A Compassionate Rescue Restores Hope to a Distressed Man

/

ಕರುಣೆಯ ಸ್ಪರ್ಶದಿಂದ ಮರಳಿದ ಬದುಕಿನ ಬೆಳಕು

ಮಂಜೇಶ್ವರ, ಫೆಬ್ರವರಿ 03, 2026: ಥೊಕ್ಕೊಟ್ಟು ಬೀದಿ, ಮಂಗಳೂರು… ಜನಜೀವನದ ಗದ್ದಲದ ಮಧ್ಯೆ, ಯಾರಿಗೂ ಕಾಣದಂತೆ ಒಂದು ಜೀವ ಮೌನವಾಗಿ ಸಂಕಟವನ್ನು ಅನುಭವಿಸುತ್ತಿತ್ತು. ಅಶುದ್ಧ ದೇಹ, ದಿಕ್ಕಿಲ್ಲದ ನಡೆ, ಕಳೆದುಹೋದ ನೋಟ ತನ್ನದೇ ಯೋಚನೆಗಳ ಕತ್ತಲಲ್ಲಿ ಸಿಲುಕಿಕೊಂಡಿದ್ದ ಆ ವ್ಯಕ್ತಿ ಶ್ರೀ ಮಂಥೇಶ್, ಮೂಲತಃ ಗದಗ ಜಿಲ್ಲೆಯ ಮುಳಗುಂದ ಗ್ರಾಮದವರು.

ಅಕ್ಯೂಟ್ ಡಿಲ್ಯೂಷನಲ್ ಸ್ಟೇಟ್ (ADS) ಹಾಗೂ ಥಾಟ್ ಡಿಸಾರ್ಡರ್ ಸಿಂಪ್ಟಮ್ಸ್ (TDS) ಲಕ್ಷಣಗಳಿಂದ ಬಳಲುತ್ತಿದ್ದ ಅವರು, ಸ್ವಯಂ ಆರೈಕೆಯಿಲ್ಲದೆ, ದಿಕ್ಕುತಪ್ಪಿ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಅವರ ಸ್ಥಿತಿ ಕೇವಲ ದೈಹಿಕ ಸಂಕಟವಲ್ಲ ಅದು ಮಾನವ ಗೌರವ, ಸುರಕ್ಷತೆ ಮತ್ತು ಬದುಕಿನ ಮೇಲಿನ ಭರವಸೆಯೇ ಅಪಾಯದಲ್ಲಿದ್ದ ಕ್ಷಣ.

ಈ ಹೃದಯವಿದ್ರಾವಕ ಸ್ಥಿತಿಗೆ ಕರುಣೆಯ ಸ್ಪಂದನೆ ನೀಡಿದ್ದು ಸ್ನೇಹಾಲಯದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ. ಮಾಹಿತಿ ದೊರಕಿದ ತಕ್ಷಣವೇ ಅವರು ಸ್ವತಃ ಸ್ನೇಹಾಲಯದ ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು.
ಅಲ್ಲಿ ಕಂಡದ್ದು ಭಯ, ಗೊಂದಲ ಮತ್ತು ನಿರಾಶೆಯಲ್ಲಿ ಮುಳುಗಿದ ಒಂದು ಜೀವ.
ಆದರೆ ಸ್ನೇಹಾಲಯದ ಬಳಿಯ ಆಯುಧ ಶಕ್ತಿ ಅಲ್ಲ ಮಾನವೀಯತೆ. ಮೃದುವಾದ ಮಾತು, ಸಹನೆಯ ಸ್ಪರ್ಶ, ಗೌರವಪೂರ್ಣ ನಡವಳಿಕೆ…
ಬ್ರ. ಜೋಸೆಫ್ ಕ್ರಾಸ್ತಾ ಹಾಗೂ ತಂಡವು ಶ್ರೀ ಮಂಥೇಶ್ ಅವರ ಬಳಿ ನಿಧಾನವಾಗಿ ಸಮೀಪಿಸಿ, ನಂಬಿಕೆ ಹುಟ್ಟಿಸಿ, ಕಾಳಜಿಯಿಂದ ಅವರ ಕೈ ಹಿಡಿದರು. ಬೀದಿಯೇ ಆಶ್ರಯವಾಗಿದ್ದ ಅವರ ಬದುಕನ್ನು ಸುರಕ್ಷಿತವಾಗಿ ಸ್ನೇಹಾಲಯದ ಮನೆಗೆ ಕರೆತಂದರು .

