“The Journey Home: Snehalaya Charitable Trust Reunites Shiva with His Family”

/

November 7, 2024
In emotional reunion, G. Shiva, who went missing three months ago, was reunited with his family in Hyderabad.
Shiva, a resident of Madannapet, Saidabad, had been battling mental illness for six months. Lack of awareness led his family to believe he was possessed. Despite their efforts to care for him, Shiva went missing.
His family searched extensively, filing a police complaint at Saidabad Police Station. The police tracked his call records but found only relatives’ calls.On October 6, 2024, Snehalaya Charitable Trust, Kasargod, Kerala, rescued Shiva. He was admitted to Shraddha on October 21. After rehabilitation, Shiva was reunited with his overjoyed family.”We thought he was lost forever,” said Shiva’s brother-in-law. “Snehalaya’s efforts have given us our loved one back.”

ನವೆಂಬರ್ 7, 2024.

ಜಿ. ಶಿವರವರ ಭಾವನಾತ್ಮಕ ಪುನರ್ಮಿಲನ ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ ಮತ್ತು ಶ್ರದ್ದಾ ಫೌಂಡೇಶನ್ ಮುಂಬೈ ಅವರ ಜಂಟಿ ಪ್ರಯತ್ನದ ಫಲವಾಗಿ ಮೂರು ತಿಂಗಳ ಹಿಂದೆ ಕಾಣೆಯಾದ ಜಿ. ಶಿವ ಅವರನ್ನು ಹೈದರಾಬಾದ್‌ನಲ್ಲಿ ಅವರ ಕುಟುಂಬಕ್ಕೆ ಪುನಃ ಸೇರಿಸಲಾಯಿತು.
ಮದನ್ನಪೇಟೆ, ಸೈದಾಬಾದ್ ನಿವಾಸಿ ಶಿವ, ಕಳೆದ ಆರು ತಿಂಗಳುಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಶಿವನನ್ನು, ಅರಿವಿನ ಅಭಾವದಿಂದ, ಅವರ ಕುಟುಂಬವು ಆತನನ್ನು ಗ್ರಹದೋಷ ಪೀಡಿತ ಎಂದು ನಂಬಿತು. ಕುಟುಂಬದವರು ಎಷ್ಟೋ ಕಾಳಜಿ ವಹಿಸಿದರೂ ಒಂದು ದಿನ ಶಿವ ಮನೆಯಿಂದ ಕಾಣೆಯಾದರು.ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ಶಿವನ ಕುಟುಂಬಸ್ತರು ಆತನಿಗಾಗಿ ವ್ಯಾಪಕವಾಗಿ ಹುಡುಕಾಟ ನಡೆಸಿದರು. ಪೊಲೀಸ್ ತಂಡ ಆತನ ಕರೆ ದಾಖಲೆಗಳನ್ನು ಪರೀಕ್ಷಿಸಿಸಲು ಪ್ರಯತ್ನ ಪಟ್ಟರು ಆದರೆ ಕೇವಲ ಸಂಬಂಧಿಕರ ಕರೆಗಳನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಯಿತು.ಅಕ್ಟೋಬರ್ 6, 2024 ರಂದು, ಕಾಸರಗೋಡು, ಕೇರಳದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಶಿವ ಅವರನ್ನು ರಕ್ಷಿಸಿತು. ಅಕ್ಟೋಬರ್ 21 ರಂದು ಅವರಿಗೆ ಶ್ರದ್ಧಾ ಸಂಸ್ಥೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಯಿತು. ಕೆಲವು ದಿನಗಳ ಪುನರ್ವಸತಿಯ ನಂತರ, ಶಿವ ಅವರನ್ನು ಅತ್ಯಂತ ಸಂತೋಷದಿಂದ ಅವರ ಕುಟುಂಬಕ್ಕೆ ಮರು ಸೇರಿಸಲಾಯಿತು.ಪುನರ್ಮಿಲನದ ಸಮಯದಲ್ಲಿ ಶಿವನವರ ಮಾವ ಭಾವೋದ್ರೇಕರಾಗಿ “ಶಿವನನ್ನು ನಾವು ಶಾಶ್ವತವಾಗಿ ಕಳೆದುಕೊಂಡಿದ್ದೇವೆ ಎಂದು ಯೋಚಿಸಿದ್ದೆವು,” ಎಂದು ಹೇಳಿದರು. ಸ್ನೇಹಾಲಯ ಮತ್ತು ಶ್ರದ್ದಾ ಪೌನ್ಂಡೇಶನ್ ರವರ ಮಾನವೀಯತೆಯನ್ನು ಪ್ರಶಂಷಿಸುತ್ತಾ ದನ್ಯವಾದಗಳನ್ನು ಸಲ್ಲಿಸಿದರು.

 

Leave a Reply

Your email address will not be published. Required fields are marked *

Need Help?