Emotional Reunification of Golanu Bibi with Her Family after 8 years

/

On February 21, 2024, a woman named Golanu Bibi, who was suffering from mental illness and undergoing treatment at the Government Mental Hospital of Calicut under the Prthyasha project of the Kerala Government, was admitted to Snehalaya Psycho-Social Rehabilitation Home for Women. After receiving care and treatment at Snehalaya, her condition improved. Her address was found, and her family was traced within a few days. On May 23, 2024, she was reunified with her family in West Bengal. Her daughter received her and was happy to see her after eight years of separation. Due to some family problems, she had developed mental illness and left home. The family was overjoyed in this reunion and expressed their gratitude towards Snehalaya for their selfless efforts.

ದಿನಾಂಕ 21.02.2024ರಂದು ಕೇರಳದ ಕ್ಯಾಲಿಕಟ್ ನ ಸರ್ಕಾರಿ ಮಾನಸಿಕ ಆಸ್ಪತ್ರೆಯಿಂದ ಗೋಲನು ಬೀಬಿ ಎಂಬ ಮಹಿಳೆಯನ್ನು ಮುಂದಿನ ಆರೈಕೆ ಮತ್ತು ಪುನರ್ಮಿಲನಕ್ಕಾಗಿ ಕೇರಳ ಸರ್ಕಾರದ ಪ್ರತ್ಯಾಷ ಯೋಜನೆಯಡಿಯಲ್ಲಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಲಾಗಿತ್ತು.ಸ್ನೇಹಾಲಯದ ಆರೈಕೆ ಚಿಕಿತ್ಸೆ ಮತ್ತು ಸಿಬ್ಬಂದಿಯ ಆಪ್ತಸಮಾಲೋಚನೆಯಿಂದ ಕೆಲವೇ ದಿನಗಳಲ್ಲಿ ಆಕೆಯ ಕುಟುಂಬದ ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.
ದಿನಾಂಕ 23.05.2024ರಂದು ಪಶ್ಚಿಮ ಬಂಗಾಳದಲ್ಲಿರುವ ಕುಟುಂಬದೊಂದಿಗೆ ಆಕೆಯ ಪುನರ್ಮಿಲನವಾಯಿತು. ಎಂಟು ವರ್ಷದ ಬಳಿಕ ಮನೆಗೆ ಮರಳಿದ ತಾಯಿಯನ್ನು ನೋಡಿ ಆಕೆಯ ಮಗಳು ತುಂಬಾ ಸಂತೋಷಪಟ್ಟಳು. ಕುಟುಂಬದವರ ಪ್ರಕಾರ ಗೋಲನು ಕುಟುಂಬದಲ್ಲಾದ ಸಮಸ್ಯೆಗಳ ಕಾರಣ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದರು ಅಂತೆಯೇ ಒಂದು ದಿನ ಹೇಳದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಸಂಸ್ಥೆಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?