Snehalaya Provides Lifesaving Support to Man Found in Distress at Manjeshwar

/

Manjeshwar, November 20, 2025: On Wednesday, the rescue team of Snehalaya quickly responded to help a man who was found in a disturbed and helpless condition at the Manjeshwar auto stand. Their timely action and compassionate approach ensured safety for another vulnerable person.

The man has been identified as Mr. Jalo. When the public first noticed him, he was suffering from severe mental distress. He was unable to take care of himself and showed confusion, unstable behaviour, and signs of being lost. People became worried about his safety and health.

Based on information given by a local resident, Mr. Badurudeen, the Snehalaya rescue team, led by Br. Joseph Crasta, immediately reached the spot. After assessing the situation, they admitted him to the Snehalaya Psycho-Social Rehabilitation Center on 19-11-2025. He is now receiving proper psychiatric care, medical treatment, and rehabilitation support. According to the staff, his condition is gradually improving, and he is being given all the help needed to regain stability and lead a normal life again.

This incident highlights the importance of noticing and helping people who struggle with mental health issues in public places. The quick response of the public and the dedicated service of the Snehalaya team show a strong example of humanity and compassion.

If anyone has information about Mr. Jalo’s family, identity, or place of origin, please contact Snehalaya at:
📞 9446547033 / 85903 39570 / 6282495137

Your one call can help reunite a vulnerable person with his family and bring safety, dignity, and hope back into his life.

snehalaya-Jalo-rescue-20nov2025-02. snehalaya-Jalo-rescue-20nov2025-03. snehalaya-Jalo-rescue-20nov2025-04. snehalaya-Jalo-rescue-20nov2025-05. snehalaya-Jalo-rescue-20nov2025-06. snehalaya-Jalo-rescue-20nov2025-07. snehalaya-Jalo-rescue-20nov2025-08.

ಮಂಜೇಶ್ವರದಲ್ಲಿ ಸಂಕಟದಲ್ಲಿದ್ದ ವ್ಯಕ್ತಿಗೆ ಸಮಯೊಚಿತ ನೆರವು: ಅಸಹಾಯಕ ವ್ಯಕ್ತಿಗೆ ಆಶಾದೀಪವಾದ ಸ್ನೇಹಾಲಯ.

ಮಂಜೇಶ್ವರ, ನವೆಂಬರ್ 20, 2025 — ಮಾನವೀಯತೆಯನ್ನು ತೋರುವ ಜ್ವಲಂತ ಉದಾಹರಣೆಯಾಗಿ, ಸ್ನೇಹಾಲಯ ರಕ್ಷಣಾ ತಂಡವು ಬುಧವಾರ ಮಂಜೇಶ್ವರ ಆಟೋ ನಿಲ್ದಾಣದಲ್ಲಿ ಮಾನಸಿಕ ತೊಂದರೆ ಅನುಭವಿಸುತ್ತಿದ್ದ ಒಬ್ಬ ವ್ಯಕ್ತಿಯ ನೆರವಿಗೆ ತಲುಪಿತು.

ಶ್ರೀ ಜಾಲೋ ಎಂದು ಗುರುತಿಸಲ್ಪಟ್ಟ ಓರ್ವ ವ್ಯಕ್ತಿ ಮಾನಸಿಕ ಗೊಂದಲಕ್ಕೀಡಾಗಿ, ಆತಂಕದಿಂದ ಇದ್ದರು. ಅವರು ವೈಯಕ್ತಿಕ ಆರೈಕೆ ಮಾಡಿಕೊಳ್ಳಲು ಅಸಮರ್ಥರಾಗಿದ್ದು, ಅಸ್ಥಿರತೆಯ ಲಕ್ಷಣಗಳನ್ನು ತೋರಿಸುತ್ತಿದ್ದರು.

ಸ್ಥಳೀಯ ನಾಗರಿಕರಾದ ಶ್ರೀ ಬದುರುದೀನ್ ಅವರಿಂದ ಬಂದ ಮಾಹಿತಿಯನ್ನು ಆಧರಿಸಿ ಬ್ರ.ಜೋಸಫ್ ಕ್ರಾಸ್ತಾರವರ ಮುಂದಾಳತ್ವದಲ್ಲಿ ಸ್ನೇಹಾಲಯದ ರಕ್ಷಣಾ ತಂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರ ಅವರನ್ನು ದಿನಾಂಕ 19-11-2025 ರಂದು ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪ್ರಸ್ತುತ ಅವರು ಅಗತ್ಯವಾದ ಮಾನಸಿಕ ಆರೈಕೆ, ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ ಸಹಾಯ ಪಡೆಯುತ್ತಿದ್ದಾರೆ. ಸ್ನೇಹಾಲಯದ ಸಿಬ್ಬಂದಿಯವರ ಪ್ರಕಾರ, ಶ್ರೀ ಜಾಲೋ ಅವರ ಸ್ಥಿತಿ ಕ್ರಮೇಣ ಸುಧಾರಿಸುತ್ತಿದ್ದು, ಅವರಿಗೆ ಸ್ಥಿರತೆ ಮತ್ತು ಸಾಮಾನ್ಯ ಜೀವನಕ್ಕೆ ವಾಪಸಾಗಲು ಅಗತ್ಯವಾದ ಎಲ್ಲಾ ನೆರವು ನೀಡಲಾಗುತ್ತಿದೆ.

ಈ ಘಟನೆ ಮಾನಸಿಕ ಆರೋಗ್ಯದ ಮಹತ್ವವನ್ನು ನೆನಪಿಸುತ್ತದೆ. ಜೊತೆಗೆ ಸ್ನೇಹಾಲಯವು ಕರುಣೆಯ ಸಹಾಯ ನೀಡುವ ನಿಲುವನ್ನು ಮುಂದುವರಿಸುತ್ತಿದೆ ಎಂಬುದನ್ನೂ ತೋರಿಸುತ್ತದೆ.

ಯಾರಿಗಾದರೂ ಶ್ರೀ ಜಾಲೋ ಅಥವಾ ಅವರ ಕುಟುಂಬದ ಬಗ್ಗೆ ಮಾಹಿತಿ ಇದ್ದರೆ, ದಯವಿಟ್ಟು ಸ್ನೇಹಾಲಯವನ್ನು ಸಂಪರ್ಕಿಸಿ:
📞 9446547033 / 85903 39570 / 6282495137

ನಿಮ್ಮ ಸಮಯೋಚಿತ ಸಹಾಯವು ಒಬ್ಬ ಅಸಹಾಯಕನ ಜೀವಕ್ಕೆ ಸುರಕ್ಷತೆ, ಗೌರವ ಮತ್ತು ಭರವಸೆ ನೀಡಬಹುದು.

Leave a Reply

Your email address will not be published. Required fields are marked *

Need Help?