It is indeed a source of profound joy and a moment of great pride for Snehalaya as we learn that the life story of Br. Joseph has been chosen as a lesson for the B.C.A students. The narrative, meticulously etched by the virtuous Br. Joseph, delineates a life devoted to selfless benevolence. Such a narrative has earned the distinguished honor of being enshrined as an instructional gem within the hallowed annals of academia.
Under the auspices of the National Education Program, this poignant chronicle now stands as a beacon of enlightenment for the erudite minds of 4th B.C.A students. It finds its revered place within the esteemed tome, ‘Ganaka Mangala,’ Part Four, bearing the resonant appellation ‘Sneha Gange.’ This recognition not only underscores the merit of Br. Joseph’s altruistic endeavors but also imparts a profound significance to the invaluable lessons encapsulated in his life story.
The genesis of this literary odyssey lies in the quill of Mr. Ravi Naikappu, who, with profound eloquence, narrated the life saga of Br. Joseph Crasta. The contours of this opus delineate the solitary and selfless mission undertaken by Br. Joseph, an unwavering commitment to uplift the downtrodden and marginalized denizens of our society. Today, this narrative ascends to its zenith, weaving a crescendo that resonates with the compassionate endeavors of Br. Joseph Crasta.
In homage to this remarkable milestone, we extend our heartfelt salutations to Br. Joseph. His achievement is not merely a laurel but a testament to his indomitable spirit, a radiant inspiration for our students and the burgeoning youth. May our aspirations align with his noble footsteps, and may we, too, emerge as luminous beacons of light and fortitude in the lives of the countless neglected souls. Let the legacy of Br. Joseph Crasta be a guiding star, illuminating the path toward a more compassionate and benevolent society.
From the profound depths of our hearts, we extend our heartfelt wishes to Br. Joseph, accompanied by earnest prayers beseeching the Almighty for an abundance of strength. May divine fortitude empower him to witness the fruition and multiplication of his fervent dream – a dream rooted in the selfless service of the most destitute among us. May the benevolence he extends burgeon, providing solace, comfort, and fortitude to an ever-expanding multitude under the wings of his affectionate guardianship.
In this sacred endeavor, let us solemnly pledge to emulate the noble footsteps of Br. Joseph. His guiding principle, encapsulated in the resounding motto, “Inspire before you expire,” echoes with profound wisdom. Let us, in our own capacities, strive to be vessels of inspiration, sowing seeds of hope and compassion in the fertile soil of humanity. In the wake of Br. Joseph’s altruistic example, may we each become agents of positive change, contributing to the betterment of our fellow beings and perpetuating the ethos of benevolence.The Snehalaya family expresses profound gratitude to the esteemed Kannada literary luminary, Mr. Ravi Naikappu, for masterfully portraying the life of Brother Joseph in the literary masterpiece ‘Snehagange.’
In unison with Brother Joseph Crasta and the entire Snehalaya family, we extend our deepest gratitude to the University Textbook Selection Committee for their invaluable contribution to our cause.


ಸಮಸ್ತ ಸ್ನೇಹಾಲಯ ಕುಟುಂಬಕ್ಕೆ ಒಂದು ಅಗಾಧ ಸಂತೋಷ ಮತ್ತು ಬಹಳ ಹೆಮ್ಮೆಯ ವಿಷಯ. ಏನೆಂದರೆ ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಅವರ ಜೀವನ, ಸಮಾಜದ ತಿರಸ್ಕೃತ ಹಾಗೂ ಬಹಿಷ್ಕ್ರತ ಜನರಿಗಾಗಿ ಅವರ ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಮನಗಂಡು ಮಂಗಳೂರು ವಿಶ್ವವಿದ್ಯಾಲಯವು ತನ್ನ ರಾಷ್ಟ್ರೀಯ ಶಿಕ್ಷಣ ಕಾರ್ಯಕ್ರಮದ ಆಶ್ರಯದಲ್ಲಿ, ಸಹೋದರ ಜೋಸೆಫ್ ಕ್ರಾಸ್ತಾ ಅವರ ಜೀವನ ವೃತ್ತಾಂತ ಮತ್ತು ಅವರ ನಿಸ್ವಾರ್ಥ ಸೇವೆಯನ್ನು ಈಗ ನಾಲ್ಕನೇ ಬಿ.ಸಿ.ಎ ವಿದ್ಯಾರ್ಥಿಗಳ ಪಠ್ಯ ಪುಸ್ತಕ ‘ಗಣಕ ಮಂಗಳ,’ ಭಾಗ ನಾಲ್ಕರಲ್ಲಿ ‘ಸ್ನೇಹ ಗಂಗೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಯುವ ವಿಧ್ಯಾರ್ಥಿಗಳಿಗೆ ಒಂದು ಪಾಠವನ್ನಾಗಿ ಆರಿಸಿಕೊಂಡಿದೆ. ಈ ಪಾಠವು ಸಹೋದರ ಜೋಸೆಫ್ ಅವರ ತ್ಯಾಗ ಮತ್ತು ಸೇವೆಯ ಜೀವನ ಶೈಲಿಯನ್ನು ಒತ್ತಿಹೇಳುತ್ತದೆ. ಜೋಸೆಫ್ ಅವರ ಪರಹಿತಚಿಂತನೆಯ ಪ್ರಯತ್ನಗಳು, ಅವರ ಜೀವನ ಕಥೆಯಲ್ಲಿ ಅಡಕವಾಗಿರುವ ಆಳವಾದ ಜೀವನ ಮೌಲ್ಯಗಳನ್ನು ಎತ್ತಿ ತೋರಿಸುತ್ತವೆ.
