Ajith Kumar Yadav Reunited with His Family After Four Months

/

ನಾಲ್ಕು ತಿಂಗಳ ಬಳಿಕ ಅಜಿತ್ ಕುಮಾರ್ ಯಾದವ್ ಕುಟುಂಬದೊಂದಿಗೆ ಪುನರ್ಮಿಲನ

ಮಂಜೇಶ್ವರ, ಅಕ್ಟೋಬರ್ 27, 2026: ಬಿಹಾರದ ಖಗರಿಯಾ ಜಿಲ್ಲೆಯ ಶೇರ್ಗಢ್ ಗ್ರಾಮದ ನಿವಾಸಿ ಶ್ರೀ ಅಜಿತ್ ಕುಮಾರ್ ಯಾದವ್ ಅವರು ನಾಲ್ಕು ತಿಂಗಳ ಬಳಿಕ ತಮ್ಮ ತಂದೆ-ತಾಯಿಯೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡರು.

ಕಾರ್ಕಳದ ಬೀದಿಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಅಜಿತ್ ಕುಮಾರ್ ಅವರನ್ನು ಉದ್ಯಮಿ ಹಾಗೂ ಸಮಾಜಸೇವಕರಾದ ಶ್ರೀ ಕಿರಣ್ ಕುಮಾರ್ ಅವರು ಗಮನಿಸಿ, ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡಿದರು. ಬಳಿಕ ಸ್ನೇಹಾಲಯ ತಂಡವು ಅವರನ್ನು 2026ರ ಆಗಸ್ಟ್ 12ರಂದು ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಕರೆತಂದು ಆರೈಕೆ ಮತ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿತು.

ಕಳೆದ ಹತ್ತು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಜಿತ್ ಕುಮಾರ್ ಅವರು ಹೆಚ್ಚಿನ ಆರೈಕೆ ಮತ್ತು ಪುನರ್ವಸತಿಗಾಗಿ 2026ರ ಅಕ್ಟೋಬರ್ 18ರಂದು ಮಹಾರಾಷ್ಟ್ರದ ಕರ್ಜತ್‌ನ ಶ್ರದ್ಧಾ ಫೌಂಡೇಶನ್‌ಗೆ ದಾಖಲಾಗಿದ್ದರು.

ಅಜಿತ್ ಅವರು ಕಳೆದ ಸುಮಾರು ಹತ್ತು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈ ಹಿಂದೆ ಬಿಹಾರದ ಖಗರಿಯಾ ಮತ್ತು ರಾಂಚಿಯಲ್ಲಿ ಆರು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು.

ಕುಟುಂಬದ ಮಾಹಿತಿಯ ಪ್ರಕಾರ, ಅಜಿತ್ ವಿವಾಹಿತರಾಗಿದ್ದು, ಅವರಿಗೆ ಒಬ್ಬ ಮಗನಿದ್ದಾನೆ. ಪತ್ನಿಯಿಂದ ದೂರವಾಗಿರುವುದರಿಂದ ಉಂಟಾದ ವೈಯಕ್ತಿಕ ಸಮಸ್ಯೆಗಳು ಮತ್ತು ಭಾವನಾತ್ಮಕ ಒತ್ತಡದಿಂದಾಗಿ ಅವರು ಹಲವು ಬಾರಿ ಮನೆಯಿಂದ ಹೊರಟು ಹೋಗಿದ್ದರು. ಈ ಬಾರಿ ಅವರು ನಾಪತ್ತೆಯಾಗಿರುವುದು ಮೂರನೇ ಸಲವಾಗಿತ್ತುದ್ದು. ಕುಟುಂಬದ ಸದಸ್ಯರು ಅವರನ್ನು ಪತ್ತೆಹಚ್ಚಲು ವ್ಯಾಪಕವಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ. ಈ ಸಂಬಂಧ ಯಾವುದೇ ನಾಪತ್ತೆ ದೂರು ದಾಖಲಿಸಲಾಗಿರಲಿಲ್ಲ. ಅಜಿತ್ ಅವರಿಗೆ ಅಗತ್ಯವಾದ ಆರೈಕೆ ಮತ್ತು ಪುನರ್ವಸತಿ ದೊರೆತ ನಂತರ, ಅವರನ್ನು ಸುರಕ್ಷಿತವಾಗಿ ಕುಟುಂಬದೊಂದಿಗೆ ಸೇರಿಸಲು ಪ್ರಯತ್ನಗಳನ್ನು ಕೈಗೊಳ್ಳಲಾಯಿತು. ಅದರ ಫಲವಾಗಿ, ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ನ ಸಮನ್ವಯದ ಪ್ರಯತ್ನಗಳಿಂದ ಅವರ ಕುಟುಂಬವನ್ನು ಪತ್ತೆಹಚ್ಚಿ, 2026ರ ಅಕ್ಟೋಬರ್ 26ರಂದು ಬಿಹಾರದ ಬಿಹಾರದ ಖಗರಿಯಾ ಜಿಲ್ಲೆಯ ಶೇರ್ಗಢ್ ಗ್ರಾಮದ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲಾಯಿತು.

