Under the Pratyasha project, on 24th January 2022, Madhavi was brought to Snehalaya Psycho Social Rehabilitation Centre for her reunion process, from *Snehabhavan Arayangad, kannur. After her admission at Snehalaya she was made to participate in counselling sessions and therapeutic activities. As per the information shared by Madhavi, Team Snehalaya contacted her sister Lalitha residing at Dharawad. And after the telephonic conversation, Team Snehalaya started their journey to reunite Madhavi on 2nd February 2022 and reached Malapur, Tarihal, Hubli taluk at Dharawad on 3rd February 2022 .
It was indeed a joyous moment not only for her family but for the entire village to see her after 15 years and that too in a good mental and physical condition.
Her family shared that 15 years back Madhavi went on missing and they put all their efforts to find her. Even after lodging a police complaint, they were not able to reach her and lost all hopes to see her again. And after 15 years, when they received their sister, they couldn’t believe themselves and all were happy to welcome her back.
According to her family she is married and a mother of two children. They don’t have any information about her husband who left the children and went off after her missing. Her sister Lalitha who is an Asha Worker and her brother Bhumappa a painter, are taking care of her children.
Madhavi is reunited with her children and with her siblings for a joyful family life. All were grateful towards Snehabhavan and Snehalaya for taking care of Madhavi and reuniting her.
15 ವರ್ಷಗಳ ನಂತರ ಮಾಧವಿಯು ಧಾರವಾಡದಲ್ಲಿನ ತನ್ನ ಕುಟುಂಬವನ್ನು ಮತ್ತೆ ಸೇರಿದ ಸಂತಸದ ಕ್ಷಣ.
ಪ್ರತ್ಯಶಾ ಯೋಜನೆಯಡಿ, 24ನೇ ಜನವರಿ 2022 ರಂದು, ಸ್ನೇಹಭವನ ಅರೇಯಂಗಾಡ್, ಕಣ್ಣೂರಿನಿಂದ ಮಾಧವಿಯನ್ನು ಅವರ ಕುಟುಂಬದೊಂದಿಗೆ ಮರುಸೇರ್ಪಡೆಗೊಳಿಸುವ ಪ್ರಕ್ರಿಯೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಕರೆತರಲಾಯಿತು. ಸ್ನೇಹಾಲಯದಲ್ಲಿ ಪ್ರವೇಶ ಪಡೆದ ನಂತರ ಆಕೆಯನ್ನು ಸಮಾಲೋಚನೆ ಮತ್ತು ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಮಾಧವಿ ಹಂಚಿಕೊಂಡ ಮಾಹಿತಿಯಂತೆ ಸ್ನೇಹಾಲಯ ತಂಡವು ಧಾರವಾಡದಲ್ಲಿ ನೆಲೆಸಿರುವ ಆಕೆಯ ಸಹೋದರಿ ಲಲಿತಾ ಅವರನ್ನು ಸಂಪರ್ಕಿಸಿತು . ಅವರೊಡನೆ ನಡೆಸಿದ ದೂರವಾಣಿ ಸಂಭಾಷಣೆಯ ನಂತರ, ಸ್ನೇಹಾಲಯ ತಂಡವು ಮಾಧವಿಯನ್ನು 2 ಫೆಬ್ರವರಿ 2022 ರಂದು ಮತ್ತೆ ಅವರ ಕುಟುಂಬದೊಂದಿಗೆ ಒಂದಾಗಿಸಲು ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು. 3 ನೇ ಫೆಬ್ರವರಿ 2022 ರಂದು ಧಾರವಾಡದ ಮಾಲಾಪುರ, ತಾರಿಹಾಳ್ ನಲ್ಲಿನ ಸಹೋದರಿಯ ಕುಟುಂಬವನ್ನು ತಲುಪಿತು.
ಸುಮಾರು 15 ವರ್ಷಗಳ ಸುಧೀರ್ಘ ಅವಧಿಯ ನಂತರ ಆಕೆಯನ್ನು ಉತ್ತಮ ಮಾನಸಿಕ ಮತ್ತು ದೈಹಿಕ ಸ್ಥಿತಿಯಲ್ಲಿ ನೋಡಿದ್ದು ಆಕೆಯ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಗ್ರಾಮಕ್ಕೆ ಸಂತೋಷದ ಕ್ಷಣವಾಗಿತ್ತು.
15 ವರ್ಷಗಳ ಹಿಂದೆ ಮಾಧವಿ ನಾಪತ್ತೆಯಾಗಿದ್ದರು ಮತ್ತು ಆಕೆಯನ್ನು ಹುಡುಕಲು ಅವರು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು ಎಂದು ಆಕೆಯ ಕುಟುಂಬದವರು ತಿಳಿಸಿದರು . ಪೊಲೀಸರಿಗೆ ದೂರು ನೀಡಿದ ನಂತರವೂ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಮತ್ತು ಅವರೆಲ್ಲರು ಆಕೆಯನ್ನು ಮತ್ತೆನೋಡುವ ಭರವಸೆಯನ್ನು ಕಳೆದುಕೊಂಡರು. ಇದೀಗ 15 ವರ್ಷಗಳ ನಂತರ, ಅವರು ತಮ್ಮ ಸಹೋದರಿಯನ್ನು ಸ್ವೀಕರಿಸಿದಾಗ, ಅವರಿಗೆ ತಮ್ಮನ್ನು ತಾವೇ ನಂಬಲು ಸಾಧ್ಯವಾಗಲಿಲ್ಲ ಮತ್ತು ಎಲ್ಲರೂ ಆಕೆಯನ್ನು ಸ್ವಾಗತಿಸಲು ಸಂತೋಷಪಟ್ಟರು.
ಅವರ ಕುಟುಂಬದ ಪ್ರಕಾರ ಅವರು ವಿವಾಹಿತರಾಗಿದ್ದು, ಎರಡು ಮಕ್ಕಳ ತಾಯಿಯಾಗಿದ್ದರು. ನಾಪತ್ತೆಯಾದ ನಂತರ ಮಕ್ಕಳನ್ನು ಬಿಟ್ಟು ಹೋದ ಆಕೆಯ ಪತಿಯ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಆಶಾ ಕಾರ್ಯಕರ್ತೆಯಾಗಿರುವ ಅವರ ಸಹೋದರಿ ಲಲಿತಾ ಮತ್ತು ಅವರ ಸಹೋದರ ಭೂಮಪ್ಪ ಪೇಂಟರ್ ಆಗಿದ್ದು, ಅವರ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.
ಮಾಧವಿ ತನ್ನ ಮಕ್ಕಳೊಂದಿಗೆ ಮತ್ತು ತನ್ನ ಒಡಹುಟ್ಟಿದವರೊಂದಿಗೆ ಸಂತೋಷದಾಯಕ ಕುಟುಂಬ ಜೀವನಕ್ಕಾಗಿ ಮತ್ತೆ ಸೇರಿಕೊಂಡಳು. ಮಾಧವಿಯನ್ನು ನೋಡಿಕೊಂಡ ಮತ್ತು ಆಕೆಯನ್ನು ಮತ್ತೆ ಕುಟುಂಬದೊಂದಿಗೆ ಒಂದುಗೂಡಿಸಿದ ಸ್ನೇಹಭವನ ಮತ್ತು ಸ್ನೇಹಾಲಯಕ್ಕೆ ಎಲ್ಲರೂ ಕೃತಜ್ಞರಾಗಿದ್ದರು.