From Vulnerability to Care: Bro. Joseph Crasta Leads Snehalaya’s Rescue of Sunil Kumar

/

ಅಸಹಾಯಕತೆಯಿಂದ ಆರೈಕೆಯತ್ತ.. ಬ್ರ. ಜೋಸೆಫ್ ಕ್ರಾಸ್ಟಾ ಅವರ ನೇತೃತ್ವದಲ್ಲಿ ಸುನಿಲ್ ಕುಮಾರ್ ರಕ್ಷಣೆ

ಮಂಗಳೂರು, ಜನವರಿ 16, 2026: ಪಡೀಲ್ ಜಂಕ್ಷನ್…ಜನಸಂದಣಿಯ ಮಧ್ಯೆ ಒಬ್ಬ ಮನುಷ್ಯ ಒಂಟಿಯಾಗಿ ಅಲೆದಾಡುತ್ತಿದ್ದ. ಯಾರಿಗೂ ತಿಳಿಯದ ಆತನು…ತಾನು ಬಟ್ಟೆ ಧರಿಸಿದ್ದಾನೋ ಇಲ್ಲವೋ ಎಂಬ ಅರಿವೇ ಇಲ್ಲದ ಮನಸ್ಸು. ಕಣ್ಣಲ್ಲಿ ಹೊತ್ತಿದ್ದ ಕನಸುಗಳೇ ಒಣಗಿ ಹೋದಂತೆ, ಮುಖದ ಮೇಲೆ ಅಲೆದಾಡುವ ಕಾಲದ ಗುರುತುಗಳು. ದಾರಿ ತಪ್ಪಿದ ದೃಷ್ಟಿ, ಹೆಜ್ಜೆಗಳಿಗೆ ದಿಕ್ಕಿಲ್ಲ, ಉದ್ದೇಶವಿಲ್ಲ. ಯಾರೂ ಗಮನಿಸದ ನೆರಳಿನಂತೆ, ಕಿವಿ ಮುರಿಯುವ ವಾಹನಗಳ ಶಬ್ದಗಳ ನಡುವೆ ರಸ್ತೆಯ ಬದಿಯಲ್ಲಿ ನಡೆಯುತ್ತಿದ್ದೇನೆ, ಹೋಗುತ್ತಿದ್ದೇನೆ ಎಂಬುದನ್ನೇ ಮರೆತ ಜೀವ. ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಯೂ, ಒಂದೇ ದಿನದಲ್ಲಿ ಅಲ್ಲ, ನಿಧಾನವಾಗಿ, ವರ್ಷಗಳಿಂದ ಮರೆಯಾಗಿದೆ. ಬದುಕು ಎಂಬುದು ಈಗ, ಉಸಿರಾಡುವಿಕೆಯಷ್ಟೇ ಉಳಿದದ್ದು ಒಂದು ಕ್ರಿಯೆ.
ಅವನೊಳಗೆ ಇನ್ನೂ ಜೀವಂತವಿರುವುದು ಒಂದು ಮಾತ್ರ ಯಾರಾದರೂ ಒಮ್ಮೆ ಕಣ್ಣಲ್ಲಿ ಕಣ್ಣು ಹಾಕಿ “ನೀನು ಇದ್ದೀಯ” ಎಂದು ಹೇಳುವ ನಿರೀಕ್ಷೆ. ಅದು ನಡೆಯದವರೆಗೂ ಅವನು ನಡೆಯುತ್ತಲೇ ಇರುತ್ತಾನೆ… ರಸ್ತೆಯ ಮೇಲೆ ಅಲ್ಲ, ಮರೆವಿನ ಒಳಗೆ.

