Manjush joyfully rejoined his family at Jharkhand after 11 years.

/

Manjush aged 46 was brought to Snehalaya from Snehabhavan Rehabilitation Centre of Kannur on 15/02/22 under Pratyasha Project for the reunion process.

After his admission at Snehalaya his mental health improved and the Re-Union process was started by team Snehalaya. As the treatment and counselling sessions were conducted at Snehalaya, one fine day he shared the details of his family.
He told that he is from Gemon colony, Marafari, Siwandih, Bokaro of Jharkhand State. After verifying these details team Snehalaya was successful in contacting his brother.
  His brother named Munna joyfully came to Snehalaya on 9th March 2022 to take his brother home after 11 long years. He told that Manjush has developed mental illness long back and was under treatment. Suddenly he went on missing and they were not able trace him. After 11 long years as they received a call  from Snehalaya, they couldn’t believe that Manjush  is alive.  
It was a heart touching moment to see the joy and happiness in their eyes. His brother expressed his gratefulness towards Snehabhavan and Snehalaya for their selfless service.
ಮಂಜುಷ್ 11 ವರ್ಷಗಳ ನಂತರ ಜಾರ್ಖಂಡ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಮರುಸೇರ್ಪಡೆಗೊಂಡ ಸಂತೋಷದ ಘಟನೆ.
46 ವರ್ಷ ವಯಸ್ಸಿನ ಮಂಜುಷ್ ಅವರನ್ನು  ತನ್ನ ಕುಟುಂಬದವರೊಂದಿಗೆ ಮರುಸೇರ್ಪಡೆಗೊಳಿಸಲು ಪ್ರತ್ಯಶಾ ಯೋಜನೆಯಡಿ 15/02/22 ರಂದು ಕಣ್ಣೂರಿನ ಸ್ನೇಹಭವನ ಪುನರ್ವಸತಿ ಕೇಂದ್ರದಿಂದ ಸ್ನೇಹಾಲಯಕ್ಕೆ ಕರೆತರಲಾಯಿತು.
ಸ್ನೇಹಾಲಯದಲ್ಲಿ  ದಾಖಲಾದ ನಂತರ, ಆತನ ಮಾನಸಿಕ ಆರೋಗ್ಯಕ್ಕಾಗಿ  ಚಿಕಿತ್ಸೆಯನ್ನು  ಮುಂದುವರೆಸಿ ಆಗಾಗ್ಗೆ ಆಪ್ತಸಮಾಲೋಚನೆಯನ್ನು ನಡೆಸಲಾಯಿತು. ಒಂದು ದಿನ ಆಪ್ತಸಮಾಲೋಚನೆಯಲ್ಲಿ  ಆತನು ತನ್ನ ಕುಟುಂಬದ ವಿವರಗಳನ್ನು ಹಂಚಿಕೊಂಡನು .
ಮಂಜುಷ್, ಜೆಮನ್ ಕಾಲೋನಿ, ಮರಫರಿ, ಸಿವಾಂಡಿಹ್, ಜಾರ್ಖಂಡ್ ರಾಜ್ಯದ ಬೊಕಾರೊದಿಂದ ಬಂದವರು ಎಂದು ತಿಳಿಸಿದರು. ಈ ವಿವರಗಳನ್ನು ಪರಿಶೀಲಿಸಿದ ಸ್ನೇಹಾಲಯ ತಂಡ, ಆತನ ಸಹೋದರನನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಯಿತು.
  ವಿಷಯ ತಿಳಿದ ಆತನ ಸಹೋದರ ಮುನ್ನಾ ಎಂಬುವವರು, 11 ವರ್ಷಗಳ ನಂತರ ತನ್ನ ಸಹೋದರನನ್ನು ಮನೆಗೆ ಕರೆದುಕೊಂಡು ಹೋಗಲು 2022 ರ ಮಾರ್ಚ್ 9  ರಂದು ಸ್ನೇಹಾಲಯಕ್ಕೆ ಬಂದರು. ಆತನ ಪ್ರಕಾರ, ಮಂಜುಷ್ ಗೆ ಬಹಳ ಹಿಂದೆಯೇ ಮಾನಸಿಕ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದರು . ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಆತನನ್ನು ಪತ್ತೆಹಚ್ಚಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದಾಗಿ ತಿಳಿಸಿದರು.
11 ವರ್ಷಗಳ ನಂತರ ಕುಟುಂಬದ ಸದಸ್ಯರಿಗೆ ಸ್ನೇಹಾಲಯದಿಂದ ಮಂಜುಷ್ ಬಗ್ಗೆ ಕೇಳಿ ಕರೆ ಬಂದಿದ್ದನ್ನು ಕಂಡು,ಅವರೆಲ್ಲರಿಗೆ ಆತನು ಬದುಕಿದ್ದಾನೆಂದು ನಂಬಲಾಗಲಿಲ್ಲ. ತಕ್ಷಣವೇ ಸಹೋದರ ಮುನ್ನರವರು ಮಂಜುಷ್ ರನ್ನು ಕರೆತರಲು ಸ್ನೇಹಾಲಯಕ್ಕೆ ಪ್ರಯಾಣವನ್ನು ಪ್ರಾರಂಭಿಸಿದರು.
ಸುದೀರ್ಘ ಅವಧಿಯ ನಂತರ ಮಂಜುಷ್ ನನ್ನು ಮತ್ತೆ ಪಡೆಯುವಾಗ ಅವರು ಹರ್ಷದಿಂದ ಗದ್ಗದಿತರಾಗಿದ್ದರು.  ಮಂಜುಷ್ ಗೆ ಉತ್ತಮ ಚಿಕಿತ್ಸೆಯನ್ನು ನೀಡಿದ  ಸ್ನೇಹಭವನ ಹಾಗೂ ಸ್ನೇಹಾಲಯ ಸಂಸ್ಥೆಯ ನಿಸ್ವಾರ್ಥ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?