಕನಾಗಿದ್ದಾಗ, ರಮೇಶ್ ತನ್ನ ಕುಟುಂಬದೊಂದಿಗೆ ಹೆಚ್ಚೇನು ಸಂಪರ್ಕವಿರಿಸದೆ ಬದಲಿಗೆ ಬೀದಿಗಳಲ್ಲಿ ಸ್ವತಂತ್ರದ ಬದುಕನ್ನು ಇಷ್ಟಪಡುತ್ತಿದ್ದ. ಕುಟುಂಬಿಕರು ಆತನಿಗೆ ವೈದ್ಯಕೀಯ ನೆರವು ನೀಡಲುಲು ಪ್ರಯತ್ನಿಸಿದರೂ ದೀರ್ಘಕಾಲದ ಚಿಕಿತ್ಸೆ ಮತ್ತು ಔಷಧಿಗಳನ್ನು ರಮೇಶ್ ನಿರಾಕರಿಸುತ್ತಿದ್ದ.ಇದೀಗ ರಮೇಶನ ಸೋದರಸಂಬಂಧಿ, ಅವನನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಹಾಗೂ, ಆತನನ್ನು ಮತ್ತೆ ಕುಟುಂಬದಲ್ಲಿ ಸ್ವೀಕರಿಸಿದ್ದಾರೆ. ರಮೇಶನ ಜೀವನದ ಪರಿವರ್ತನೆಯನ್ನು ಬೆಂಬಲಿಸಿ ಆತನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಲು ಸ್ನೇಹಾಲಯದಿಂದ ಅಗತ್ಯದ ಮಾಹಿತಿಯ ಜೊತೆಗೆ ಒಂದು ತಿಂಗಳ ಔಷಧಿಯನ್ನು ನೀಡಲಾಗಿದೆ.