ಜನವರಿ 15, 2026 ರಂದು, ಸುನಿಲ್ ಕುಮಾರ್ ಅವರ ಅಸಹಾಯಕ ಸ್ಥಿತಿಯನ್ನು ಮೊದಲಾಗಿ ಗಮನಿಸಿದವರು ಸಾಮಾಜಿಕ ಕಾರ್ಯಕರ್ತ ನವೀನ್ ಅವಿನ್ ವೇಗಸ್, ತೋಕೂರ್, ಇದೂ ಮೊದಲು ಅಲ್ಲ…ಅನೆಕ ಬಾರಿನಿರ್ಗತಿಕ ಬದುಕುಗಳನ್ನು ಅವರು ಸ್ನೇಹಾಲಯದ ಮಡಿಲಿಗೆ ತಲುಪಿಸಿದ್ದಾರೆ. ಈ ದಿನವೂ ಹಾಗೇ, ಮಾನಸಿಕ ಅಶಾಂತಿಯಲ್ಲಿ ಕಳೆದುಹೋದ ಒಬ್ಬ ವ್ಯಕ್ತಿಯನ್ನು ನೋಡಿ ವಿಳಂಬವಿಲ್ಲದೆ ಹೆಜ್ಜೆ ಹಾಕಿದರು. ವಿಷಯ ತಕ್ಷಣವೇ ತಲುಪಿತು ಬ್ರ. ಜೋಸೆಫ್ ಕ್ರಾಸ್ಟಾ ಅವರಿಗೆ. ಅವರಲ್ಲಿ ಕಾಳಜಿ ಎಂದರೆ ಕೇವಲ ಭಾವನೆ ಅಲ್ಲ, ತಕ್ಷಣದ ಕ್ರಿಯೆ.

“ಪ್ರತಿ ರಕ್ಷಣೆ ಒಂದು ಕರ್ತವ್ಯವಲ್ಲ, ಅದು ಮಾನವೀಯತೆಯ ಪ್ರತಿಜ್ಞೆ” ಸಂದೇಶ ದೊರಕುತ್ತಿದ್ದಂತೆಯೇ, ಬ್ರ. ಜೋಸೆಫ್ ಕ್ರಾಸ್ಟಾ ಅವರ ಮಾರ್ಗದರ್ಶನದಲ್ಲಿ ಸ್ನೇಹಾಲಯದ ರಕ್ಷಣಾ ತಂಡ ಪಡೀಲ್ ಜಂಕ್ಷನ್‌ಗೆ ತೆರಳಿ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿತು. ಸುನಿಲ್ ಕುಮಾರ್ ಅವರನ್ನು ಸುರಕ್ಷಿತವಾಗಿ ಸ್ನೇಹಾಲಯದ ಮಾನಸಿಕ–ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಕರೆತಂದು, ಅವರ ಮಾನಸಿಕ ಸ್ಥಿತಿ ಹಾಗೂ ತುರ್ತು ಆರೈಕೆ, ರಕ್ಷಣೆ ಮತ್ತು ನಿರಂತರ ಮೇಲ್ವಿಚಾರಣೆಯ ಅಗತ್ಯತೆಯನ್ನು ಪರಿಗಣಿಸಿ,
ಹೆಚ್ಚಿನ ವೀಕ್ಷಣೆ ಮತ್ತು ಚಿಕಿತ್ಸೆಗೆ ದಾಖಲಿಸಲಾಯಿತು.
ಸ್ನೇಹಾಲಯದ ಮಡಿಲಿಗೆ ಬಂದಾಗ ಅವನ ಅಲೆದಾಟ ನಿಂತಿತು. ಇಲ್ಲಿ ಅವನಿಗೆ ಸಿಕ್ಕಿದ್ದು ಔಷಧ ಮಾತ್ರವಲ್ಲ, ಆಶ್ರಯವೂ ಹೌದು. ಇದೀಗ ಸುನಿಲ್ ಕುಮಾರ್ ಆರೈಕೆಯಲ್ಲಿದ್ದಾರೆ. ಅವನ ಬದುಕಿನ ಕಥೆಯನ್ನು ಮತ್ತೆ ಜೋಡಿಸುವ ಪ್ರಯತ್ನ ನಡೆಯುತ್ತಿದೆ, ನೆನಪಿನ ತುಣುಕುಗಳು, ಕುಟುಂಬದ ಹುಡುಕಾಟ, ಹೊಸ ಬೆಳಗಿನ ನಿರೀಕ್ಷೆ.
ಬ್ರ. ಜೋಸೆಫ್ ಕ್ರಾಸ್ಟಾ ಅವರ ಸಹಾನುಭೂತಿಯ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ಸ್ನೇಹಾಲಯ ಸಂಸ್ಥೆ ಸಂಕಷ್ಟದಲ್ಲಿರುವ ಜೀವಗಳನ್ನು, ಅಲೆದಾಟದಿಂದ ಎತ್ತಿಕೊಂಡು, ಆಶ್ರಯದ ಮಡಿಲಿಗೆ ತರುತ್ತಿದೆ ಮತ್ತು ಅಸಹಾಯಕರಿಗೆ ಗೌರವ, ಭದ್ರತೆ ಮತ್ತು ಆಶೆಯನ್ನು ಮರಳಿ ನೀಡುವ ತನ್ನ ಮಾನವೀಯ ಧ್ಯೇಯವನ್ನು ಅನವರತವಾಗಿ ಮುಂದುವರಿಸುತ್ತಿದೆ.
ಸ್ನೇಹಾಲಯ ಮನಪೂರಿತವಾಗಿ ಹೇಳುತ್ತದೆ ಪ್ರತಿ ಅಲೆದಾಟದ ಹಿಂದೆ ಒಂದು ಮರೆತ ಮನೆ ಇರುತ್ತದೆ.

