Anil kumar aged 27 was rescued by Snehalaya team from the street of Nandigudda, Mangalore on 1st of July 2021.
He was suffering from psychiatric illness. Along with the treatment, Anil Kumar was encouraged to participate in a number of indoor and outdoor activities. As a part of treatment he also attended counselling sessions . After his active, scheduled and therapeutic life at Snehalaya he strated to recover and one fine day he shared about his kinship.
Snehalaya with the kind help and interest taken by Shraddha Rehabilitation Foundation, Mumbai, was successful in locating his family at Uttar Pradesh.
Anil had mother and a brother, were searching for Anil Kumar who was missing since one and a half year due to mental illness.
Now his family was overwhelmed with joy and happiness to have him back. And they expressed their sincere thanks and great fullness for all the efforts made by Snehalaya in this process.
27 ರ ವಯೋಮಿತಿಯ ಅನಿಲ್ ಕುಮಾರ್ ಉತ್ತರ ಪ್ರದೇಶದಲ್ಲಿನ ಅವರ ಕುಟುಂಬದೊಂದಿಗೆ ಮರುಸೇರ್ಪಡೆಗೊಂಡ ಸಂತೋಷದಾಯಕ ಘಟನೆ .
2021 ರ ಜುಲೈ 1 ರಂದು ಮಂಗಳೂರಿನ ನಂದಿಗುಡ್ಡದ ಬೀದಿಯಿಂದ 27 ವರ್ಷ ವಯಸ್ಸಿನ ಅನಿಲ್ ಕುಮಾರ್ ಅವರನ್ನು ಸ್ನೇಹಾಲಯ ತಂಡವು ರಕ್ಷಿಸಿತು.
ದಾಖಲಾಗುವ ಸಮಯದಲ್ಲಿ ಅವರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರು.
ಸ್ನೇಹಾಲಯದಲ್ಲಿ ಆರೈಕೆ ಮತ್ತು ಚಿಕಿತ್ಸೆಯ ಜೊತೆಗೆ, ಅವರು ಹಲವಾರು ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಚಿಕಿತ್ಸೆಯ ಭಾಗವಾಗಿ ಹಲವಾರು ಆಪ್ತ ಸಮಾಲೋಚನೆಗಳನ್ನು ಸಹ ನಡೆಸಲಾಯಿತು.
ಸ್ನೇಹಾಲಯದಲ್ಲಿ ಸಕ್ರಿಯ, ನಿಗದಿತ ಮತ್ತು ಚಿಕಿತ್ಸಕ ಜೀವನ ಶೈಲಿಯ ನಂತರ ಅವರು ಚೇತರಿಸಿಕೊಳ್ಳಲು ಪ್ರಯತ್ನಿಸಿದರು. ಒಂದು ದಿನ ಆಪ್ತ ಸಮಾಲೋಚನೆಯಲ್ಲಿ ಅವರು ತಮ್ಮ ಊರು ಹಾಗೂ ಕೌಟುಂಬಿಕ ವಿವರವನ್ನು ಹಂಚಿಕೊಂಡರು.
ಸ್ನೇಹಾಲಯವು ಮುಂಬೈನ ಶ್ರದ್ಧಾ ಪುನರ್ವಸತಿ ಕೇಂದ್ರದ ಸಹಾಯ ಮತ್ತು ವಿಶೇಷ ಆಸಕ್ತಿಯಿಂದ ಉತ್ತರ ಪ್ರದೇಶದಲ್ಲಿನ ಅನಿಲ್ ಕುಮಾರ್ ಅವರ ಕುಟುಂಬ ವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು. ಅನಿಲ್ ಕುಮಾರ್ ರವರಿಗೆ ತಾಯಿ ಮತ್ತು ಸಹೋದರನಿದ್ದು, ಮಾನಸಿಕ ಅಸ್ವಸ್ಥತೆಯಿಂದ ಒಂದೂವರೆ ವರ್ಷದಿಂದ ಆತ ಕಾಣೆಯಾಗಿರುವುದಾಗಿ ಅವರು ತಿಳಿಸಿರುತ್ತಾರೆ . ಅವರು ಕಾಣೆಯಾದ ನಂತರ ಅವರು ಅವನನ್ನು ಹುಡುಕಲು ಪ್ರಯತ್ನಿಸಿದರು, ಆದರೆ ಅವರಿಗೆ ಅವನನ್ನು ಹುಡುಕಲಾಗಲಿಲ್ಲ. ಅವನ ಕುಟುಂಬವು
ಅವನನ್ನು ಮರಳಿ ಪಡೆಯಲು ಸಂತೋಷಭರಿತವಾಗಿತ್ತು.
ವರ್ಷಗಳ ಹಿಂದೆ ಕಳೆದು ಹೋದ ಅನಿಲ್ ಕುಮಾರ್ ನನ್ನು ಮತ್ತೆ ಸೇರಲು ಸ್ನೇಹಾಲಯ ಸಂಸ್ಥೆಯು ಮಾಡಿದ ಎಲ್ಲಾ ಪ್ರಯತ್ನಗಳಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.