Ahalya Devi’s decades-long agony came to an end when she reunited with her family in Bihar.

/

Ahalya Devi aged 45 years was rescued and brought to Snehalaya Rehabilitation Centre by Station house officer Railway police station Kasargod on 28/03/22. She was found in an unhygienic condition, wandering on the streets. She had psychiatric issues like self-talk and aggressive behaviour.

She was admitted to Snehalaya Psycho-Social Rehabilitation Centre for women for the care and treatment. As she was recovering, she was encouraged to participate in different sections of therapeutic activities also she was  engaged in counselling sessions. Slowly she started to respond to the treatment and her health condition also got improved. Team Snehalaya tried to trace her family and her whereabouts. Our team came to know that she hails from Kthihar District, Bihar. So On 08/08/22, she was shifted to Shraddha rehabilitation centre Mumbai for further reunion process.

She was happily reunited with her family at Bihar on 21/09/22. She was received by her beloved  mother. Her family told that she went missing ten years back. She was under treatment since 13 years at Bhagalpur. She is married and has two sons and two daughters.

 It was a Joyful moment for her family to see her again. Her mother took responsibility to take good care of her. Our team provided a treatment plan and one-month medicines.

They were grateful towards Snehalaya, Manjeshwar and Shraddha foundation Mumbai for their kind gesture and selfless service in all this process of rescue to reunion.

 

 

ಒಂದು ದಶಕದ ಯಾತನಾಮಯ ಬದುಕಿಗೆ ಸುಖಾಂತ್ಯ.

ಬಿಹಾರದಲ್ಲಿನ ತನ್ನ ಕುಟುಂಬದ ಸದಸ್ಯರೊಂದಿಗೆ ಪುನರ್ಮಿಲನಗೊಳ್ಳುವುದರೊಂದಿಗೆ ಅಹಲ್ಯಾ ದೇವಿಯ ಬರೊಬ್ಬರಿ ಒಂದು ದಶಕದ  ಯಾತನಾಮಯ ಬದುಕು ಸುಖಾಂತ್ಯಗೊಂಡಿದೆ.

28/03/22 ರಂದು 45 ವರ್ಷ ಪ್ರಾಯದ ಅಹಲ್ಯಾದೇವಿಯನ್ನು ರೈಲ್ವೆ ಪೊಲೀಸ್ ಠಾಣೆ ಕಾಸರಗೋಡು ಇದರ ಠಾಣಾಧಿಕಾರಿಯವರು ರಕ್ಷಿಸಿ ಸ್ನೇಹಾಲಯ ಪುನರ್ವಸತಿ ಕೇಂದ್ರಕ್ಕೆ ಕರೆತಂದಿರುತ್ತಾರೆ. ಆಕೆಯು ಶಾರೀರಿಕ ನೈರ್ಮಲ್ಯವಿಲ್ಲದೆ  ಬೀದಿಗಳಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿದ್ದಳು.ಅಲ್ಲದೆ ತನ್ನಷ್ಟಕ್ಕೆ ಮಾತನಾಡುವ ಹಾಗೂ ಆಕ್ರಮಣಕಾರಿ ನಡವಳಿಕೆಯಂತಹ ಮನೋವೈದ್ಯಕೀಯ ಸಮಸ್ಯೆಗಳನ್ನು ಹೊಂದಿದ್ದಳು.

ವಿಶೇಷ  ಆರೈಕೆ ಹಾಗೂ ಚಿಕಿತ್ಸೆಗಾಗಿ ಆಕೆಯನ್ನು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಮಹಿಳಾ ವಿಭಾಗದಲ್ಲಿ ದಾಖಲಿಸಲಾಯಿತು.