ಮೂಲತ ಈ ಸಾಹಿತ್ಯಿಕ ಲೇಖನ ಶ್ರೀ ರವಿ ನಾಯ್ಕಪು ಅವರು ಸಹೋದರ ಜೋಸೆಫ್ ಕ್ರಾಸ್ತರವರ ಜೀವನದ ಕುರಿತು ಬರೆದ ‘ಸ್ನೇಹಗಂಗೆ’ ಎಂಬ ಪುಸ್ತಕದಲ್ಲಿ ರೂಪಿಸಲ್ಪಟ್ಟಿದೆ. ನಮ್ಮ ಸಮಾಜದ ತುಳಿತಕ್ಕೊಳಗಾದ, ತಿರಸ್ಕ್ರತ ಮತ್ತು ಅಂಚಿನಲ್ಲಿರುವ ಜನರನ್ನು ಮೇಲೆತ್ತಲು ಸಹೋದರ ಜೋಸೆಫ್ ಮಾಡುವ ಪ್ರಶಂಸನೀಯ ಕಾರ್ಯದ ಹಿಂದೆ, ಸ್ವತಃ ತೀರ ಬಡತನದ ಜೀವನ ಜೀವಿಸುತ್ತಿದ್ದರೂ ನೊಂದು, ಬೆಂದು, ಬಳಲುವವರಿಗಾಗಿ ಅವರ ಪ್ರೀತಿ, ದಯೆ, ಕರುಣೆ, ಅವಿರತ ಶ್ರಮ, ಅಚಲ ಬದ್ಧತೆ ಹಾಗೂ ಸ್ವ-ಬಲಿದಾನದ ನೈಜ ಕಥೆಯನ್ನು ಈ ಪಾಠದಲ್ಲಿ ಒತ್ತಿ ಹೇಳಲಾಗಿದೆ.
ಸಾಧನೆಯ ಹಾದಿಯಲಿ ಸಹೋದರ ಜೋಸೆಫ್ ಸಾದಿಸಿರುವ ಈ ಗಮನಾರ್ಹ ಮೈಲಿಗಲ್ಲಿಗೆ ಗೌರವ ಸಲ್ಲಿಸುತ್ತಾ, ನಾವು ಸಹಾ ಈ ಮಹಾನುಭಾವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಜೋಸೆಫ್ ಅವರ ಸಾಧನೆಯು ಕೇವಲ ಪ್ರಶಸ್ತಿ ಮಾತ್ರವಲ್ಲ, ಅವರ ಅದಮ್ಯ ಮನೋಭಾವಕ್ಕೆ ಒಂದು ಜ್ವಲಂತ ಸಾಕ್ಷಿಯಾಗಿದೆ. ಖಂಡಿತವಾಗಿಯೂ ನಮ್ಮ ಭಾವಿ ಭಾರತದ ಭವಿಷ್ಯವಾದ ನಮ್ಮ ವಿದ್ಯಾರ್ಥಿಗಳಿಗೆ ಮತ್ತು ಬೆಳೆಯುತ್ತಿರುವ ಯುವಜನರಿಗೆ ಈ ಪಾಠವು ಒಂದು ಉಜ್ವಲ ಸ್ಫೂರ್ತಿಯಾಗಲಿದೆ. ನಮ್ಮ ಹೆಜ್ಜೆಗಳನ್ನು ಸಹೋದರ ಜೋಸೆಫ್ ರವರ ಉದಾತ್ತ ಹೆಜ್ಜೆಗಳೊಂದಿಗೆ ಹೊಂದಿಸುತ್ತಾ ನಾವು ಸಹ ಅಸಂಖ್ಯಾತ ನಿರ್ಲಕ್ಷಿತ ಜೀವಿಗಳ ಜೀವನದಲ್ಲಿ ಬೆಳಕು ಮತ್ತು ಸ್ಥೈರ್ಯದ ಪ್ರಕಾಶಮಾನ ದೀಪಗಳಾಗಿ ಬೆಳಗಲು ಒಂದು ಮಾದರಿಯಾಗಲಿ.
