Manjeshwar, January 06, 2026: Mr. Devan was safely rescued and admitted to the Snehalaya Psycho-Social Rehabilitation Centre after being found in a vulnerable condition on the streets of Kasaragod.
The rescue operation was carried out on January 03, 2026, with the support of the Kasaragod Police. Mr. Devan was brought to Snehalaya by Kasaragod Police Officer Mr. Saleem after he was noticed wandering on the streets exhibiting signs of anxiety, suspiciousness, and poor personal hygiene.
Considering his physical and mental condition and the immediate need for care, protection, and supervision, the Snehalaya team received him and ensured his safe admission to the centre. Following admission, necessary medical attention, observation, and psycho-social support have been initiated.
Further assessment procedures are currently underway to better understand his condition, background, and personal history. Efforts are also being made to trace his family members and facilitate possible reunion.
Under the guidance of Bro. Joseph Crasta, Snehalaya continues its humanitarian mission of rescuing individuals in distress, providing comprehensive rehabilitation services, and restoring dignity and hope to vulnerable persons.
Anyone with information regarding Mr. Devan or his family members is kindly requested to contact Snehalaya at the following numbers:
📞 9446547033 / 85903 39570 / 6282495137

ಕಾಸರಗೋಡ್ ರಸ್ತೆ ಬದಿಯಲ್ಲಿ ದುರ್ಬಲ ಸ್ಥಿತಿಯಲ್ಲಿ ಪತ್ತೆಯಾದ ಶ್ರೀ ದೇವನ್ ರಕ್ಷಣೆ, ಸ್ನೇಹಾಲಯ ಪುನರ್ವಸತಿ ಕೇಂದ್ರಕ್ಕೆ ದಾಖಲಾತಿ
ಮಂಜೇಶ್ವರ, ಜನವರಿ 06, 2026: ಕಾಸರಗೋಡ್ ರಸ್ತೆಯ ಬದಿಯಲ್ಲಿ ದುರ್ಬಲ ಸ್ಥಿತಿಯಲ್ಲಿ ಕಂಡುಬಂದ ಶ್ರೀ ದೇವನ್ ರವರನ್ನು ಕಾಸರಗೋಡ್ ಪೊಲೀಸ್ ತಂಡವು ಸುರಕ್ಷಿತವಾಗಿ ರಕ್ಷಿಸಿ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಗಿದೆ.
ಈ ರಕ್ಷಣಾ ಕಾರ್ಯಾಚರಣೆ ಜನವರಿ 03, 2026 ರಂದು ನಡೆಯಿತು. ಶ್ರೀ ದೇವನ್ ರಸ್ತೆ ಮೇಲೆ ಆತಂಕ, ಸಂಶಯಭಾವ ಮತ್ತು ಸ್ವಯಂ ನಿರ್ವಹಣೆಯ ಕೊರತೆಯ ಲಕ್ಷಣಗಳನ್ನು ತೋರಿಸುತ್ತಿದ್ದರು. ಈ ದೃಶ್ಯ ಕಂಡ ಕಾಸರಗೋಡ್ ಪೊಲೀಸ್ ಅಧಿಕಾರಿ ಶ್ರೀ ಸಲೀಂ ಅವರು ಅವರನ್ನು ಸ್ನೇಹಾಲಯಕ್ಕೆ ತಂದು ದಾಖಲಿಸಿದ್ದಾರೆ.
ದೈಹಿಕ ಹಾಗೂ ಮಾನಸಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತಕ್ಷಣದ ಸಂರಕ್ಷಣೆ, ಆರೈಕೆ ಮತ್ತು ಮೇಲ್ವಿಚಾರಣೆ ಅಗತ್ಯವಿರುವುದರಿಂದ, ಸ್ನೇಹಾಲಯ ತಂಡ ಅವರು ಅವರನ್ನು ಸ್ವೀಕರಿಸಿ, ಕೇಂದ್ರದಲ್ಲಿ ಅವರಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ, ತಪಾಸಣೆ ಮತ್ತು ಮನೋ-ಸಾಮಾಜಿಕ ಬೆಂಬಲ ನೀಡುವ ಕಾರ್ಯಾರಂಭ ಮಾಡಲಾಗಿದೆ.
ಅವರ ಪ್ರಸ್ತುತ ಸ್ಥಿತಿ, ಹಿನ್ನೆಲೆ ಹಾಗೂ ವೈಯಕ್ತಿಕ ಇತಿಹಾಸವನ್ನು ಸಮಗ್ರವಾಗಿ ಅರಿಯುವ ಉದ್ದೇಶದಿಂದ ಮುಂದಿನ ಹಂತದ ಮೌಲ್ಯಮಾಪನ ಕ್ರಮಗಳು ಮುಂದುವರಿದಿವೆ. ಜೊತೆಗೆ, ಅವರ ಕುಟುಂಬದ ಸದಸ್ಯರನ್ನು ಪತ್ತೆಹಚ್ಚಿ, ಸಾಧ್ಯವಾದಷ್ಟು ಕುಟುಂಬ ಪುನರ್ಮಿಲನವನ್ನು ಸಾಧಿಸಲು ಸಕ್ರಿಯ ಪ್ರಯತ್ನಗಳು ನಡೆಯುತ್ತಿವೆ.
ಸ್ನೇಹಾಲಯದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ, ಸಂಕಟದಲ್ಲಿರುವ ವ್ಯಕ್ತಿಗಳನ್ನು ರಕ್ಷಿಸುವ, ಸಮಗ್ರ ಪುನರ್ವಸತಿ ಸೇವೆಗಳನ್ನು ಒದಗಿಸುವ ಮತ್ತು ದುರ್ಬಲ ವ್ಯಕ್ತಿಗಳಿಗೆ ಗೌರವ ಮತ್ತು ಭರವಸೆ ಹಿಂತಿರುಗಿಸುವ ಮಾನವೀಯ ಕಾರ್ಯವನ್ನು ಮುಂದುವರೆಸುತ್ತಿದೆ.
ಶ್ರೀ ದೇವನ್ ಅಥವಾ ಅವರ ಕುಟುಂಬದ ಸದಸ್ಯರ ಬಗ್ಗೆ ಯಾವುದೇ ಮಾಹಿತಿ ಹೊಂದಿರುವವರು, ದಯವಿಟ್ಟು ಸ್ನೇಹಾಲಯವನ್ನು ಸಂಪರ್ಕಿಸಿ: 📞 9446547033 / 85903 39570 / 6282495137
