Najma returns home joyfully on 10-12-2021 after 2 years of missing from her family at Tamilnadu.

/

Najma a woman with Psycho – Social problems was wandering  at Mangalore Railway station. Snehalaya team rescued her and  admitted her at Psycho- Social Rehabilitation Centre for treatment  on 4/6/19. During her medical checkup it is observed that she has psychological and physical illness.

 According to her illness, treatment was provided along with the counselling and various indoor and outdoor therapeutic activities. After her participation at various activities and proper medication it is observed that she has improved on her health aspects.
One fine day she shared her family details. With this information team Snehalaya with the support of Shradha Rehabilitation foundation at Mumbai made efforts to find out her family.They could reach and met her brother at Tirpur of Tamilnadu. He shared that she was suffering from mental illness and went on missing two years back at the time of her treatment in Chennai. He said that they had searched for her but couldn’t find her. She is married and is a mother of a girl child and was abandoned by her husband because of psychiatric problems.
The family was delighted to see her back with better mental state. The family was
grateful towards Snehalaya and Shraddha Centres for all their efforts in treating Najma and reuniting her with the family at Tamilnadu.
ರಸ್ತೆಬದಿಯಿಂದ ರಕ್ಷಿಸಲ್ಪಟ್ಟ ನಜ್ಮಾರವರು  2 ವರ್ಷಗಳ  ಬಳಿಕ ಮತ್ತೆ ತಮಿಳುನಾಡಿನ ತನ್ನ ಕುಟುಂಬವನ್ನು ದಿನಾಂಕ 10-12-2021ರಂದು ಸೇರಿದ ಸುಮಧುರ ಕ್ಷಣ.
ಮನೋದೌರ್ಬಲ್ಯ ಹಾಗೂ ಅನಾರೋಗ್ಯದೊಂದಿಗೆ ಬೀದಿ ಬದಿಯಲ್ಲಿ ಅಲೆದಾಡುತ್ತಿದ್ದ ಮಹಿಳೆ ನಜ್ಮಾ ಅವರನ್ನು ಮಂಗಳೂರು ರೈಲು ನಿಲ್ದಾಣದ ಬಳಿಯಿಂದ ಸ್ನೇಹಾಲಯದ ತಂಡವು ರಕ್ಷಿಸಿ ಚಿಕಿತ್ಸೆಗಾಗಿ 4/6/19 ರಂದು  ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಕರೆತಂದರು.
 ಸುಮಾರು 52 ರ ವಯೋಮಿತಿಯ ನಜ್ಮಾರವರ ದಾಖಲಾತಿ ಸಮಯದಲ್ಲಿ ಅವರು ಅನೇಕ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದದನ್ನು ವೈದ್ಯಕೀಯ ತಪಾಸಣಾ ಸಮಯದಲ್ಲಿ ಕಂಡುಕೊಳ್ಳಲಾಯಿತು.
 ಇದರಂತೆ ಅವರಿಗೆ ಅವಶ್ಯಕ ಚಿಕಿತ್ಸೆಯೊಂದಿಗೆ ಹಂತ ಹಂತವಾಗಿ ಆಪ್ತ ಸಮಾಲೋಚನೆ, ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆಗಳನ್ನು ನಡೆಸಲಾಯಿತು. ಇದರಿಂದಾಗಿ ಅವರು ತನ್ನ ಅರೋಗ್ಯದಲ್ಲಿ ಉತ್ತಮ ಸುಧಾರಣೆಯನ್ನು ತೋರಿದರು.
ಒಂದು ದಿನ ಆಪ್ತ ಸಮಾಲೋಚನೆಯಲ್ಲಿ ಅವರು ತನ್ನ ಕೌಟುಂಬಿಕ ಮಾಹಿತಿಯನ್ನು ನೀಡಿದರು. ಇದರಂತೆ ಮುಂಬೈನ ಶ್ರದ್ಧಾ ಪುನರ್ವಸತಿ ಕೇಂದ್ರದ ಸಹಕಾರದೊಂದಿಗೆ ತಮಿಳುನಾಡಿನ ತಿರುಪುರದಲ್ಲಿನ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಲಾಯಿತು.
 ನಜ್ಮಾರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು,  ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಚಿಕಿತ್ಸೆ ನಡೆಯುತ್ತಿದ್ದ ವೇಳೆ ನಾಪತ್ತೆಯಾಗಿದ್ದು ಆಕೆಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ ಎಂದು ಸಹೋದರ ತಿಳಿಸಿದರು. ಆಕೆ ವಿವಾಹಿತೆಯಾಗಿದ್ದು ಒಂದು ಹೆಣ್ಣು ಮಗುವಿನ ತಾಯಿಯಾಗಿರುತ್ತಾರೆ. ಆಕೆಯ ಮಾನಸಿಕ ಸಮಸ್ಯೆಗಳಿಂದಾಗಿ  ಪತಿಯು ತೊರೆದಿದ್ದಾರೆ ಎಂದು ಮಾಹಿತಿ ನೀಡಿದರು.ಎರಡು ವರ್ಷಗಳ ಸುದೀರ್ಘ ಸಮಯದ ನಂತರ ಮತ್ತು ಉತ್ತಮ ಮಾನಸಿಕ ಸ್ಥಿತಿಯಲ್ಲಿ ನಜ್ಮಾರನ್ನು ನೋಡಿದ ಕುಟುಂಬದ ಸದಸ್ಯರು ಸಂತೋಷಪಟ್ಟರು. ಉತ್ತಮ ಚಿಕಿತ್ಸೆಯೊಂದಿಗೆ ನಜ್ಮಾರನ್ನು ಮತ್ತೆ ಅವರ ಕುಟುಂಬದೊಂದಿಗೆ ಸೇರುವಂತೆ ಮಾಡಿದ ಸ್ನೇಹಾಲಯ ಹಾಗೂ ಶ್ರದ್ಧಾ ಕೇಂದ್ರಕ್ಕೆ ಅವರೆಲ್ಲರು ಕೃತಜ್ಞತೆ ಸಲ್ಲಿಸಿದರು

 

Leave a Reply

Your email address will not be published. Required fields are marked *

Need Help?