Snehalaya Admits Woman Found Wandering at Mangalore Junction for Rehabilitation Care

/

ಮಂಗಳೂರು ಜಂಕ್ಷನ್‌ನಲ್ಲಿ ಅಲೆದಾಡುತ್ತಿದ್ದ ಮಹಿಳೆಗೆ ಸ್ನೇಹಾಲಯದಲ್ಲಿ ಆಶ್ರಯ

ಮಂಜೇಶ್ವರ, ಮಾರ್ಚ್ 11, 2026: ಸಂಕಷ್ಟದಲ್ಲಿದ್ದ ಮಹಿಳೆಗೆ ರಕ್ಷಣೆ ಮತ್ತು ಆರೈಕೆ ನೀಡುವ ಉದ್ದೇಶದಿಂದ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ತಹಸಿಲ್ ಹಾಗೂ ಕೋಟ್ವಾಲಿ ವ್ಯಾಪ್ತಿಯ ಮೂಲ ನಿವಾಸಿಯಾದ ಕವಿತಾ ಮಾಲಿಕ್ ಅವರನ್ನು ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.

ಕವಿತಾ ಮಾಲಿಕ್ ಅವರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದು, ತಮ್ಮೊಳಗೆ ಮಾತನಾಡುವುದು, ನಗುವುದು ಹಾಗೂ ವೈಯಕ್ತಿಕ ಸ್ವಚ್ಛತೆ ಇಲ್ಲದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ಅವರ ಪರಿಸ್ಥಿತಿ ಗಮನಿಸಿದಾಗ ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ ಅಗತ್ಯವಿದೆ ಎಂದು ತಿಳಿಯಿತು.

ಈ ವಿಷಯವನ್ನು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಟ್ಯಾಕ್ಸಿ ಚಾಲಕರಾದ ಶ್ರೀ ಸುನಿಲ್ ಕುಮಾರ್ ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ನೇಹಾಲಯ ತಂಡವು ಸ್ಥಳಕ್ಕೆ ತೆರಳಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಸ್ನೇಹಾಲಯಕ್ಕೆ ಧಾಖಲಿಸಿದರು.

ಮಾರ್ಚ್ 10, 2026 ರಂದು ಕವಿತಾ ಮಾಲಿಕ್ ಅವರನ್ನು ಅಧಿಕೃತವಾಗಿ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ವೈದ್ಯಕೀಯ ಪರಿಶೀಲನೆ, ವೈಯಕ್ತಿಕ ಸ್ವಚ್ಛತೆ ಹಾಗೂ ಸಮಗ್ರ ಮನೋಸಾಮಾಜಿಕ ಪುನರ್ವಸತಿ ಸೇವೆಗಳನ್ನು ನೀಡಲಾಗುತ್ತಿದೆ.

ಸ್ನೇಹಾಲಯದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರ ದಯಾಮಯ ನೇತೃತ್ವದಲ್ಲಿ ಸ್ನೇಹಾಲಯ ಸಂಸ್ಥೆ ಅಲೆದಾಡುವ, ತ್ಯಜಿಸಲ್ಪಟ್ಟ ಅಥವಾ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ರಕ್ಷಣೆ ನೀಡಿ, ಅವರ ಗೌರವವನ್ನು ಮರಳಿ ನೀಡುವ ಹಾಗೂ ಸಮಾಜದಲ್ಲಿ ಪುನಃ ಸೇರಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ.

ಕವಿತಾ ಮಾಲಿಕ್ ಅವರ ಕುಟುಂಬದವರು ಅಥವಾ ಸಂಬಂಧಿಕರು ಇದ್ದರೆ ದಯವಿಟ್ಟು ಈ ಸಂಖ್ಯೆಗೆ ಸಂಪರ್ಕಿಸಿರಿ:
📞 9446547033 / 8590339570 / 6282495137

snehalaya-kavitha-rescue-11mar2026-02. snehalaya-kavitha-rescue-11mar2026-03. snehalaya-kavitha-rescue-11mar2026-04. snehalaya-kavitha-rescue-11mar2026-05. snehalaya-kavitha-rescue-11mar2026-06.

Snehalaya Admits Woman Found Wandering at Mangalore Junction for Rehabilitation Care

Manjeshwar, March 11, 2026: In a compassionate step to protect and support a vulnerable individual in distress, Ms. Kavitha Malik, a native of Hapur District under Tehsil and Kotwali jurisdiction of Uttar Pradesh, was admitted to Snehalaya Psychosocial Rehabilitation Centre after being found wandering in a distressed condition at Mangalore Junction Railway Station.

Ms. Kavitha Malik was observed exhibiting wandering behaviour, self-smiling, self-talking, and poor personal hygiene, appearing disconnected from her surroundings and without immediate support. Her condition indicated the urgent need for structured care, medical attention, and psychosocial rehabilitation.

The matter was responsibly brought to attention by Mr. Sunil Kumar, a taxi driver at Mangalore Junction Railway Station, who noticed her vulnerable condition and informed the authorities. Acting promptly, the Snehalaya team reached the location and safely brought her under protective care.

On March 10, 2026, Ms. Kavitha Malik was formally admitted to Snehalaya Psychosocial Rehabilitation Centre for medical evaluation, personal hygiene support, and comprehensive psychosocial rehabilitation in a secure and caring environment.

Under the compassionate leadership of Br. Joseph Crasta, Snehalaya continues its mission of reaching out to individuals who are wandering, abandoned, or in distress—restoring dignity, providing protection, and creating pathways toward healing and social reintegration.

For any information regarding Ms. Kavitha Malik or her family, kindly contact:
📞 9446547033 / 8590339570 / 6282495137

Leave a Reply

Your email address will not be published. Required fields are marked *

Need Help?