A destitute named Fathima was found wandering on the streets of Uppala, she was rescued and admitted to Snehalaya by our social workers. During the time of admission, she had psychiatric symptoms like mood disturbances, wondering about nature, suicidal thoughts, and auditory hallucinations.
After so many counseling sessions with our social workers, she started to recover from her illness and shared her whereabouts. She revealed that she is from bekoor Kasaragod. So Snehalaya’s team found the contact details of her brother and they contacted him.
On 13/04/2023 her brother Moosa came to Snehalaya to receive her and he was very happy after seeing her in this recovered state. According to him Fathima was married to Abdul Khadar and they had one child called Rafik but due to the second marriage, her husband made her mentally ill. As a result of this, she left the house and went missing for 5 months.
They were provided with one month of medicine and a treatment plan. They thanked Bro Joseph Crasta and the entire Snehalaya team for their selfless effort

ಉಪ್ಪಳದ ಬೀದಿಗಳಲ್ಲಿ ಅಲೆದಾಡುತ್ತಿದ್ದ ಫಾತಿಮಾ ಎಂಬ ನಿರಾಶ್ರಿತೆಯನ್ನು ಸ್ನೇಹಾಲಯ ತಂಡವು ರಕ್ಶಿಸಿ ಸ್ನೇಹಾಲಯ ಮಹಿಳೆಯರ ಮಾನಸಿಕ ಹಾಗು ಸಾಮಾಜಿಕ ಕೇಂದ್ರಕ್ಕೆ ದಾಖಲಿಸಿತು. ದಾಖಲಾತಿಯ ಸಂಧರ್ಬದಲ್ಲಿ ಅವಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು.
ಅಪ್ತಸಮಾಲೋಚನೆಗಳು ಹಾಗು ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸಿದ ನಂತರ ಅವರ ಆರೋಗ್ಯದಲ್ಲಿ ಕ್ರಮೇಣ ಚೇತರಿಕೆ ಕಂಡುಬಂತು. ಅವರು ತಮ್ಮ ವಿಳಾಸವು ಕಾಸರಗೊಡಿನ ಬೇಕೊರು ಎಂದು ಹಂಚಿಕೊಂಡರು. ಸ್ನೇಹಾಲಯ ತಂಡವು ಅವರ ತಮ್ಮನ ದೊರವಾಣಿ ಸಂಖ್ಯೆಯನ್ನು ಪತ್ತೆಹಚ್ಚಿ ಅವರನ್ನು ಸಂಪರ್ಕಿಸಿತು.
ದಿನಾಂಕ ೧೩/೦೪/೨೦೨೩ರಂದು ಅವರ ತಮ್ಮ ಮೊಸಾರವರು ಸ್ನೇಹಾಲಯಕ್ಕೆ ಆಗಮಿಸಿದರು. ಚೇತರಿಸಿಕೊಂಡ ಸ್ಥಿತಿಯಲ್ಲಿದ್ದ ಅವರ ತಂಗಿ ಫಾತಿಮಾಳನ್ನು ನೋಡಿ ತುಂಬಾ ಆನಂದಪಟ್ಟರು. ಮೊಸಾರವರ ಪ್ರಕಾರ ಅಬ್ದುಲ್ ಖಾದರ್ ಎಂಬವರ ಜೊತೆ ಫಾತಿಮಾಳ ಮದುವೆಯಾಗಿದ್ದು ಅವರಿಗೆ ರಫಿಕ್ ಎಂಬ ವೊರ್ವ ಮಗನಿದ್ದಾನೆ. ಆದರೆ ಅವಳ ಗಂಡನ ಎರಡನೆ ಮದುವೆಯ ಕಾರಣ ಅವಳು ಮಾನಸಿಕ ಖಿನ್ನತೆಗೆ ಒಳಗಾಗಿ ೫ ತಿಂಗಳ ಹಿಂದೆ ಮನೆಬಿಟ್ಟು ನಾಪತ್ತೆಯಾಗಿದ್ದಳು.
1 ತಿಂಗಳ ಔಷಧಿ ಹಾಗು ಚಿಕಿತ್ಸೆಯ ಯೋಜನೆಯನ್ನು ಅವರಿಗೆ ಒದಗಿಸಲಾಯಿತು. ಸ್ನೇಹಾಲಯದ ನಿಸ್ವಾರ್ಥ ಸೇವೆಗಾಗಿ ಕೃತಜ್ಞತೆಯನ್ನು ತೋರಿಸಿದರು.ಅವರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ನಿಸ್ವಾರ್ಥ ಪ್ರಯತ್ನ ಮಾಡಿದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಮತ್ತು ತಂಡಕ್ಕೆ ಅವರು ಧನ್ಯವಾದ ಅರ್ಪಿಸಿದರು.