Manjeshwar, November 22, 2025: The rescue team of Snehalaya once again demonstrated timely compassion by assisting a man found in a distressed and helpless state at the Central Railway Station, Mangaluru. The individual, identified as Mr. Katka Padya, was seen wandering aimlessly and appeared confused, disoriented, and unable to care for himself.
Upon receiving information about his condition, the Snehalaya rescue team immediately reached the spot and ensured his safe rescue. After assessing his mental and physical state, they brought him to the Snehalaya Psycho-Social Rehabilitation Center. He was officially admitted on 19/11/2025, where he began receiving medical attention and psychiatric support.
According to the rehabilitation staff, Mr. Padya is responding well to treatment. With proper care, a safe environment, and regular medical supervision, his condition is gradually improving. The continuous efforts of the Snehalaya team aim to help him regain stability and rebuild his life with dignity.
This incident serves as a reminder of the importance of helping individuals facing mental health challenges in public spaces. Snehalaya encourages anyone who may have information about Mr. Katka Padya’s family or place of origin to reach out at 9446547033 / 85903 39570 / 6282495137, as one call could reunite him with his loved ones and bring hope back into his life.

ಕರುಣೆಯ ಕವಲಾಗಿ ಮಾನಸಿಕ ಅಸ್ಥಿರ ವ್ಯಕ್ತಿಗೆ ಜೀವದ ಸ್ಪರ್ಶ ನೀಡಿದ ಸ್ನೇಹಾಲಯ: ಕಟ್ಕ ಪದ್ಯರ ವರಿಗೆ ಮಾನವೀಯ ಆರೈಕೆ
ಮಂಜೇಶ್ವರ, ನವೆಂಬರ್ 22, 2025: ಮಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಮಾನಸಿಕ ಅಸ್ಥಿರತೆ ಮತ್ತು ಗೊಂದಲದ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಕಟ್ಕ ಪದ್ಯ ಎಂದು ಕರೆಯಲ್ಪಡುವ ವ್ಯಕ್ತಿಯನ್ನು ಸ್ನೇಹಾಲಯ ರಕ್ಷಣಾ ತಂಡ ಸೂಕ್ತ ಸಮಯದಲ್ಲಿ ತಲುಪಿ ರಕ್ಷಿಸಿದೆ. ಆ ವ್ಯಕ್ತಿಯನ್ನು ಕಟ್ಕ ಪದ್ಯ ಎಂದು ಗುರುತಿಸಲಾಗಿದೆ.
ಮಾಹಿತಿ ಲಭಿಸಿದ ತಕ್ಷಣ ಎಂದಿನಂತೆ ಸ್ನೇಹಾಲಯದ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ಅವರನ್ನು ಕಾಪಾಡಿತು. ಪ್ರಾಥಮಿಕ ವೈದ್ಯಕೀಯ ಮತ್ತು ಮಾನಸಿಕ ಸ್ಥಿತಿ ಪರಿಶೀಲನೆಯ ನಂತರ, ಅವರನ್ನು ಸ್ನೇಹಾಲಯ ಮನೋ–ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಯಿತು ನಂತರ ನವೆಂಬರ್ 19, 2025 ರಂದು ದಾಖಲು ಮಾಡಲಾಯಿತು. ಪ್ರಸ್ತುತ ಕಟ್ಕ ಪದ್ಯ ಅವರ ಆರೋಗ್ಯ ಸ್ಥಿತಿ ಸ್ನೇಹಾಲಯದ ನುರಿತ ಸಿಬ್ಬಂದಿಗಳ ಮೇಲ್ವಿಚಾರಣೆಯಡಿಯಲ್ಲಿ ಸುಧಾರಿಸುತ್ತಿದೆ.
ಸಂಸ್ಥೆಯ ಸಿಬ್ಬಂದಿಯ ಪ್ರಕಾರ, ಕಟ್ಕ ಪದ್ಯ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸೂಕ್ತ ವೈದ್ಯಕೀಯ ಆರೈಕೆ, ಮನೋಸಾಮಾಜಿಕ ಬೆಂಬಲ ಮತ್ತು ಪ್ರೋತ್ಸಾಹದ ವಾತಾವರಣದಿಂದ ಅವರು ಮಾನಸಿಕ ಸ್ಥಿರತೆ ಪಡೆಯುತ್ತಿದ್ದಾರೆ. ಸ್ನೇಹಾಲಯ ತಂಡವು ಅವರ ಜೀವನವನ್ನು ಪುನಃ ಗೌರವಯುತವಾಗಿ ನಿರ್ಮಿಸಲು ನಿರಂತರ ಪ್ರಯತ್ನಿಸುತ್ತಿದೆ.
ಸ್ನೇಹಾಲಯ ಸಂಸ್ಥೆ ಕಟ್ಕ ಪದ್ಯ ಅವರ ಕುಟುಂಬ ಅಥವಾ ಮೂಲ ಸ್ಥಳದ ಬಗ್ಗೆ ಮಾಹಿತಿ ಇರುವವರು ಸಂಪರ್ಕಿಸಲು ವಿನಂತಿಸಿದೆ. ಸಂಪರ್ಕ ಸಂಖ್ಯೆ: 9446547033 / 8590339570 / 6282495137. ನಿಮ್ಮ ಸಣ್ಣ ಸಹಾಯ ಕಟ್ಕ ಪದ್ಯ ಅವರನ್ನು ಪುನಹಾ ತಮ್ಮ ಕುಟುಂಬವನ್ನು ಸೇರಿಸಲು ಮತ್ತು ಜೀವನಕ್ಕೆ ಹೊಸ ಆಶೆ-ಭರವಸೆ ಭರಿಸಲು ಅತೀ ಅಗತ್ಯವಾಗಿದೆ.