ಕೆಲವು ದಿನಗಳ ನಂತರ ಆಕೆಯು ಚೇತರಿಸಿಕೊಳ್ಳುತ್ತಿದ್ದಂತೆ, ಚಿಕಿತ್ಸಕ ಚಟುವಟಿಕೆಗಳ  ಮೂಲಕ ವಿವಿಧ ವಿಭಾಗಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು ಹಾಗೂ ಆಪ್ತ ಸಮಾಲೋಚನೆಗೆ ಒಳಪಡಿಸಲಾಯಿತು. ಕ್ರಮೇಣ ಆಕೆ ಚಿಕಿತ್ಸೆಗೆ ಸ್ಪಂದಿಸತೊಡಗಿದಳು ಮತ್ತು ಆಕೆಯ ಆರೋಗ್ಯ ಸ್ಥಿತಿಯೂ ಸುಧಾರಿಸಿತು. ಸ್ನೇಹಾಲಯ ತಂಡ ಆಕೆಯ ಕುಟುಂಬ ಮತ್ತು ಆಕೆಯ ಕುಟುಂಬದ ವಿವರಗಳನ್ನು  ಪತ್ತೆಹಚ್ಚಲು ಪ್ರಯತ್ನಿಸಿತು. ಆಕೆ ಬಿಹಾರದ ಕ್ತಿಹಾರ್ ಜಿಲ್ಲೆಯವಳು ಎಂದು ನಮ್ಮ ತಂಡಕ್ಕೆ ತಿಳಿಯಿತು. ಆದ್ದರಿಂದ 08/08/22 ರಂದು, ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆಕೆಯನ್ನು    ಮುಂಬೈಯ ಶ್ರದ್ಧಾ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ತದನಂತರ ಸಮಾಜಸೇವಾ ಕಾರ್ಯಕರ್ತರ ನೆರವಿನೊಂದಿಗೆ

ಆಕೆಯು ದಿನಾಂಕ 21/09/22 ರಂದು ಬಿಹಾರದಲ್ಲಿ ತನ್ನ ಕುಟುಂಬದ ಸದಸ್ಯರೊಂದಿಗೆ  ಸಂತೋಷದಿಂದ ಮತ್ತೆ ಸೇರಿಕೊಂಡಳು. ಆಕೆಯ  ತಾಯಿ ಅತ್ಯಂತ ಪ್ರೀತಿಯಿಂದ ಭಾವುಕರಾಗಿ ಅವಳನ್ನು ಬರಮಾಡಿಕೊಂಡರು.  ಅಹಲ್ಯಾ ದೇವಿ 13 ವರ್ಷಗಳಿಂದ ಭಾಗಲ್ಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಗೆ ವಿವಾಹವಾಗಿದ್ದು, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಹತ್ತು ವರ್ಷಗಳ ಹಿಂದೆ  ಆಕೆ ನಾಪತ್ತೆಯಾಗಿದ್ದಳು ಎಂದು ಆಕೆಯ ಮನೆಯವರು ತಿಳಿಸಿದ್ದಾರೆ.

ಆಕೆಯನ್ನು ಪುನಃ ನೋಡುವುದು ಕುಟುಂಬದ ಸದಸ್ಯರಿಗೆ ಅತ್ಯಂತ ಆನಂದದ ಕ್ಷಣವಾಗಿತ್ತು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಕೆಯ ತಾಯಿ ವಹಿಸಿಕೊಂಡಿದ್ದು  ನಮ್ಮ ತಂಡವು ಚಿಕಿತ್ಸೆಯ ಯೋಜನೆ ಮತ್ತು  ಔಷಧಿಗಳನ್ನು ಒದಗಿಸಿತು .

ಅಹಲ್ಯಾ ದೇವಿಯ  ಪುನರ್ಮಿಲನದ ಈ ಎಲ್ಲಾ ಪ್ರಕ್ರಿಯೆಯಲ್ಲಿ ನಿಸ್ವಾರ್ಥ ಹಾಗೂ ಮಾನವೀಯ ಸೇವೆ ಸಲ್ಲಿಸಿದ   ಮಂಜೇಶ್ವರದ ಸ್ನೇಹಾಲಯ,  ಮತ್ತು ಮುಂಬೈಯ ಶ್ರದ್ಧಾ ಫೌಂಡೇಶನ್ ಗೆ   ಕುಟುಂಬವು  ಕೃತಜ್ಞತೆ ಸಲ್ಲಿಸಿತು .

Leave a Reply

Your email address will not be published. Required fields are marked *

Need Help?