Manjeshwar, November 15, 2025: A man named Nithesh , who was found wandering on Puttur Street in a neglected and mentally disturbed condition, was safely rescued by two public-spirited volunteers, Lorance and Keshava.
According to information provided by Lorance, Nithesh displayed symptoms of mental illness, poor hygiene, wandering behaviour, and a history of alcohol use. Realising the urgent need for care and protection, Lorance and Keshava immediately brought him safely to Snehalaya.
Nithesh was admitted on 09/11/2025 and is currently receiving medical care, psychiatric evaluation, and rehabilitation services at the Snehalaya Psycho-Social Rehabilitation Centre in Manjeshwar. The Snehalaya team is now working to trace his background and reunite him with his family.
If anyone has information about Nithesh or his family, please contact the Snehalaya team at:
📞 9446547033 / 85903 39570 / 6282495137
Your support can help restore dignity and hope to a vulnerable life.

ಪುತ್ತೂರು ರಸ್ತೆಯಿಂದ ರಕ್ಷಿಸಲ್ಪಟ್ಟ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಸ್ನೇಹಾಲಯದ ಜೀವದಾಯಿ ನೆರವು
ಮಂಜೇಶ್ವರ್, ನವೆಂಬರ್ 15, 2025: ಪುತ್ತೂರು ರಸ್ತೆಯಲ್ಲಿ ನಿರ್ಲಕ್ಷ್ಯಿತ ಮತ್ತು ಮನೋವೈಕಲ್ಯದ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ನಿತೇಶ್ ಎಂಬ ವ್ಯಕ್ತಿಯನ್ನು ಸಾರ್ವಜನಿಕ ಸೇವಾ ಮನೋಭಾವ ಹೊಂದಿದ್ದ ಲಾರೆನ್ಸ್ ಹಾಗೂ ಕೇಶವ ಎಂಬ ಇಬ್ಬರು ಸ್ವಯಂಸೇವಕರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಲಾರೆನ್ಸ್ ರವರ ಮಾಹಿತಿಯ ಪ್ರಕಾರ, ನಿತೇಶ್ ಮನೋವೈಕಲ್ಯ ಲಕ್ಷಣಗಳು, ಅಸ್ವಚ್ಛತೆ, ಅಲೆದಾಟದ ವರ್ತನೆ ಹಾಗೂ ಮದ್ಯಪಾನದ ಹವ್ಯಾಸವನ್ನು ಹೊಂದಿದ್ದರಿಂದ ತಕ್ಷಣದ ಆರೈಕೆ ಮತ್ತು ರಕ್ಷಣೆಯ ಅಗತ್ಯವಿತ್ತು. ಇದನ್ನು ಮನಗಂಡ ಲಾರೆನ್ಸ್ ಹಾಗೂ ಕೇಶವರವರು ನಿತೇಶ್ ರವರನ್ನು ಸುರಕ್ಷಿತವಾಗಿ ಸ್ನೇಹಾಲಯಗೆ ತಂದು ಒಪ್ಪಿಸಿದ್ದಾರೆ.
ನಿತೇಶ್ ಅವರನ್ನು ದಿನಾಂಕ 09,11,2025 ರಂದು ದಾಖಲು ಮಾಡಲಾಗಿದ್ದು, ಪ್ರಸ್ತುತ ಮಂಜೇಶ್ವರದಲ್ಲಿರುವ ಸ್ನೇಹಾಲಯ ಮನೋವಿಕೃತ ಪುನರ್ಚೆತನ ಕೇಂದ್ರದಲ್ಲಿ ವೈದ್ಯಕೀಯ ಆರೈಕೆ, ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಪುನರ್ವಸತಿ ಸೇವೆಗಳನ್ನು ಪಡೆಯುತ್ತಿದ್ದಾರೆ. ಸ್ನೇಹಾಲಯ ತಂಡವು ಈಗ ಅವರ ಹಿನ್ನಲೆ ಪತ್ತೆಹಚ್ಚುವ ಮತ್ತು ಕುಟುಂಬದೊಂದಿಗೆ ಪುನರ್ಮಿಲನಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.
ನಿತೇಶ್ ಅಥವಾ ಅವರ ಕುಟುಂಬದ ಕುರಿತು ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಕೆಳಗಿನ ಸಂಖ್ಯೆಗಳ ಮೂಲಕ ಸ್ನೇಹಾಲಯ ತಂಡವನ್ನು ಸಂಪರ್ಕಿಸಿ: 📞 9446547033 / 85903 39570 / 6282495137
ನಿಮ್ಮ ಸಹಕಾರವು ಒಂದು ಜೀವನಕ್ಕೆ ಗೌರವ ಮತ್ತು ಆಶೆಯನ್ನು ಮರುನಿರ್ಮಿಸಲು ಸಹಾಯ ಮಾಡಬಹುದು.