ಹೃದಯಾಳದಿಂದ ನಾವು ಸಹೋದರ ಜೋಸೆಫ್ ರವರಿಗೆ ನಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇವೆ. ನಮ್ಮ ಶ್ರದ್ಧೆಯ ಪ್ರಾರ್ಥನೆಗಳೊಂದಿಗೆ ಜೋಸೆಫ್ ರವರಿಗೆ ತಮ್ಮ ಈ ಅತ್ಯುನ್ನತ ಮಾನವೀಯ ಸೇವಾ ಕಾರ್ಯದಲ್ಲಿ ಶಕ್ತಿಯ ಸಮೃದ್ಧಿಗಾಗಿ ಸರ್ವಶಕ್ತನನ್ನು ಬೇಡಿಕೊಳ್ಳುತ್ತಾ ನಿರ್ಗತಿಕರ ನಿಸ್ವಾರ್ಥ ಸೇವೆಯಲ್ಲಿ ಬೇರೂರಿರುವ ಅವರ ಕನಸಿನ ಫಲ ನನಸ್ಸಾಗಲಿ ಹಾಗೂ ದೈವಿಕ ಕ್ರಪೆಯು ಅವರಿಗೆ ಶಕ್ತಿಯನ್ನು ಸಾಮರ್ಥ್ಯವನ್ನು ನೀಡಲಿ. ಅವರ ಕರುಣೆ, ಸಾಂತ್ವನ, ಪ್ರೀತಿ ಮತ್ತು ನಿಸ್ವಾರ್ಥ ಸೇವೆಯ ಫಲವನ್ನು ಇನ್ನೂ ಬಳಲುತ್ತಿರುವ ಸಾವಿರಾರು ಜನರು ಪಡೆಯಲಿ.
ಜೋಸೆಫ್ ಕ್ರಾಸ್ತಾರ ಆದರ್ಶಮಯ ಬದುಕು, ಅವರ ಸಂಸ್ಥೆಯ ತ್ಯಾಗಪೂರ್ಣ ಸೇವೆಯ ಬಗೆಗೆ ಅಧ್ಯಯನ ನಡೆಸಿ ‘ಸ್ನೇಹಗಂಗೆ’ ಎಂಬ ಸಮಗ್ರ ಕೃತಿಯನ್ನು ರಚಿಸಿದಸಮಾಜಮುಖಿ ಚಿಂತನೆಯ ಪ್ರತಿಭಾನ್ವಿತ ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರಿಗೆ ವಿಶೇಷ ನಮನಗಳು 🙏. ಕೃತಿಯನ್ನು ಪಠ್ಯ ಪುಸ್ತಕಕ್ಕೆ ಆಯ್ಕೆ ಮಾಡಿರುವ ವಿ.ವಿ ಪಠ್ಯಪುಸ್ತಕ ಆಯ್ಕೆ ಸಮಿತಿಗೆ ಸಹೋದರ ಜೋಸೆಫ್ ಕ್ರಾಸ್ತಾ, ಮತ್ತು ಸಮಸ್ತ ಸ್ನೇಹಾಲಯ ಕುಟುಂಬದ ಪರವಾಗಿ ಹೃದಯಾಂತರಾಳದ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಸ್ನೇಹಾಲಯಕ್ಕೆ ನಿಮ್ಮ ಸಹಕಾರವು ಹೀಗೇ ಇರಲಿ ಎಂದು ಆಶಿಸುತ್ತೇವೆ.