ಸುನಿಲ್ ಕುಮಾರ್ ಅವರನ್ನು ಗುರುತಿಸುವವರು ಅಥವಾ ಅವರ ಕುಟುಂಬದ ಕುರಿತು ಮಾಹಿತಿ ಇರುವವರು
ದಯವಿಟ್ಟು ಕೆಳಗಿನ ಸಂಖ್ಯೆಗಳ ಮೂಲಕ ಸ್ನೇಹಾಲಯವನ್ನು ಸಂಪರ್ಕಿಸಬೇಕಾಗಿ ವಿನಂತಿ:
📞 9446547033 / 85903 39570 / 6282495137
ಒಂದು ಕರೆ ಸಾಕು, ಒಂದು ಕಾಳಜಿ ಸಾಕು, ಬದುಕು ಮತ್ತೆ ಆರಂಭವಾಗಲು.

snehalaya-sunil-rescue-16jan2026-02. snehalaya-sunil-rescue-16jan2026-03. snehalaya-sunil-rescue-16jan2026-04. snehalaya-sunil-rescue-16jan2026-05. snehalaya-sunil-rescue-16jan2026-06. snehalaya-sunil-rescue-16jan2026-07. snehalaya-sunil-rescue-16jan2026-08. snehalaya-sunil-rescue-16jan2026-09. snehalaya-sunil-rescue-16jan2026-10.

From Vulnerability to Care: Bro. Joseph Crasta Leads Snehalaya’s Rescue of Sunil Kumar

Mangaluru, January 16, 2026: Mr. Sunil Kumar was safely rescued and admitted to the Snehalaya Psycho-Social Rehabilitation Centre after being found in a vulnerable and distressed condition at Padil Junction, Mangaluru.

The admission took place on January 15, 2026, after Mr. Sunil Kumar was noticed wandering in a disoriented state, exhibiting symptoms such as poor personal care, self-talking, poor communication, aggressive behavior, wandering behavior, and disorientation. The matter was first reported by Naveen Avin Veigas Thokur, Social Worker, who promptly informed Bro. Joseph Crasta, enabling immediate intervention.

Responding swiftly to the information received, Bro. Joseph Crasta, along with the Snehalaya rescue team, proceeded to Padil Junction and carried out the rescue operation. Mr. Sunil Kumar was safely transported to the rehabilitation centre, where, considering his mental condition and the urgent need for care, protection, and continuous supervision, he was admitted for further observation and treatment.

Following admission, Mr. Sunil Kumar has been provided with basic medical care, close monitoring, and psycho-social support. Detailed assessments are currently underway to better understand his mental health condition, background, and personal history. Efforts will also be initiated to trace his family members and facilitate a possible reunion.

Under the compassionate leadership and guidance of Bro. Joseph Crasta, Snehalaya continues its humanitarian mission of rescuing individuals in distress, providing comprehensive rehabilitation services, and restoring dignity, safety, and hope to vulnerable persons.

Anyone with information regarding Mr. Sunil Kumar or his family members is kindly requested to contact Snehalaya at the following numbers:

📞 9446547033 / 85903 39570 / 6282495137

Leave a Reply

Your email address will not be published. Required fields are marked *

Need Help?