ಅಜಿತ್ ಕುಮಾರ್ ಅವರ ಸುರಕ್ಷಿತ ಮರಳುವಿಕೆಯಿಂದ ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರು ಅಪಾರ ಸಂತೋಷ ವ್ಯಕ್ತಪಡಿಸಿದರು. ಅವರ ಮುಂದಿನ ಆರೈಕೆ ಮತ್ತು ಚಿಕಿತ್ಸೆಗೆ ಕುಟುಂಬದವರು ಜವಾಬ್ದಾರಿ ವಹಿಸಿಕೊಂಡಿದ್ದು, ಕೇಂದ್ರದ ವತಿಯಿಂದ ಎರಡು ತಿಂಗಳ ಔಷಧಿಗಳನ್ನು ಒದಗಿಸಲಾಗಿದೆ.

ಈ ಯಶಸ್ವಿ ಪುನರ್ಮಿಲನವು ಸ್ನೇಹಾಲಯ, ಶ್ರದ್ಧಾ ಫೌಂಡೇಶನ್ ಹಾಗೂ ಶ್ರೀ ಕಿರಣ್ ಕುಮಾರ್ ಅವರ ಮಾನವೀಯ ಸೇವೆ ಮತ್ತು ಸಮನ್ವಯದ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.

ನಿಮ್ಮ ಸಮಯೋಚಿತ ಮಾಹಿತಿ ಬೇರ್ಪಟ್ಟ ಕುಟುಂಬಗಳನ್ನು ಮತ್ತೆ ಒಂದುಗೂಡಿಸಬಹುದು.

ಸಂಪರ್ಕಿಸಿ: 9446547033 / 8590339570 / 6282495137

snehalaya-ajith-kumar-yadav-26-oct-2026-04. snehalaya-ajith-kumar-yadav-26-oct-2026-03. snehalaya-ajith-kumar-yadav-26-oct-2026-02. snehalaya-ajith-kumar-yadav-26-oct-2026-01

Ajith Kumar Yadav Reunited with His Family After Four Months

Manjeshwar, October 27, 2026: Mr. Ajith Kumar Yadav, a native of Shergarh village in Bihar’s Khagaria district, was successfully reunited with his parents on October 26, 2026, after being separated from his family for four months.

Ajith was found wandering in a helpless condition on the streets of Karkala by businessman and social worker Mr. Kiran Kumar, who informed Br. Joseph Crasta, Founder of Snehalaya. Subsequently, the Snehalaya team brought Ajith to the Snehalaya Psycho-Social Rehabilitation Centre, Manjeshwar, on August 12, 2026, where he received care and treatment.

Having experienced mental health difficulties for nearly ten years, Ajith was transferred to Shraddha Foundation, Karjat, Maharashtra, on October 18, 2026, for further care and rehabilitation. He had previously received treatment in Khagaria and Ranchi, Bihar, for six months.

According to his family, Ajith is married and has a son. Personal difficulties and emotional distress following his separation from his wife had reportedly led him to leave home several times. This was the third time he had gone missing. Despite extensive efforts by his family to trace him, they had been unable to locate him, and no missing-person complaint had been filed.

Through the coordinated efforts of Snehalaya and Shraddha Foundation, his family was successfully traced, paving the way for his reunion with his parents in Shergarh village, Khagaria district, Bihar, on October 26, 2026.

Ajith’s safe return brought immense happiness to his parents and family members. His family has taken responsibility for his continued care and treatment, and the centre provided him with a two-month supply of medication to support his ongoing treatment.

This successful reunion highlights the compassionate service and collaborative efforts of Snehalaya, Shraddha Foundation, and Mr. Kiran Kumar in helping reunite separated families.

Your timely information can help reunite separated families.

Contact: 9446547033 / 8590339570 / 6282495137

Leave a Reply

Your email address will not be published. Required fields are marked *

Need Help?