Kasaragod Jayakiran Reporter Rathan Kumar Rescues Sekhijajul from Hosangady Street

/

Manjeshwar, December 19, 2025: Mr. Sekhijajul was rescued and admitted to the Snehalaya Psycho-Social Rehabilitation Centre following the timely intervention of Mr. Rathan Kumar, a reporter from Jayakiran newspaper, Kasaragod District. Mr. Sekhijajul was found in a helpless and vulnerable condition on Hosangady Road. Recognizing the urgency of the situation, Mr. Rathan Kumar personally transported him on his two-wheeler and brought the matter to the attention of Br. Joseph Crasta, Founder of Snehalaya Charitable Trust. Acting promptly, they ensured Mr. Sekhijajul was safely admitted to theSnehalaya Psycho-Social Rehabilitation Centre for immediate care and shelter.

Mr. Sekhijajul was admitted to the Snehalaya Psycho-Social Rehabilitation Centre on December 18, 2025. He is currently receiving medical treatment, psychiatric evaluation, and psychological support. Necessary rehabilitation measures have been initiated to stabilize his condition and restore his health and well-being.

If anyone has information regarding Mr. Sekhijajul’s identity, family, or background, they are requested to contact the following numbers: 9446547033 or 7994087033.

Under the leadership and inspiration of Br. Joseph Crasta, Snehalaya Charitable Trust remains steadfast in its mission to rescue and rehabilitate persons with mental illness, the homeless, and those abandoned by their families—restoring dignity, hope, and a new beginning to their lives.

snehalaya-Sekhijajul-reunion-19dec-2025-02 snehalaya-Sekhijajul-reunion-19dec-2025-03

ಜಯಕಿರಣ್ ಪತ್ರಿಕೆಯ ವರದಿಗಾರರಾದ ರತನ್ ಕುಮಾರ್ ಅವರಿಂದ ರಕ್ಷಿಸಲ್ಪಟ್ಟ ಶ್ರೀ ಸೆಖಿಜಾಜುಲ್ ಅವರಿಗೆ ಸ್ನೇಹಾಲಯದಲ್ಲಿ ಆರೈಕೆ

ಮಂಜೇಶ್ವರ, ಡಿಸೆಂಬರ್ 19, 2025: ಕಾಸರಗೋಡು ಜಿಲ್ಲೆಯ ಜಯಕಿರಣ್ ಪತ್ರಿಕೆಯ ವರದಿಗಾರರಾದ ಶ್ರೀ ರತನ್ ಕುಮಾರ್ ಅವರ ಸಮಯೋಚಿತ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಶ್ರೀ ಸೆಖಿಜಾಜುಲ್ ಎಂಬ ವ್ಯಕ್ತಿಯನ್ನು ರಕ್ಷಿಸಿ ಸ್ನೇಹಾಲಯ ಮನೋ–ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಹೊಸಂಗಡಿ ರಸ್ತೆಯಲ್ಲಿ ಅಸಹಾಯಕ ಹಾಗೂ ದುರ್ಬಲ ಸ್ಥಿತಿಯಲ್ಲಿ ಕಂಡುಬಂದಿದ್ದ ಶ್ರೀ ಸೆಖಿಜಾಜುಲ್ ಅವರನ್ನು ಕಂಡಂತಹ ಶ್ರೀ ರತನ್ ಕುಮಾರ್ ತನ್ನದೇ ದ್ವಿಚಕ್ರ ವಾಹನದಲ್ಲಿ ಶ್ರೀ ಸೆಖಿಜಾಜುಲ್ ರವರನ್ನು ತಕ್ಷಣದ ಆರೈಕೆ ಮತ್ತು ಆಶ್ರಯಕ್ಕಾಗಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರ ಗಮನಕ್ಕೆ ತಂದು ಶ್ರೀ ಸೆಖಿಜಾಜುಲ್ ಅವರನ್ನು ತ್ವರಿತವಾಗಿ ಕಾರ್ಯನಿರ್ವಹಿಸಿ ಸ್ನೇಹಾಲಯ ಕೇಂದ್ರಕ್ಕೆ ದಾಖಲಿಸುವಲ್ಲಿ ಯಶಸ್ವಿಯಾದರು.

ಡಿಸೆಂಬರ್ 18, 2025 ರಂದು ಶ್ರೀ ಸೆಖಿಜಾಜುಲ್ ಅವರನ್ನು ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಪ್ರಸ್ತುತ ಅವರಿಗೆ ವೈದ್ಯಕೀಯ ಚಿಕಿತ್ಸೆ, ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಮಾನಸಿಕ ಬೆಂಬಲ ನೀಡಲಾಗುತ್ತಿದೆ. ಅವರ ಸ್ಥಿತಿ ಸ್ಥಿರಗೊಳಿಸಿ ಆರೋಗ್ಯ ಮತ್ತು ಕಲ್ಯಾಣವನ್ನು ಪುನಃಸ್ಥಾಪಿಸಲು ಅಗತ್ಯ ಪುನರ್ವಸತಿ ಕ್ರಮಗಳನ್ನು ಆರಂಭಿಸಲಾಗಿದೆ.

ಶ್ರೀ ಸೆಖಿಜಾಜುಲ್ ಅವರ ಗುರುತು, ಕುಟುಂಬ ಅಥವಾ ಹಿನ್ನೆಲೆ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ದಯವಿಟ್ಟು ಈ ಸಂಖ್ಯೆಗಳ ಮೂಲಕ ಸಂಪರ್ಕಿಸಿ: 9446547033 ಅಥವಾ 7994087033

ಬ್ರ. ಜೋಸೆಫ್ ಕ್ರಾಸ್ತಾ ಅವರ ನೇತೃತ್ವ ಮತ್ತು ಪ್ರೇರಣೆಯೊಂದಿಗೆ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮಾನಸಿಕ ಅಸ್ವಸ್ಥರು, ಗೃಹರಹಿತರು ಹಾಗೂ ಕುಟುಂಬದಿಂದ ತ್ಯಜಿತರಾದವರನ್ನು ರಕ್ಷಿಸಿ, ಪುನರ್ವಸತಿ ಒದಗಿಸುವ ಮೂಲಕ ಅವರ ಜೀವನಕ್ಕೆ ಗೌರವ, ಆಶೆ ಮತ್ತು ಹೊಸ ಆರಂಭವನ್ನು ನೀಡುವ ಸೇವೆಗೆ ನಿರಂತರವಾಗಿ ಸಮರ್ಪಿತವಾಗಿದೆ.

Leave a Reply

Your email address will not be published. Required fields are marked *

Need Help?