Reunion of Krishnaswamy after 10 years

/

Reunion of Krishnaswamy after 10 years 

Krishnaswamy aged 45 was rescued by Snehalaya team from Thokkutu Bridge on 2nd April 2021.
He was suffering from sleeping disorder, poor hygiene and was badly in need of care and attention. Snehalaya turned out as a blessing in his life. He was given the best possible intensive care, love and attention that helped in his speedy recovery.
 Team Snehalaya looked for a way to locate his kinship and was able to trace it.
  Team Snehalaya came to know that he is from Chennai District of Tamilnadu and was able to contact his sister. Krishnaswamy is a married person having wife and  three sons. His sister assured us that they would take him to his wife and children who live in nearby village. They conducted counseling session to the sisters about his physical state and illness. Team Snehalaya also provided medicines for further treatment.
 The family members expressed their greatfullness and wishes to Snehalaya team which was sincerely and continuously working for the treatment and reunion of Krishnaswamy . Family members joyfully received him who was missing and rejoined them after10 years.
10 ವರ್ಷಗಳ ನಂತರ ತನ್ನ ಕುಟುಂಬವನ್ನು ಮರು ಸೇರ್ಪಡೆಗೊಂಡ ಕೃಷ್ಣಸ್ವಾಮಿಯ ಜೀವನ ಕಥೆ.
ತೊಕ್ಕೊಟ್ಟು ಸೇತುವೆ ಬಳಿ ವಿಚಿತ್ರವಾಗಿ ವರ್ತಿಸುತ್ತಿದ್ದ ಹಾಗೂ ಮಾನಸಿಕ ತೊಂದರೆಯಿಂದ  ಅಲೆದಾಡುತ್ತಿದ್ದ 45 ವರ್ಷದ ಕೃಷ್ಣಸ್ವಾಮಿ ಅವರನ್ನು ಸ್ನೇಹಾಲಯ ತಂಡದ ಸದಸ್ಯರು ಚಿಕಿತ್ಸೆ ಮತ್ತು ಆರೈಕೆಗಾಗಿ ಸ್ನೇಹಾಲಯಕ್ಕೆ ಕರೆ ತ೦ದರು.
ಅವರು ನಿದ್ರಾಹೀನತೆ ಹಾಗೂ ವೈಯುಕ್ತಿಕ ನೈರ್ಮಲ್ಯದ  ಕೊರತೆಯಿಂದ ಬಳಲುತ್ತಿದ್ದು, ಆರೈಕೆ ಮತ್ತು ವಿಶೇಷ ಕಾಳಜಿಯ ಅಗತ್ಯವಿತ್ತು.
 ಸ್ನೇಹಾಲಯ ಸಂಸ್ಥೆಯು ಅವರ ಜೀವನದಲ್ಲಿ ಒಂದು ವರವಾಗಿ ಹೊರಹೊಮ್ಮಿತು. ಅವರಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ, ಪ್ರೀತಿ ಮತ್ತು ಚಿಕಿತ್ಸೆಯನ್ನು ನೀಡಲಾಯಿತು. ಇದು ಅವರ ತ್ವರಿತ ಚೇತರಿಕೆಗೆ ಸಹಾಯ ಮಾಡಿತು. ಸ್ನೇಹಾಲಯ ತಂಡದ ನಿರಂತರ ಪ್ರಯತ್ನದಿಂದ ಆತನ ಊರು, ಕುಟು೦ಬದವರನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಅವರು ತಮಿಳುನಾಡಿನ ಚೆನ್ನೈ ನಿವಾಸಿಯೆಂದು ತಿಳಿಯಲಾಯಿತು ಹಾಗೂ ಅವರ ಸಹೋದರಿಯ ಸಂಪರ್ಕ ದೊರಕಿತು.
   ಅವರು ವಿವಾಹಿತರಾಗಿದ್ದು, ಮೂರು ಗಂಡು ಮಕ್ಕಳ ತಂದೆಯಾಗಿದ್ದಾರೆOದು ಸ್ನೇಹಾಲಯಕ್ಕೆ ತಿಳಿಯಿತು. ಅವರ ಸಹೋದರಿಯರು ಅವರನ್ನು ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಅವರ ಹೆಂಡತಿ ಮತ್ತು ಮಕ್ಕಳ ಬಳಿಗೆ ಕರೆದೊಯ್ಯುವುದಾಗಿ ಭರವಸೆ ನೀಡಿದರು. ಸ್ನೇಹಾಲಯ ತಂಡವು ಅವರ ದೈಹಿಕ ಸ್ಥಿತಿ ಮತ್ತು ಸಮಸ್ಯೆಯ ಬಗ್ಗೆ ಅವರ ಸಹೋದರಿಯರಿಗೆ ಸಮಾಲೋಚನೆ ನಡೆಸಿದರು. ಹೆಚ್ಚಿನ ಚಿಕಿತ್ಸೆಗೆ ಔಷಧಗಳನ್ನೂ ನೀಡಲಾಯಿತು.
 ಈ ಕಾರ್ಯಕ್ರಮಕ್ಕಾಗಿ ಪ್ರಾಮಾಣಿಕವಾಗಿ ಮತ್ತು ನಿರಂತರವಾಗಿ ಶ್ರಮಿಸುತ್ತಿರುವ ಸ್ನೇಹಾಲಯ ತಂಡಕ್ಕೆ ಕುಟುಂಬದ ಸದಸ್ಯರು ತಮ್ಮ ಕ್ರತಜ್ಞತೆ ಯನ್ನು ಮತ್ತು ಹಾರೈಕೆಗಳನ್ನು ವ್ಯಕ್ತಪಡಿಸಿದರು. 10 ವರ್ಷಗಳಿಂದ ನಾಪತ್ತೆಯಾಗಿದ್ದ ಕೃಷ್ಣಸ್ವಾಮಿಯವರನ್ನು ಕುಟುಂಬಸ್ಥರು ಹರ್ಷದಿಂದ ಬರಮಾಡಿಕೊಂಡು.
 ಹೀಗೆ ಮಾನಸಿಕ ತೊಂದರೆಗಳಿಂದ  ಕುಟುಂಬದಿಂದ ದೂರವಾಗಿ
ನಿರ್ಗತಿಕನಾಗಿ, ಸ್ನೇಹಾಲಯ ಸಂಸ್ಥೆಯ ಮೂಲಕ  ದಶಕದ ಅವಧಿಯ ನಂತರ ಮತ್ತೆ ತನ್ನ ಕುಟುಂಬವನ್ನು ಸೇರಿದರು.

Leave a Reply

Your email address will not be published. Required fields are marked *

Need Help?