Dinesh Rajsab, a man who was found wandering aimlessly on the National Highway near Manjeshwar, has been successfully reunited with his family after four long years of being missing. His journey from despair to reunion was made possible through the dedicated efforts of Snehalaya Psycho Social Rehabilitation Centre and Shraddha Mumbai.
On February 10, 2023, Dinesh Rajsab was rescued and admitted to Snehalaya Psycho Social Rehabilitation Centre for men by its founder, Bro Joseph Crasta. At the time of his rescue, Dinesh was suffering from mental illness and had a habit of chewing tobacco.
Under the compassionate care and treatment provided by Snehalaya, Dinesh’s condition began to improve. During counseling sessions, he shared vital information about his whereabouts and background. This information led to a decision to transfer him to Shraddha Mumbai for further reunification efforts.


4 ವರ್ಷದ ಬಳಿಕ ಕುಟುಂಬ ಸೇರಿದ ದಿನೇಶ್
ಕೆಲವು ಸಮಯದ ಹಿಂದೆ ಮಂಜೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ದಿನೇಶ್ ರಾಜ್ ಸಾಬ್ ಎನ್ನುವವರನ್ನು ಯಶಸ್ವಿಯಾಗಿ ತಮ್ಮ ಕುಟುಂಬದೊಂದಿಗೆ ಸೇರ್ಪಡೆ ಮಾಡಲಾಗಿದೆ.
ಫೆಬ್ರವರಿ 10, 2023 ರಂದು, ದಿನೇಶ್ ರಾಜ್ಸಾಬ್ನನ್ನು ಸ್ನೇಹಾಲಯದ ಸಂಸ್ಥಾಪಕರಾದ ಬ್ರ ಜೋಸಫ್ ರವರು ರಕ್ಷಿಸಿ, ಚಿಕಿತ್ಸೆ ಮತ್ತು ಆರೈಕೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು. ರಕ್ಷಿಸುವ ಸಮಯದಲ್ಲಿ ದಿನೇಶ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ತಂಬಾಕು ಜಗಿಯುವ ಅಭ್ಯಾಸವನ್ನು ಹೊಂದಿದ್ದನು.
ಸ್ನೇಹಾಲಯದಲ್ಲಿ ದೊರೆತ ಉತ್ತಮ ಚಿಕಿತ್ಸೆ ಹಾಗು ಸ್ನೇಹಾಲಯದ ಸಿಬ್ಬಂದಿಗಳ ಅವಿರತ ಪರಿಶ್ರಮದಿಂದ ಆತನ ಆರೋಗ್ಯದಲ್ಲಿ ಸುಧಾರಣೆ ಕಂಡಿತು ಹಾಗು ಆಪ್ತಸಮಾಲೋಚನೆಯಲ್ಲಿ ಕುಟುಂಬದ ವಿವರವನ್ನು ಹಂಚಿಕೊಂಡನು. ಮುಂದಿನ ಪುನರ್ಮಿಲನ ಪ್ರಕ್ರೀಯೆಗಾಗಿ ಆತನನ್ನು ಮುಂಬೈನ ಶ್ರದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 29/03/2023 ರಂದು ಉತ್ತರ ಪ್ರದೇಶದ ಪಖಾನಪುರದಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಆತನ ತಂದೆ ಆತನನ್ನು ಅಕ್ಕರೆಯಿಂದ ಬರಮಾಡಿಕೊಂಡರು.ಕುಟುಂಬದವರು ಈ ಪುನರ್ಮಿಲನ ಕಾರ್ಯಕ್ಕೆ ಸಹಕರಿಸಿದ ಶ್ರದ್ದಾ ಹಾಗೂ ಸ್ನೇಹಾಲಯ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.