Mother got her son Jasmant Kumar back

/

Bismatulla  aged 30 years was rescued by team Snehalaya from Beeri Thokkottu on 19/03/22. He was found in a unhygienic condition with psychiatric issues. He was self-smiling, self-talking and was wandering on the streets.

He was admitted at Snehalaya Psycho- Social Rehabilitation Centre for Men and provided with proper care and treatment. As he could cope up with the situation he was encouraged to participate in different sections of therapeutic activities. He was also engaged in counselling sessions. Slowly he started to respond to our treatment and his health condition also got improved. He shared some details of his family.Team Snehalaya tried to trace his family using the information provided by him. Our team came to know that his original name is Jasmanth Kumar and he hails from Samastipur of Bihar state.

On 04/05/22  he was  shifted to Shraddha rehabilitation  centre Mumbai for further Reunion process.

He was reunited with his family at Bihar on 24/05/22.

He was received by his mother whose joys knew no bounds seeing her son who was missing . He had psychiatric problems from four years and was under treatment. All of a sudden he left home without any reason.

 It was a Joyful moment for his  mother to see him again. They were  grateful towards Snehalaya, Manjeshwar and Shraddha foundation Mumbai for their kind gesture and selfless service in all this process of rescue to reunion.

 

 

ತಾಯಿ ತನ್ನ ಮಗ ಜಸ್ಮಂತ್ ಕುಮಾರ್ ಅವರನ್ನು ಮರಳಿ ಪಡೆದ ಅಪರೂಪದ ಘಟನೆಗೆ ಸಾಕ್ಷಿಯಾದ ಸ್ನೇಹಾಲಯ.

19/03/22 ರಂದು  ತೊಕ್ಕೊಟ್ಟು- ಬೀರಿ  ಪರಿಸರದಲ್ಲಿ ಕಳಪೆ ನೈರ್ಮಲ್ಯದಲ್ಲಿದ್ದ ಮತ್ತು ಸಾಮಾಜಿಕವಾಗಿ ಪ್ರತ್ಯೇಕವಾದ ನಡವಳಿಕೆಯನ್ನು ಹೊಂದಿದ್ದ 30 ವರ್ಷ ಪ್ರಾಯದ ಬಿಸಮತುಲ್ಲಾ ಅವರನ್ನು ರಕ್ಷಿಸಿತು. ಆ ಸಮಯದಲ್ಲಿ

 ಅವರಲ್ಲಿ ಸ್ವಯಂ-ನಗುವ, ಸ್ವಯಂ-ಮಾತನಾಡುವ ಮನೋವೈದ್ಯಕೀಯ ಸಮಸ್ಯೆಯ ಲಕ್ಷಣಗಳನ್ನು ಕಂಡುಕೊಳ್ಳಲಾಯಿತು. ಅನ್ನ ಆಹಾರವಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿರುವ ಆತನ ಆರೈಕೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.

ಸಮರ್ಪಕವಾದ ಹಾಗೂ ಅವಶ್ಯಕ ಆರೈಕೆ ಮತ್ತು ಚಿಕಿತ್ಸೆಯ ನಂತರ ಅವರನ್ನು

 ವಿವಿಧ ವಿಭಾಗಗಳಲ್ಲಿನ ಚಟುವಟಿಕೆಗಳಭಾಗವಹಿಸಲು  ಪ್ರೋತ್ಸಾಹಿಸಲಾಯಿತು. ಅವರು ಆಪ್ತ ಸಮಾಲೋಚನಾ ಸೆಷನ್‌ಗಳಲ್ಲೂ ಭಾಗವಹಿಸಿದರು . ಎಲ್ಲಾ ಚಿಕಿತ್ಸೆಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸಿ, ಸ್ಪಂದಿಸಿದ ಅವರ ದೈಹಿಕ ಹಾಗೂ ಮಾನಸಿಕ ಸ್ಥಿತಿಯೂ ಸುಧಾರಿಸಿತು . ಅವರು ತಮ್ಮ ಕುಟುಂಬದ ಕೆಲವು ವಿವರಗಳನ್ನು ಹಂಚಿಕೊಂಡರು . ಅವರು ನೀಡಿದ ಮಾಹಿತಿಯನ್ನು ಕಲೆ ಹಾಕಿ ನಮ್ಮ ಸೇವಾ ಕಾರ್ಯಕರ್ತರ ತಂಡವು ಅವರ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸಿತು .ಇದರಂತೆ  ಬಿಸಮತುಲ್ಲಾರ ಮೂಲ ಹೆಸರು ಜಸ್ಮಂತ್ ಕುಮಾರ್ ಹಾಗೂ ಅವರು ಬಿಹಾರದ ಸಮಸ್ತಿಪುರದವರು ಎಂದು ತಿಳಿದು ಬಂತು.

ನಂತರ ಅವರನ್ನು ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ 04/05/22 ರಂದು ಮುಂಬೈನ ಶ್ರದ್ಧಾ ಪುನರ್ವಸತಿ ಪ್ರತಿಷ್ಠಾನ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅವರು 24/05/22 ರಂದು ಬಿಹಾರದಲ್ಲಿ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡರು. ನಾಪತ್ತೆಯಾಗಿದ್ದ ತನ್ನ ಮಗನನ್ನು ಮತ್ತೆ ನೋಡಿದ ತಾಯಿಯ ಸಂತೋಷಕ್ಕೆ ಮಿತಿಯಿಲ್ಲದಾಯಿತು. ಮಮತೆಯ ಅಪ್ಪುಗೆಯಿಂದ ಆತನನ್ನು ಸ್ವೀಕರಿಸಿದರು. ಅವರಿಗೆ ಕಳೆದ ನಾಲ್ಕು ವರ್ಷಗಳಿಂದ ಮಾನಸಿಕ ಸಮಸ್ಯೆ ಇದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಏಕಾಏಕಿಯಾಗಿ ಮನೆ ಬಿಟ್ಟು ಹೋಗಿದ್ದ ಆತನನ್ನು ಮತ್ತೆ ನೋಡುವುದು ಆ ತಾಯಿಗೆ ವರದಾನವಾಗಿತ್ತು.  ದಯೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಜಸ್ಮಂತ್ ಕುಮಾರ್ ಗೆ ಹೊಸ ಜೀವನವನ್ನು ನೀಡಿದ ಮಂಜೇಶ್ವರದ ಸ್ನೇಹಾಲಯ ಮತ್ತು ಮುಂಬೈಯ ಶ್ರದ್ಧಾ ಫೌಂಡೇಶನ್ ಗೆ ಕುಟುಂಬದ ಸದಸ್ಯರು ಕೃತಜ್ಞರಾಗಿದ್ದರು.

Leave a Reply

Your email address will not be published. Required fields are marked *

Need Help?