Hope Restored: Manoj Yadav Reunites with Family After Two-Year Ordeal

/

Manjeshwar, January 01, 2026: Manoj Yadav, a native of Badarahava Kala Tola, Amaper village in Motihari East Champaran district of Bihar, was joyfully reunited with his parents on December 14, 2025 , following the compassionate and coordinated efforts of Snehalaya Charitable Trust in collaboration with Shraddha Foundation, Mumbai. He had been missing for nearly two and a half years after leaving home in search of work.

Suffering from mental health challenges for the past eight years, Manoj had gone missing without any formal complaint being lodged. Despite severe financial hardship, his family never gave up hope and continued searching for him, even as the rest of the village gradually lost hope of his return. His prolonged absence left the family in deep emotional distress.

On September 20, 2025, Manoj was rescued in a vulnerable condition from Gangoli Trasi in Udupi district by a compassionate citizen, Mr. Mohammad Ibrahim MH. He was subsequently provided care and support, and efforts were initiated to trace his identity and family. Through coordinated intervention by Snehalaya Charitable Trust and Shraddha Foundation, Mumbai, and under the guidance of Br. Joseph Crasta, his family was successfully located.

The emotional reunion on December 14, 2025, brought tears of joy to his parents, relatives, and villagers alike. The moment stood as a powerful testament to compassion, perseverance, and collective responsibility, reaffirming Snehalaya’s ongoing commitment to rescuing, rehabilitating, and reuniting vulnerable individuals with dignity and hope.

snehalaya-manoj-reunion-31-dec-2025-02. snehalaya-manoj-reunion-31-dec-2025-04. snehalaya-manoj-reunion-31-dec-2025-03.

ಭರವಸೆ ಪುನರ್ಜನ್ಮ: ಎರಡು ವರ್ಷಗಳ ನಂತರ ಕುಟುಂಬವನ್ನು ಸೇರ್ಪಡೆಯಾದ ಮನೋಜ್ ಯಾದವ್.

ಮಂಜೇಶ್ವರ, ಜನವರಿ 01, 2026: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೊತಿಹಾರಿ ತಾಲ್ಲೂಕಿನ ಅಮಾಪೇರ್ ಗ್ರಾಮದ ಬದರಹವಾ ಕಳಾ ಟೋಲಾ ನಿವಾಸಿ ಮನೋಜ್ ಯಾದವ್ ಅವರು, ಎರಡು ವರ್ಷಕ್ಕೂ ಹೆಚ್ಚು ಕಾಲದ ಬಳಿಕ ಡಿಸೆಂಬರ್ 14, 2025 ರಂದು ತಮ್ಮ ಕುಟುಂಬದೊಂದಿಗೆ ಹೃದಯಸ್ಪರ್ಶಿ ಪುನರ್ಮಿಲನ ಕಂಡರು. ಈ ಮಹತ್ವದ ಸಾಧನೆ ಸ್ನೇಹಾಲಯ ಧರ್ಮಾರ್ಥ ಟ್ರಸ್ಟ್ ಮತ್ತು ಮುಂಬೈಯ ಶ್ರದ್ಧಾ ಫೌಂಡೇಶನ್ ಅವರ ಸಂಯುಕ್ತ ಹಾಗೂ ಮಾನವೀಯ ಪ್ರಯತ್ನಗಳಿಂದ ಸಾಧ್ಯವಾಯಿತು.

ಕಳೆದ ಎಂಟು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಮನೋಜ್, ಉದ್ಯೋಗ ಹುಡುಕುವ ನಿಟ್ಟಿನಲ್ಲಿ ಮನೆ ಬಿಟ್ಟು ಹೊರಟ ನಂತರ ಕಾಣೆಯಾಗಿದ್ದರು. ಕುಟುಂಬದ ಗಂಭೀರ ಆರ್ಥಿಕ ಸಂಕಷ್ಟಗಳ ನಡುವೆಯೂ, ಅವರ ಪೋಷಕರು ನಿರಂತರವಾಗಿ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಸಮಯ ಕಳೆದಂತೆ ಗ್ರಾಮಸ್ಥರು ಅವರ ಮರಳುವ ಬಗ್ಗೆ ನಿರೀಕ್ಷೆ ಕಳೆದುಕೊಳ್ಳುತ್ತಿದ್ದರು. ಈ ದೀರ್ಘ ವಿಯೋಗವು ಕುಟುಂಬವನ್ನು ಆಳವಾದ ಮನೋವ್ಯಥೆಗೆ ತಳ್ಳಿತ್ತು.

2025ರ ಸೆಪ್ಟೆಂಬರ್ 20 ರಂದು, ಉಡುಪಿ ಜಿಲ್ಲೆಯ ಗಂಗೊಳ್ಳಿ–ತ್ರಾಸಿ ಪ್ರದೇಶದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಇದ್ದ ಮನೋಜ್ ಅವರನ್ನು ಸಹೃದಯ ನಾಗರಿಕರಾದ ಶ್ರೀ ಮೊಹಮ್ಮದ್ ಇಬ್ರಾಹಿಂ ಎಂ.ಹೆಚ್. ರವರು ರಕ್ಷಿಸಿದರು. ನಂತರ ಅವರಿಗೆ ಅಗತ್ಯ ಆರೈಕೆ ಒದಗಿಸಲಾಯಿತು ಹಾಗೂ ಅವರ ಗುರುತು ಮತ್ತು ಕುಟುಂಬವನ್ನು ಪತ್ತೆಹಚ್ಚುವ ಪ್ರಯತ್ನಗಳು ಆರಂಭವಾಯಿತು. ಸ್ನೇಹಾಲಯದ ಮಾನಸಿಕ–ಸಾಮಾಜಿಕ ಪುನರ್ವಸತಿ ಕೇಂದ್ರ ಮತ್ತು ಮುಂಬೈಯ ಶ್ರದ್ಧಾ ಫೌಂಡೇಶನ್‌ಗಳ ಸಂಯುಕ್ತ ಪ್ರಯತ್ನಗಳು ಹಾಗೂ ಬ್ರದರ್ ಜೋಸೆಫ್ ಕ್ರಾಸ್ತ ಅವರ ಮಾರ್ಗದರ್ಶನದ ಮೂಲಕ, ಕೊನೆಗೂ ಮನೋಜ್ ಅವರ ಕುಟುಂಬವನ್ನು ಪತ್ತೆಹಚ್ಚಲು ಸಾಧ್ಯವಾಯಿತು.

ಡಿಸೆಂಬರ್ 14, 2025ರಂದು ನಡೆದ ಈ ಭಾವನಾತ್ಮಕ ಪುನರ್ಮಿಲನವು ಅವರ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರ ಕಣ್ಣಲ್ಲಿ ಸಂತೋಷದ ಕಣ್ಣೀರು ತರಿಸಿತು. ಈ ಘಟನೆ ಮಾನವೀಯತೆ, ಸಹಾನುಭೂತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತಿದ್ದು, ಸಂಕಷ್ಟದಲ್ಲಿರುವವರನ್ನು ರಕ್ಷಿಸಿ ಪುನರ್ವಸತಿ ಮಾಡಿಸುವ ಸ್ನೇಹಾಲಯದ ನಿರಂತರ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

Leave a Reply

Your email address will not be published. Required fields are marked *

Need Help?