ಜನವರಿ 25, 2026 ರಂದು, ಶ್ರೀ ಮಂಥೇಶ್ ಅವರನ್ನು ಚಿಕಿತ್ಸೆ, ಮಾನಸಿಕ ಆರೈಕೆ ಮತ್ತು ರಕ್ಷಣೆಯಿಗಾಗಿ ದಾಖಲಿಸಲಾಯಿತು. ಇಂದು ಅವರು ಸುರಕ್ಷಿತ ಹಾಗೂ ಗೌರವಯುತ ವಾತಾವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅವರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳಿಗೆ ಸೂಕ್ತ ಆರೈಕೆ ಒದಗಿಸಲಾಗುತ್ತಿದೆ.

ಇದು ಅವರ ಬದುಕಿನ ಹೊಸ ಅಧ್ಯಾಯ ಮತ್ತೆ ಒಮ್ಮೆ ಬದುಕುವ ಅವಕಾಶ.
ಈ ರಕ್ಷಣಾ ಕಾರ್ಯವು ಸ್ನೇಹಾಲಯದ ಅಚಲ ಧ್ಯೇಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ
ಮರೆತವರಿಗೆ ಗೌರವ,
ಅಸಹಾಯಕರಿಗೆ ಆಶ್ರಯ,
ನಿರಾಶೆಗೆ ಸಿಲುಕಿದ ಬದುಕಿಗೆ ಹೊಸ ಬೆಳಕು
ಒಂದು ಜೀವ ಉಳಿದಿದೆ.
ಒಂದು ಭರವಸೆ ಮರುಹುಟ್ಟಿದೆ.
ಇದೇ ಸ್ನೇಹಾಲಯದ ಮಾನವೀಯ ಸೇವೆಯ ಸಾರ.

ಶ್ರೀ ಮಂಥೇಶ್ ಅಥವಾ ಅವರ ಕುಟುಂಬದ ಕುರಿತು ಮಾಹಿತಿ ಇದ್ದಲ್ಲಿ ದಯವಿಟ್ಟು ಸಂಪರ್ಕಿಸಿ:
📞 9446547033 / 85903 39570 / 6282495137

snehalaya-Manthesh-rescue-03feb2026-02. snehalaya-Manthesh-rescue-03feb2026-03. snehalaya-Manthesh-rescue-03feb2026-04. snehalaya-Manthesh-rescue-03feb2026-05. snehalaya-Manthesh-rescue-03feb2026-06. snehalaya-Manthesh-rescue-03feb2026-07. snehalaya-Manthesh-rescue-03feb2026-08.

A Compassionate Rescue Restores Hope to a Distressed Man

Manjeshwar, February 03, 2026: In a heart-touching act of humanity, Mr. Manthesh, a native of Mulugundha, Gadag, was rescued from Thokkottu Street, Mangalore, where he was found alone, vulnerable, and visibly distressed. Struggling with poor personal care, aimless wandering, and symptoms of Acute Delusional State (ADS) and Thought Disorder Symptoms (TDS), he appeared lost in his own troubled world—raising deep concern for his safety, dignity, and survival.

Responding with compassion and urgency, Bro. Joseph Crasta, Founder of Snehalaya, personally rushed to the location along with the Snehalaya rescue team. Witnessing Mr. Manthesh’s fragile state, Bro. Joseph Crasta and snehalaya team approached him with kindness, patience, and respect, offering not just help, but human warmth that he may have long been deprived of. With gentle reassurance and professional care, the team safely rescued him from the streets that had become his painful shelter.

On January 25, 2026, Mr. Manthesh was admitted for medical attention, psychological care, and protection. Today, he rests in a safe and dignified environment where his physical, emotional, and mental needs are being carefully addressed—giving him a second chance at life and healing.

This rescue stands as a powerful reminder of Snehalaya’s unwavering mission to restore dignity to the forgotten, hope to the helpless, and care to the abandoned. The swift, empathetic action led by Bro. Joseph Crasta not only saved a life but also reignited the possibility of recovery, belonging, and peace for Mr. Manthesh.

Once again, Snehalaya proves that every life matters—and that compassion can transform despair into hope.

For any information regarding Mr. Manthesh or his family, kindly contact:
📞 9446547033 / 85903 39570 / 6282495137

Leave a Reply

Your email address will not be published. Required fields are marked *

Need Help?