26th January India’s Republic day was celebrated with great zeal at Snehalaya, Manjeshwar.
Secretary Mrs Olivia K. L, Trustee, Mr Jovial Crasta, graced the occasion.
Dr Mohammad Shalimar, renowned Ayurvedic Doctor since 30 years, unfurled the national flag. It filled the hearts of everyone present with patriotism all joined together to sing Vande Mataram and National Anthem.
Mrs Savitha PRO was eloquent in her comparing the programme. Mrs Veena Dsouza Manager ( Administration) welcomed everyone. Mr. Harish gave the commands to make us feel the rhythm of the day. The chief guest praised and congratulated Br. Joseph Crasta and team Snehalaya for the wonderful service we are doing for the downtrodden and abandoned. He also stated that it’s not an easy work to take care of such people and that too in this remote area. Added feather in our cap when he called Snehalaya a blessing to our Society . Miss Bibina Psychiatric Social Worker offered the vote of thanks.
Winners of the speech competition held on the occasion of Republic Day were honoured by the guest.
ಸ್ನೇಹಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ :
ದಿನಾಂಕ 26-01-2022 ರಂದು ಮಂಜೇಶ್ವರದ ಸ್ನೇಹಾಲಯ – ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹಾಗೂ ಹಿರಿಯ ನಾಗರಿಕರ ಆರೈಕೆ ಕೇಂದ್ರದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದು ಕಳೆದ ಸುಮಾರು ಮೂವತ್ತು ವರ್ಷಗಳಿಂದ ಸೇವೆ ನೀಡುತ್ತಿರುವ ಡಾಕ್ಟರ್ ಮಹಮದ್ ಶಾಲಿಮಾರ್ ರವರು ಆಗಮಿಸಿ ಧ್ವಜವಂದನಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಅಲ್ಲದೆ ಭಾರತ ದೇಶದ ಹೂವಿನ ತೋಟದಲ್ಲಿ ಬೇರೆಬೇರೆ ಹೂವುಗಳು ಅರಳಿ ಸುಗಂಧವನ್ನು ಸೂಸುವಂತೆ ಸ್ನೇಹಾಲಯದಲ್ಲಿ ಯಾವುದೇ ಜಾತಿ ಮತ ಧರ್ಮದ ಭೇದವಿಲ್ಲದೆ ಎಲ್ಲರೂ ಪರಸ್ಪರ ಪ್ರೀತಿ ಹಾಗೂ ಭ್ರಾತೃತ್ವ ಭಾವನೆಯೊಂದಿಗೆ ಉತ್ತಮ ಜೀವನವನ್ನು ನಡೆಸುತ್ತಿರುವುದು ನಮ್ಮ ಸಮಾಜಕ್ಕೆ ಮಾದರಿ ಎಂಬುದಾಗಿ ತಿಳಿಸಿದರು. ಈ ಸ್ನೇಹದ ಮನೆಯನ್ನು ಆರಂಭಿಸಿ ಸುಮಾರು 300 ರಷ್ಟು ಸಹೋದರ ಸಹೋದರಿಯರಿಗೆ ಆಶ್ರಯ ಹಾಗೂ ಚಿಕಿತ್ಸೆಯನ್ನು ನೀಡುತ್ತಿರುವ ಬ್ರದರ್ ಜೋಸೆಫ್ ಹಾಗೂ ಅವರ ತಂಡವನ್ನು ಅಭಿನಂದಿಸಿ ಅವರ ಶ್ರಮವನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ಸ್ನೇಹಾಲಯದ ಟ್ರಸ್ಟಿಗಳಾದ ಶ್ರೀಮತಿ ಒಲಿವಿಯ ಕೆ. ಎಲ್. ಹಾಗೂ ಶ್ರೀ ಜೋವಿಯಲ್ ಕ್ರಾಸ್ತ ಇವರು ಉಪಸ್ಥಿತರಿದ್ದರು.ಗಣರಾಜ್ಯೋತ್ಸವ ಪ್ರಯುಕ್ತ ಸ್ನೇಹಾಲಯದ ನಿವಾಸಿಗಳಿಗೆ ಏರ್ಪಡಿಸಲಾದ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.ಶ್ರೀಮತಿ ವೀಣಾ ಇವರು ಸ್ವಾಗತಿಸಿ, ಕುಮಾರಿ ಬಿಬಿನ ವಂದನಾರ್ಪಣೆಯನ್ನು ನೆರವೇರಿಸಿದರು. ಶ್ರೀಮತಿ ಸವಿತಾ ಡಿಸೋಜ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.