Goshwal reunited with his family in Andhra Pradesh

/

On 22-1-22 Goshwal aged 45 years was rescued from the street of Pumpwell in Mangalore and was brought to Snehalaya by the Snehalaya team. During his admission, it is observed that he had decreased hygiene and was without food. He was not cooperating to share any details and looked depressed.

 After his admission at Snehalaya Psycho–Social Rehabilitation Centre treatment and medication was provided along with various therapeutic activities. Slowly his condition improved and his psychiatric issues were maintained. During the reunion-related counselling, he shared his family details. Then for further reunion process, he was taken to Shraddha Foundation Mumbai. His family was contacted on 4-06-2022, and Mr Goshwal was successfully reunited with his parents who are living in the Warangal district of Andhra Pradesh.

After 2 years of missing Goshwal’s family members were happy to receive him back. They thanked the entire team of Snehalaya Psycho-Social Rehabilitation Centre Manjehwar and Shraddha Foundation Mumbai for caring for and reuniting Goshwal with his family.

ಗೋಶ್ವಾಲ್ ತನ್ನ ಕುಟುಂಬದೊಂದಿಗೆ ಆಂಧ್ರಪ್ರದೇಶದಲ್ಲಿ ಮತ್ತೆ ಸೇರಿಕೊಂಡರು

ದಿನಾಂಕ 22-1-22 ರಂದು 45 ವರ್ಷ ಪ್ರಾಯದ ಗೋಶ್ವಾಲ್ ಎಂಬಾತನನ್ನು ಮಂಗಳೂರಿನ ಪಂಪ್‌ವೆಲ್ ರಸ್ತೆಯಿಂದ ರಕ್ಷಿಸಿ ಸ್ನೇಹಾಲಯ ತಂಡವು ಸ್ನೇಹಾಲಯಕ್ಕೆ ಕರೆತಂದಿತ್ತು. ಅವರ ಪ್ರವೇಶದ ಸಮಯದಲ್ಲಿ ಅವರು ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿದ್ದರು ಹಾಗೂ ಅನ್ನ ಆಹಾರವಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಅವರು ಯಾವುದೇ ವಿವರಗಳನ್ನು ಹಂಚಿಕೊಳ್ಳಲು ಸಹಕರಿಸಲಿಲ್ಲ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಸ್ನೇಹಾಲಯ ಸೈಕೋ – ಸೋಶಿಯಲ್ ರಿಹ್ಯಾಬಿಲಿಟೇಶನ್  ಕೇಂದ್ರದಲ್ಲಿ ಅವರು ದಾಖಲಾದ ನಂತರ ಚಿಕಿತ್ಸೆ ಮತ್ತು ಔಷಧಿಗಳನ್ನು ವಿವಿಧ ಚಿಕಿತ್ಸಕ ಚಟುವಟಿಕೆಗಳೊಂದಿಗೆ ಒದಗಿಸಲಾಯಿತು. ನಿಧಾನವಾಗಿ ಅವರ ಸ್ಥಿತಿ ಸುಧಾರಿಸಿತು ಮತ್ತು ಅವರ ಮನೋವೈದ್ಯಕೀಯ ಸಮಸ್ಯೆಗಳನ್ನು ನಿರ್ವಹಿಸಲಾಯಿತು. ಪುನರ್ಮಿಲನ ಸಂಬಂಧಿತ ಸಮಾಲೋಚನೆಯ ಸಮಯದಲ್ಲಿ, ಅವರು ತಮ್ಮ ಕುಟುಂಬದ ವಿವರಗಳನ್ನು ಹಂಚಿಕೊಂಡರು. ನಂತರ ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಅವರನ್ನು ಶ್ರದ್ಧಾ ಫೌಂಡೇಶನ್ ಮುಂಬೈಗೆ ಕರೆದೊಯ್ಯಲಾಯಿತು. ಅವರ ಕುಟುಂಬವನ್ನು ದಿನಾಂಕ 4-06-2022 ರಂದು ಸಂಪರ್ಕಿಸಲಾಯಿತು, ಮತ್ತು ಶ್ರೀ ಗೋಶ್ವಾಲ್ ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ಅವರ ಪೋಷಕರೊಂದಿಗೆ ಯಶಸ್ವಿಯಾಗಿ ಮತ್ತೆ ಸೇರಿಕೊಂಡರು.

ಎರಡು ವರ್ಷಗಳ ತನಕ ಕಾಣೆಯಾದ ಗೋಶ್ವಾಲ್ ರವರನ್ನು ಅವರ ಕುಟುಂಬ ಸದಸ್ಯರು  ಮರಳಿ ಸ್ವೀಕರಿಸಲು ಸಂತೋಷಪಟ್ಟರು.ಹಾಗೂ  ಕುಟುಂಬದೊಂದಿಗೆ ಸೇರಿಸುವ ನಿಸ್ವಾರ್ಥ ಪ್ರಯತ್ನಕ್ಕಾಗಿ ಸ್ನೇಹಾಲಯ ಸೈಕೋ – ಸೋಶಿಯಲ್ ರಿಹ್ಯಾಬಿಲಿಟೇಶನ್ ಕೇಂದ್ರ ಮಂಜೇಶ್ವರ ಹಾಗೂ ಶ್ರದ್ಧಾ ಫೌಂಡೇಶನ್ ಮುಂಬೈಗೆ ಅವರು ಕೃತಜ್ಞತೆಯನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?