Happy returning of Chandrakala to her home @ Hassan after 8 years of Missing.

/

Chandrakala aged 31, named as Manjunatha at Snehabhavan, Arayangadu Kannur was brought to Snehalaya Psycho Social Rehabilitation Centre Manjeshwar on 24/01/22 under the Pratyasha Project for  reunion process.

With the continuous efforts of team Snehalaya , she was made to participate in different therapeutic  activities, counselling sessions and she shared the few details about her hometown. And after few days, in next counselling session, she shared few more information and team Snehalaya could able to get the contact numbers of her family members.
Through the telephonic conversation with her brother and sister, our team journeyed to her hometown at Megal, Vaddarhatti, Arasikere Tq, Hassan Dist, on 8/02/2022. On reaching to her native, she received a hearty welcome by her brother and sister. They told that, she developed the psychiatric illness after her delivery. She was abandoned by her husband. She is having one son who is studing in 7 th std. She went missing around 8 years back. Her mother also had psychiatric problems.
Team Snehalaya provided medicines and prescription for further treatment. Guided them about her care and treatment.
Family members were grateful towards Snehabhavan and Snehalaya for their selfless efforts in taking care of Chandrakala and reuniting with her family at Hassan.

ನಾಪತ್ತೆಯಾಗಿ 8 ವರ್ಷಗಳ ನಂತರ ಚಂದ್ರಕಲಾರವರು ಮತ್ತೆ ಹಾಸನದ ತನ್ನ ಮನೆಯನ್ನು ಸೇರಿದ ಸಂತೋಷದ ಕ್ಷಣ .

31 ವರ್ಷ ಪ್ರಾಯದ ಚಂದ್ರಕಲಾ ಅವರನ್ನು ಅರೆಯಂಗಾಡು ಕಣ್ಣೂರಿನ ಸ್ನೇಹಭವನದಲ್ಲಿ ಮಂಜುನಾಥ ಎಂದು ಹೆಸರಿಸಲಾಗಿದ್ದು, ಪ್ರತ್ಯಶಾ ಯೋಜನೆಯಡಿಯಲ್ಲಿ 24/01/22 ರಂದು  ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಕುಟುಂಬದೊಂದಿಗೆ ಪುನರ್ಮಿಲನ ಪ್ರಕ್ರಿಯೆಗಾಗಿ ಕರೆತರಲಾಯಿತು.
ಸ್ನೇಹಾಲಯ ತಂಡದ ನಿರಂತರ ಪ್ರಯತ್ನದಿಂದ ಆಕೆಯನ್ನು ವಿವಿಧ ಚಿಕಿತ್ಸಕ ಚಟುವಟಿಕೆಗಳಲ್ಲಿ, ಸಮಾಲೋಚನೆಗಳಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಇದರಂತೆ ಅವರು ತಮ್ಮ ಊರಿನ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡರು. ಕೆಲವು ದಿನಗಳ ನಂತರ ಅವರುಇನ್ನೂ ಕೆಲವು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡರು ಮತ್ತು ಸ್ನೇಹಾಲಯ ತಂಡವು ಅವರ ಕುಟುಂಬ ಸದಸ್ಯರ ಸಂಪರ್ಕ ಸಂಖ್ಯೆಗಳನ್ನು ಪಡೆಯಲು ಸಾಧ್ಯವಾಯಿತು.
ಆಕೆಯ ಸಹೋದರ ಮತ್ತು ಸಹೋದರಿಯರೊಂದಿಗೆ ದೂರವಾಣಿ ಸಂಭಾಷಣೆಯ ಮೂಲಕ, ನಮ್ಮ ತಂಡವು 8/02/2022 ರಂದು ಹಾಸನ ಜಿಲ್ಲೆಯ, ಅರಸೀಕೆರೆ ತಾಲೂಕಿನ ಮೇಗಲ್, ವಡ್ಡರಹಟ್ಟಿಯಲ್ಲಿನ ಅವರ ಹುಟ್ಟೂರಿಗೆ ಪ್ರಯಾಣ ಬೆಳೆಸಿತು. ಆಕೆಯನ್ನು ಸಹೋದರ ಮತ್ತು ಸಹೋದರಿ ಹೃತ್ಪೂರ್ವಕವಾಗಿ ಸ್ವಾಗತಿಸಿದರು . ಹೆರಿಗೆಯ ನಂತರ ಆಕೆಗೆ ಮನೋರೋಗ ಕಾಣಿಸಿಕೊಂಡಿದ್ದು, ಇದರಿಂದ ಆಕೆ ತನ್ನ ಪತಿಯಿಂದ ಪರಿತ್ಯಕ್ತಳಾಗಿದ್ದಳು. ಆಕೆಗೆ ಒಬ್ಬ ಮಗನಿದ್ದು, ಅವರು 7ನೇ ತರಗತಿಯಲ್ಲಿ ಓದುತ್ತಿರುವುದಾಗಿ ತಿಳಿಸಿದರು.. ಆಕೆ ಸುಮಾರು 8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದು,ಆಕೆಯ ತಾಯಿಗೂ ಮಾನಸಿಕ ಸಮಸ್ಯೆಗಳಿರುವುದಾಗಿ ಅವರು ಮಾಹಿತಿ ನೀಡಿದರು.
ಸ್ನೇಹಾಲಯ ತಂಡವು ಮುಂದಿನ ಚಿಕಿತ್ಸೆಗಾಗಿ ಔಷಧಗಳು ಮತ್ತು ಪ್ರಿಸ್ಕ್ರಿಪ್ಷನ್ ಅನ್ನು ಒದಗಿಸಿತು. ಆಕೆಯ ಆರೈಕೆ ಮತ್ತು ಚಿಕಿತ್ಸೆಯ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಿದರು.
ಚಂದ್ರಕಲಾ ಅವರನ್ನು ನೋಡಿಕೊಳ್ಳಲು ಮತ್ತು ಹಾಸನದಲ್ಲಿ ಅವರ ಕುಟುಂಬದೊಂದಿಗೆ ಮತ್ತೆ ಸೇರಲು ನಿಸ್ವಾರ್ಥ ಪ್ರಯತ್ನಗಳನ್ನು ನಡೆಸಿದ  ಸ್ನೇಹಭವನ ಮತ್ತು ಸ್ನೇಹಾಲಯಕ್ಕೆ  ಕುಟುಂಬದ ಸದಸ್ಯರು ಕೃತಜ್ಞರಾಗಿದ್ದರು.

Leave a Reply

Your email address will not be published. Required fields are marked *

Need Help?