On April 1, 2023, a woman named Meera Bai, who had been under the care and treatment of Prajna Counseling Centre for the past 3 years, was admitted to Snehalaya Psychosocial Rehabilitation Centre for Women for her improved care, treatment, and reunion. Due to the excellent care and treatment received at Snehalaya, her mental condition improved. During counseling sessions, she began to share information about her whereabouts. The Snehalaya team then traced her family, and her husband promised to come as soon as possible to take her back.
On January 23, 2024, her husband, Radhe Shyam Yadav along with his neighbour, arrived at Snehalaya from Chhattisgarh. The joyful reunion took place at Snehalaya. He was very happy to see his wife after a long gap of 7 years. According to him, Meera Bai was missing due to boarding a wrong train. She has 4 children, among them, 2 are married.
Brother Joseph Crasta, the founder of Snehalaya, wished them all the best for their future. They were provided with one month of medicine and a treatment plan. The family thanked Snehalaya and Prajna Centres for their tireless efforts.



ದಿನಾಂಕ 01.04.2023ರಂದು ಮಂಗಳೂರಿನ ಪ್ರಜ್ಞಾ ಸ್ವಧಾರ್ ಗ್ರಹದಲ್ಲಿ ಕಳೆದ 3 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಿರಾ ಬಾಯಿ ಎಂಬ ಮಹಿಳೆಯನ್ನು ಅಲ್ಲಿಯ ಸಿಬ್ಬಂದಿಗಳು, ಆಕೆಯ ಉತ್ತಮ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೆಂದ್ರಕ್ಕೆ ದಾಖಲಿಸಿದ್ದರು.
ಪ್ರಾರಂಭದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದ ಮೀರಾ ಬಾಯಿ, ಸ್ನೇಹಾಲಯದಲ್ಲಿ ದೊರೆತ ಉತ್ತಮ ಚಿಕಿತ್ಸೆಯಿಂದಾಗಿ ಆಕೆಯ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆಗಳು ಕಂಡು ಬಂದವು ಅಂತೆಯೆ ಆಪ್ತ ಸಮಾಲೋಚನೆಯಲ್ಲಿ ಆಕೆ ತನ್ನ ಕುಟುಂಬದ ಬಗ್ಗೆ ವಿವರಗಳನ್ನು ಹಂಚಿಕೊಂಡಳು.ಸ್ನೇಹಾಲಯ ತಂಡವು ಆಕೆಯ ವಿಳಾಸವನ್ನು ಪತ್ತೆ ಹಚ್ಚಿ ಆಕೆಯ ಕುಟುಂಬವನ್ನು ಸಂಪರ್ಕಿಸಿತು. ಆಕೆಯ ಪತಿ ಆದಷ್ಟು ಬೇಗ ಸ್ನೇಹಾಲಯಕ್ಕೆ ಬರುವ ಭರವಸೆಯನ್ನಿತ್ತರು.
ಇಂದು ದಿನಾಂಕ 23.01.2024 ರಂದು ಆಕೆಯ ಪತಿ ಶ್ಯಾಮ್ ಯಾದವ್ ತನ್ನ ಸ್ನೇಹಿತನಂದಿಗೆ ದೂರದ ಛತ್ತೀಸ್ಗಢದಿಂದ ಸ್ನೇಹಾಲಯಕ್ಕೆ ಆಗಮಿಸಿದರು.7ವರ್ಷದ ಬಳಿಕ ತನ್ನ ಪತ್ನಿಯನ್ನು ನೋಡಿ ಆತನ ಸಂತೋಷ ಮುಗಿಲು ಮುಟ್ಟಿತು.ಆತ ನೀಡಿದ ಹೇಳಿಕೆಯ ಪ್ರಕಾರ ಮೀರಾ ಬಾಯಿಗೆ 4 ಮಕ್ಕಳಿದ್ದು ಅದರಲ್ಲಿ ಇಬ್ಬರು ವಿವಾಹವಾಗಿದ್ದಾರೆ.
ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರು ಮೀರಾಬಯಿ ಮತ್ತು ಅವರ ಕುಟುಂಬಕ್ಕೆ ಶುಭಕೋರಿದರು. ಸ್ನೇಹಾಲಯ ತಂಡವು ಅವರಿಗೆ ಒಂದು ತಿಂಗಳ ಔಷಧಿ ಮತ್ತು ಚಿಕಿತ್ಸಾ ಯೋಜನೆಯನ್ನು ಒದಗಿಸಿತು ಮತ್ತು ಕುಟುಂಬವು ಈ ಪುನರ್ಮಿಲನ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಪಜ್ಞಾ ಸಂಸ್ಥೆಗಳಿಗೆ ತುಂಬು ಹೃದಯ ಕೃತಜ್ನತೆಗಳನ್ನು ಸಲ್ಲಿಸಿತು.