ರವಿ ನಾಯ್ಕಾಪು ಕೃತಿ ಪಠ್ಯ ಪುಸ್ತಕಕ್ಕೆ ಆಯ್ಕೆ: ಕೆಯುಡಬ್ಲ್ಯೂಜೆ ಅಭಿನಂದನೆ
ಕಾಸರಗೋಡು: ಕಾಸರಗೋಡಿನ ಪತ್ರಕರ್ತ, ಲೇಖಕ, ಸಂಘಟಕ ರವಿ ನಾಯ್ಕಾಪು ಅವರ “ಸ್ನೇಹಗಂಗೆ” ಎಂಬ ಕೃತಿಯು ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅಭಿನಂದನೆ ಸಲ್ಲಿಸಿದೆ.
ಕನ್ನಡ ಸಾರಸ್ವತ ಲೋಕದಲ್ಲಿ ಈಗಾಗಲೇ ಹೆಸರು ಮಾಡಿರುವ ರವಿ ನಾಯ್ಕಾಪು ಅವರು ಕನ್ನಡದಲ್ಲಿ ಐದು ಕೃತಿಗಳನ್ನು ರಚಿಸಿದ್ದಲ್ಲದೆ ಎರಡು ಕೃತಿಗಳನ್ನು ಮಲಯಾಳದಿಂದ ಕನ್ನಡಕ್ಕೆ ಭಾಷಾoತರಿಸಿದ್ದು ಪ್ರಕಟಣೆಗೆ ಸಿದ್ಧವಾಗಿದೆ. ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಅವರ ಪ್ರಕಟಿತ ಪುಸ್ತಕಗಳು. ಇವರ ‘ಸ್ನೇಹಗಂಗೆ’ ಯು ಶ್ರೇಷ್ಠ ಸಮಾಜಮುಖಿ ಕೃತಿಗಿರುವ ಪುರಸ್ಕಾರಕ್ಕೆ ಪಾತ್ರವಾಗಿದೆ. ಅಲ್ಲದೆ, ಮುಂಬಯಿಯ ಅಂಧೇರಿ ಕರ್ನಾಟಕ ಸಂಘವು ಕೊಡಮಾಡುವ ಪ್ರತಿಷ್ಠಿತವಾದ ಪ್ರಥಮ “ಕನ್ನಡ ಸಾಹಿತ್ಯ ಸಾಧಕ ಪ್ರಶಸ್ತಿ”ಯು 2019 ರ ಸಾಲಿನಲ್ಲಿ, Outstanding performance in journalism award 2020 ರಲ್ಲಿ ಇವರಿಗೆ ದೊರೆತಿದೆ. ಕಳೆದ ಎರಡೂವರೆ ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಮುಖ ಪತ್ರಿಕಾ, ದೃಶ್ಯ ಮಾಧ್ಯಮಗಳಲ್ಲಿ ವರದಿಗಾರ, ಉಪಸoಪಾದಕ, ಸುದ್ದಿ ಸಂಪಾದಕ, ಸಂಪಾದಕ, ವಾರ್ತಾವಾಚಕನಾಗಿ ದುಡಿದಿದ್ದಾರೆ. ಕ್ರಿಯಾಶೀಲ ಸೇವೆಗಾಗಿ ಅನೇಕ ಕಡೆಗಳಲ್ಲಿ ಪುರಸ್ಕಾರ, ಅಭಿನಂದನೆ, ಪ್ರಶಸ್ತಿಗೆ ಭಾಜನರಾಗಿದ್ದಾರೆ. ಓರ್ವ ಉತ್ತಮ ಕಾರ್ಯಕ್ರಮ ನಿರೂಪಕನಾಗಿಯೂ ಗುರುತಿಸಿಕೊಂಡಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ, ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ಕೋಶಾಧಿಕಾರಿಯಾಗಿದ್ದಾರೆ.
ರವಿ ನಾಯ್ಕಾಪು ಅವರ ಕೃತಿಯು ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿರುವುದು ಅಭಿನಂದನಾರ್ಹವೆಂದು ಪತ್ರಕರ್ತರ ಸಂಘ (ಕೆ ಯು ಬ್ಲ್ಯೂ ಜೆ)ದ ಕರ್ನಾಟಕ ರಾಜ್ಯಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಸಿ. ಲೋಕೇಶ್ ಹೇಳಿದ್ದಾರೆ.