Under Pratyasha Project Patient named Nazeem from Mariya Bhavan Charitable Trust was taken to Snehalaya Manjeshwar for further reunion process on 14/02/2022. Upon arrival to Snehalaya, she participated well in all therapeutic activities and counselling sessions. According to the information receive during the counseling session, team Snehalaya tried to get the details of her native and family and came to know that she hails from Bhusawal, Jalgaon of Maharashtra.
After contacting her brother and son she was recieved back happily by her brother and sister-in-law at Maharashtra on 25/02/22.
Her son told that she went missing five years ago but they could not find her. The family members shared that since last 20 years she was suffering from mental illness and was under treatment at Jalgaon hospital.
The family members expressed their gratitude towards Mariya Bhavan Charitable Trust and Snehalaya Manjeshwar for providing good care, treatment and making it possible to meet them again.
ಐದು ವರ್ಷಗಳ ನಂತರ ನಜೀಮ್ ಸಂತೋಷದಿಂದ ತನ್ನ ಕುಟುಂಬವನ್ನು ಸೇರಿಕೊಂಡ ಸುಮಧುರ ಕ್ಷಣ.
ಪ್ರತ್ಯಶಾ ಯೋಜನೆಯಡಿ ಮರಿಯಾ ಭವನ ಚಾರಿಟೇಬಲ್ ಟ್ರಸ್ಟ್‌ನ ನಜೀಮ್ ಎಂಬವರನ್ನು ಅವರ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು ದಿನಾಂಕ 14/02/2022 ರಂದು ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತರಲಾಯಿತು. ಸ್ನೇಹಾಲಯಕ್ಕೆ ಆಗಮಿಸಿದ ನಂತರ, ಅವರು ಎಲ್ಲಾ ಚಿಕಿತ್ಸಕ ಚಟುವಟಿಕೆಗಳಲ್ಲಿ ಮತ್ತು ಸಮಾಲೋಚನಾ ಅವಧಿಗಳಲ್ಲಿ ಉತ್ತಮವಾಗಿ ಭಾಗವಹಿಸಿದರು. ಕೌನ್ಸೆಲಿಂಗ್ ಅವಧಿಯಲ್ಲಿ ಪಡೆದ ಮಾಹಿತಿಯ ಪ್ರಕಾರ, ಸ್ನೇಹಾಲಯ ತಂಡವು ಆಕೆಯ ಸ್ಥಳೀಯ ಮತ್ತು ಕುಟುಂಬದ ವಿವರಗಳನ್ನು ಪಡೆಯಲು ಪ್ರಯತ್ನಿಸಿದಾಗ ಅವರು ಮಹಾರಾಷ್ಟ್ರದ ಜಲಗಾಂವ್‌ನ ಭೂಸಾವಾಲ್‌ನಿಂದ ಬಂದವರು ಎಂದು ತಿಳಿದು ಬಂದಿತು.
ಆಕೆಯ ಸಹೋದರ ಮತ್ತು ಮಗನನ್ನು ಸಂಪರ್ಕಿಸಿದ ನಂತರ ಆಕೆಯನ್ನು ದಿನಾಂಕ 25/02/22 ರಂದು ಮಹಾರಾಷ್ಟ್ರದಲ್ಲಿನ ಆಕೆಯ ಸಹೋದರ ಮತ್ತು ಅತ್ತಿಗೆಯವರು ಸಂತೋಷದಿಂದ ಬರಮಾಡಿಕೊಂಡರು.
ನಜೀಮ್ ಕಳೆದ 20 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಜಲಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದುದಾಗಿ ಆಕೆಯ ಕುಟುಂಬದ ಸದಸ್ಯರು ತಿಳಿಸಿರುತ್ತಾರೆ.
ನಾಪತ್ತೆಯಾಗಿ ಬೀದಿ ಸೇರಿದ ನಜೀಮ್ ರನ್ನು ರಕ್ಷಣೆ ಮಾಡಿ ಉತ್ತಮ ಆರೈಕೆ, ಚಿಕಿತ್ಸೆ ನೀಡಿ ಮತ್ತೆ ತನ್ನ ಕುಟುಂಬ ವನ್ನು ಸೇರುವಂತೆ ಮಾಡಿದ ಮರಿಯ ಭವನ ಚಾರಿಟೇಬಲ್ ಟ್ರಸ್ಟ್ ಹಾಗೂ ಮಂಜೇಶ್ವರದ ಸ್ನೇಹಾಲಯ ಸಂಸ್ಥೆಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿರುತ್ತಾರೆ.