Kedar aged 46 was admitted to Snehalaya on 16.03.2022 brought from Kripa Charitable Trust Kannur under the Pratyasha Project of Kerala State Government Programme for Reunion of the inmates with their family.
After his admission at Snehalaya, along with the Psychiatric Medications he was encouraged to participate in Self-management and the therapeutic activities. He underwent many counselling sessions too. As a result, our Social Workers could contact the Village Panchayat, Lay Leaders, Police and officials.
Finally, team Snehalaya was successful in contacting his son Mr Hem Singh and after telephonic conversation he came down to Snehalaya along with his cousin brother. On 18/04/2022 Snehalaya witnessed a joyous moment when his son Mr Hem Singh met his father Kedar after 16 years.
Kedar hails from Champavat of Uttrakhand. He has his wife and 3 children and because of psychiatric problems he left his home 16 years back .
His son was very happy to see him after along time and joyfully received his father back to his family.
He thanked Team Snehalaya and Kripa Charitable Trust for rescuing his father from the street, providing shelter, food, care, treatment and for doing such a noble favour to his family by reuniting his father after 16 years.
16 ವರ್ಷಗಳ ನಂತರ ಉತ್ತರಾಖಂಡ್ ನಲ್ಲಿನ ತನ್ನ ಕುಟುಂಬವನ್ನು ಮತ್ತೆ ಸೇರಿದ ಕೇದಾರ್.
ಸುಮಾರು 46 ವರ್ಷ ವಯಸ್ಸಿನ ಕೇದಾರ್ ಅವರನ್ನು ಅವರ ಕುಟುಂಬದೊಂದಿಗೆ ಮರು ಸೇರ್ಪಡಿಸುವ ಕೇರಳ ರಾಜ್ಯ ಸರ್ಕಾರದ ಪ್ರತ್ಯಶಾ ಯೋಜನೆಯಡಿಯಲ್ಲಿ ದಿನಾಂಕ 16.03.2022 ರಂದು ಕೃಪಾ ಚಾರಿಟಬಲ್ ಟ್ರಸ್ಟ್ ಕಣ್ಣೂರಿನಿಂದ, ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತರಲಾಯಿತು.
ಸ್ನೇಹಾಲಯದಲ್ಲಿ ಅವರು ದಾಖಲಾದ ನಂತರ, ಮನೋವೈದ್ಯಕೀಯ ಔಷಧಿಗಳ ಜೊತೆಗೆ ಸ್ವಯಂ-ನಿರ್ವಹಣೆ ಮತ್ತು ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಲಾಯಿತು. ಅವರು ಅನೇಕ ಆಪ್ತ ಸಮಾಲೋಚನಾ ಅವಧಿಗಳಿಗೆ ಒಳಗಾಗಿದ್ದರು. ನಮ್ಮ ಸಮಾಜ ಕಾರ್ಯಕರ್ತರು ಅವರ ಮಾಹಿತಿಯಂತೆ ಗ್ರಾಮ ಪಂಚಾಯತ್, ಸ್ಥಳೀಯ ಮುಖಂಡರು , ಪೊಲೀಸರು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿದರು. ಅಂತಿಮವಾಗಿ, ಸ್ನೇಹಾಲಯ ತಂಡವು ಅವರ ಮಗ ಶ್ರೀ ಹೇಮ್ ಸಿಂಗ್ ಅವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಯಿತು. ಮತ್ತು ಅವರೊಡನೆ ನಡೆಸಿದ ದೂರವಾಣಿ ಸಂಭಾಷಣೆಯಂತೆ
ಹೇಮ್ ಸಿಂಗ್ ತಮ್ಮ ಸೋದರಸಂಬಂಧಿ ಸಹೋದರನೊಂದಿಗೆ ಸ್ನೇಹಾಲಯಕ್ಕೆ ಬಂದರು. 18/04/2022 ರಂದು ಸ್ನೇಹಾಲಯವು 16 ವರ್ಷಗಳ ನಂತರ ತಂದೆ ಕೇದಾರ್, ತನ್ನ ಮಗ ಹೇಮ್ ಸಿಂಗ್ ಅವರನ್ನು ಭೇಟಿಯಾದ ಸಂತೋಷದ ಕ್ಷಣಕ್ಕೆ ಸಾಕ್ಷಿಯಾಯಿತು.
ಕೇದಾರ್ ಉತ್ತರಾಖಂಡಾದ ಚಂಪಾವತ್ ನಿವಾಸಿ ಯಾಗಿದ್ದು ಪತ್ನಿ ಮತ್ತು 3 ಮಕ್ಕಳನ್ನು ಹೊಂದಿರುತ್ತಾರೆ. ತನ್ನ ಮಾನಸಿಕ ಸಮಸ್ಯೆಯಿಂದಾಗಿ 16 ವರ್ಷಗಳ ಹಿಂದೆ ಮನೆ ತೊರೆದು, ಕುಟುಂಬದಿಂದ ಬೇರ್ಪಟ್ಟಿದ್ದರು.
ಆತನ ಮಗ ಬಹಳ ಸಮಯದ ನಂತರ ತನ್ನ ತಂದೆಯನ್ನು ನೋಡಿ ಸಂತೋಷಪಟ್ಟನು ಮತ್ತು ಹರ್ಷ ದಿಂದ ತನ್ನ ತಂದೆಯನ್ನು ಮತ್ತೆ ತಮ್ಮ ಕುಟುಂಬಕ್ಕೆ ಬರಮಾಡಿಕೊಂಡನು. ತಮ್ಮ ತಂದೆಯನ್ನು ಬೀದಿ ಬದಿಯಿಂದ ರಕ್ಷಣೆ ಮಾಡಿ, ಆಶ್ರಯ ನೀಡಿ ಊಟ, ಉಪಚಾರ, ಚಿಕಿತ್ಸೆಯನ್ನು ಒದಗಿಸಿ 16 ವರ್ಷಗಳ ನಂತರ ಮತ್ತೆ ತನ್ನ ಕುಟುಂಬಕ್ಕೆ ಸೇರಿಸುವಲ್ಲಿ ಕಾರಣಕರ್ತರಾಗಿ ಉದಾತ್ತ ಸೇವೆಗೈದ, ಸ್ನೇಹಾಲಯ ಮತ್ತು ಕೃಪಾ ಚಾರಿಟೇಬಲ್ ಟ್ರಸ್ಟ್‌ಗೆ ಕುಟುಂಬಸ್ಥರು ನಮನಗಳನ್ನು ಸಲ್ಲಿಸಿದರು.