On February 15, 2024, a person named Mahesh, who was suffering from mental illness, was rescued from Vontiangadi, Virajpet by Bro. Joseph Crasta and the Snehalaya team based on information provided by Mr. Claud Mario Dsouza, Vontiangadi, and the public. The patient had been wandering the streets of Virajpet without proper intake of food and water. According to information given by the public, the patient had been wandering and staying near the Vontiangadi Bus Station. He was placed under the care and treatment of Snehalaya.
Due to the efforts of the Snehalaya team, his condition improved, and he was shifted to Shraddha, Mumbai for further reunion processes. Thanks to the hard work of the Shraddha team, his condition improved, his address was found, and his family was contacted.
On July 19, 2024, he was successfully reunited with his family in Dubhar Village, Uttar Pradesh. His family was very emotional to see him after 10 years, and the entire village was present to witness this emotional reunion. The family revealed that his real name is Mithun. He was a good writer and a bright student. Due to the consumption of drugs, his condition worsened, leading to his mental illness.
The family expressed their gratitude towards Snehalaya and Shraddha centres for their selfless efforts.
ದಿನಾಂಕ 15.02.2024 ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂತಿನ ವೊಂಟಿಯಂಗಡಿಯ ಬೀದಿಯಲ್ಲಿ ದಿಕ್ಕುದಿಸೆಯಿಲ್ಲದೆ ಅಲೆದಾಡುತಿದ್ದ ಒಬ್ಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು, ಸ್ನೇಹಾಲಯದ ಹಿತೈಷಿಯಾದ ಕ್ಲೌಡ್ ಮಾರಿಯೋ ಡಿಸೋಜಾರವರು ಮತ್ತು ಊರ ನಾಗರಿಕರು ನೀಡಿದ ಮಾಹಿತಿಯ ಮೇರೆಗೆ, ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರು ರಕ್ಷಿಸಿ ಆತನ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ಸ್ನೇಹಾಲಯದ ಅತ್ಯುತ್ತಮ ಚಿಕಿತ್ಸೆ ಮತ್ತು ಆರೈಕೆಯ ಪರಿಣಾಮವಾಗಿ ಆತನ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂತು ಮತ್ತು ಆತನ ಮುಂದಿನ ಪುನರ್ಮಿಲನ ಪ್ರಕ್ರೀಯೆಗಾಗಿ ಮುಂಬೈಯ ಶ್ರದ್ಧಾ ಕೇಂದ್ರಕ್ಕೆ ದಾಖಲಿಸಲಾಯಿತು.
ದಿನಾಂಕ 19.07.2024ರಂದು ಉತ್ತರ ಪ್ರದೇಶದ ದುಭಾರ್ ಗ್ರಾಮದಲ್ಲಿರುವ ಕುಟುಂಬದೊಂದಿಗೆ ಆತನ ಪುನರ್ಮಿಲನವಾಯಿತು. ಹತ್ತು ವರ್ಷದ ಬಳಿಕ ಆತನನ್ನು ಹಿಂಪಡೆದು ಕುಟುಂಬಿಕರು ಮತ್ತು ಗ್ರಾಮಸ್ಥರು ಭಾವುಕರಾದರು. ಕುಟುಂಬಿಕರ ಪ್ರಕಾರ ಆತನ ನಿಜ ಹೆಸರು ಮಿಥುನ್, ಆತ ಒಬ್ಬ ಬುದ್ದಿವಂತ ವಿಧ್ಯಾರ್ಥಿ ಅಂತೆಯೇ ಒರ್ವ ಲೇಖಕನಾಗಿದ್ದ ಆದರೆ ಗಾಂಜಾ ಮತ್ತು ಅಮಲು ಪದಾರ್ಥಗಳ ಸೇವನೆಯಿಂದ ಮಾನಸಿಕ ಸಮಸ್ಯೆಗೆ ತುತ್ತಾಗಿದ್ದ. ಈ ಪುನರ್ಮಿಲನ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು
.




