Chellama reached home after 6 years.

/

Chellama was admitted to Snehalaya on 05/10/21 as she was rescued from old Kasargod bus stand by Mahila Mandhiram of Paravanadkam. During her admission at Snehalaya it is found that she had mental and physical health issues. Because of stroke her left side is partially paralysed. 

After the proper medication she was encouraged to participate in all our scheduled and therapeutic activities. She was given counselling sessions too. She was improving day by day. She shared few details of her family and native.

Team Snehalaya came to know that she hails from Tamilnadu. After contacting the Panchyath, Police and Lay Leaders  on 24/03/22 our Social Workers travelled  to Ogaiyur of Tamilnadu. They contacted the Velanchira Police Station and informed about Chellama. Police was cooperative and they immediately contacted her husband, Muthuswami. He came to meet them after a few hours. He said that Chellamma  had psychiatric problems and  left her  home 6 years ago . She is a mother of two children Arul and Thayyanayaki. Son is a driver and daughter has got married. 

    Muthuswami was very happy to receive back his wife who was missiong from many years. He was grateful towards Snehalaya Manjeshwar for providing shelter, taking care of  Chellamma and for the great help by reuniting the family again.

 

6 ವರ್ಷಗಳ ನಂತರ ಚೆಲ್ಲಮ್ಮ ತಮಿಳುನಾಡಿನ ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡರು.

05/10/21 ರಂದು ಹಳೆ ಕಾಸರಗೋಡು ಬಸ್ ನಿಲ್ದಾಣದಿಂದ ಪರವನಡ್ಕದ  ಮಹಿಳಾ ಮಂದಿರದವರರು ರಕ್ಷಿಸಿದ್ದ ಚೆಲ್ಲಮ್ಮ ಅವರನ್ನು ಸ್ನೇಹಾಲಯಕ್ಕೆ ದಾಖಲಿಸಲಾಗಿತ್ತು. ಸ್ನೇಹಾಲಯಕ್ಕೆ ದಾಖಲಾದ ಸಮಯದಲ್ಲಿ ಆಕೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳಿರುವುದು ಕಂಡುಬಂದಿತು. ಪಾರ್ಶ್ವವಾಯುವಿನ ಕಾರಣ ಅವಳ ಎಡಭಾಗವು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿತ್ತು.

ಸರಿಯಾದ ಔಷಧೋಪಚಾರದ ನಂತರ ಆಕೆಯನ್ನು ನಮ್ಮ ಎಲ್ಲಾ ನಿಗದಿತ ಮತ್ತು ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು. ಆಕೆಗೆ ಕೌನ್ಸೆಲಿಂಗ್ ಸೆಷನ್‌ಗಳನ್ನೂ ನೀಡಲಾಯಿತು. ದಿನದಿಂದ ದಿನಕ್ಕೆ ಆಕೆಯ ಸ್ಥಿತಿ ಸುಧಾರಿಸಿಕೊಂಡಿತು .ಆಕೆಯು ತನ್ನ ಕುಟುಂಬ ಮತ್ತು ಸ್ಥಳೀಯರ ಕೆಲವು ವಿವರಗಳನ್ನು ಹಂಚಿಕೊಂಡರು.

ಸ್ನೇಹಾಲಯ ತಂಡಕ್ಕೆ ಆಕೆ ತಮಿಳುನಾಡು ಮೂಲದವಳು ಎಂದು ತಿಳಿದು ಬಂದಿತು. ಇದರಂತೆ  ಪಂಚಾಯತ್ , ಪೋಲೀಸ್ ಮತ್ತು ಸ್ಥಳೀಯ ನಾಯಕರನ್ನು ಸಂಪರ್ಕಿಸಿದ ನಂತರ ನಮ್ಮ ಸಮಾಜ ಕಾರ್ಯಕರ್ತರು ದಿನಾಂಕ   24/03/22 ರಂದು ತಮಿಳುನಾಡಿನ ಓಗೈಯೂರಿಗೆ ಪ್ರಯಾಣ ಬೆಳೆಸಿದರು. ಅವರು ವೆಲಂಚಿರಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಚೆಲ್ಲಮ್ಮನ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಸಹಕರಿಸಿದರು ಮತ್ತು ಅವರು ತಕ್ಷಣ ಆಕೆಯ ಪತಿ ಮುತ್ತುಸ್ವಾಮಿಯನ್ನು ಸಂಪರ್ಕಿಸಿದರು. ಅವರು ಕೆಲವು ಗಂಟೆಗಳ ನಂತರ ಆಕೆಯನ್ನು ಭೇಟಿಯಾಗಲು ಬಂದರು. ಚೆಲ್ಲಮ್ಮ ಅವರಿಗೆ ಕಳೆದ 6 ವರ್ಷಗಳಿಂದ ಮಾನಸಿಕ ಸಮಸ್ಯೆ ಇದ್ದು, ಆಕಸ್ಮಿಕ ವಾಗಿ ಮನೆ ಬಿಟ್ಟು ಹೋಗಿದ್ದರು ಎಂದು ತಿಳಿಸಿದರು . ಆಕೆಯು ಅರುಲ್ ಮತ್ತು ತಾಯ್ಯನಾಯಕಿ ಎಂಬ ಇಬ್ಬರು ಮಕ್ಕಳ ತಾಯಿಯಾಗಿದ್ದರು.ಮಗ ಡ್ರೈವರ್ ಆಗಿದ್ದು, ಮಗಳ ಮದುವೆಯಾಗಿದೆ.

   ಹಲವು ವರ್ಷಗಳ ಹಿಂದೆ ಕಳೆದುಹೋದ ತನ್ನ  ಪತ್ನಿಯನ್ನು ಮರಳಿ ಪಡೆದ ಮುತ್ತುಸ್ವಾಮಿ ತುಂಬಾ ಸಂತೋಷಪಟ್ಟರು. ಸ್ನೇಹಾಲಯ ಮಂಜೇಶ್ವರ ಚೆಲ್ಲಮ್ಮರಿಗೆ ಆಶ್ರಯ ನೀಡಿ, ಚೆಲ್ಲಮ್ಮನ ಆರೈಕೆ ಮಾಡಿ, ಕುಟುಂಬವನ್ನು ಮತ್ತೆ ಒಂದುಗೂಡಿಸುವಂತೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?