Manjeshwar, November 13, 2025: The Snehalaya Psycho Social Rehabilitation Centre (SPSRC) team successfully rescued a woman named Sarita and her child from Mangalore Central Railway Station after they were found wandering in a helpless and distressed condition.
The rescue operation was carried out under the guidance of Br. Joseph Crasta, Founder of Snehalaya Charitable Trust (R). Upon rescue, Sarita appeared disoriented and exhausted, indicating possible psychological distress. Both mother and child have been admitted to the Snehalaya Women and Child Care Unit, where they are receiving essential medical care, nourishment, and psychosocial support.
The Snehalaya team is now working to trace Sarita’s family members to ensure their safe reunion. The Trust has appealed to the public for any information regarding Sarita’s background or relatives.
If you have any information that could help reunite Sarita and her child with their family, please contact 9446547033 or 7994087033. Even the smallest detail could make a life-changing difference.
Snehalaya Charitable Trust continues its mission to protect, rehabilitate, and restore dignity to individuals in distress, reaffirming its commitment to humanity and care.

ಮಾನವೀಯತೆ ಗೆದ್ದ ಕಥೆಃ ಬ್ರ. ಜೋಸೆಫ್ ಕ್ರಾಸ್ಟ ಅವರ ಮಾರ್ಗದರ್ಶನದಲ್ಲಿ ತಾಯಿ ಮತ್ತು ಮಗುವಿನ ಜೀವ ರಕ್ಷಿಸಿದ ಸ್ನೇಹಾಲಯದ
ನವೆಂಬರ್ 13, 2025: ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಸಹಾಯಕ, ಅಶಾಂತ ಮತ್ತು ಅನಿರ್ದಿಷ್ಟ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಸರಿತಾ ಎನ್ನುವ ಮಹಿಳೆ ಮತ್ತು ಆಕೆಯ ಮಗುವನ್ನು ಸ್ನೇಹಾಲಯ ಮನೋ ಸಾಮಾಜಿಕ ಪುನರ್ವಸತಿ ಕೇಂದ್ರದ (ಎಸ್ಪಿಎಸ್ಆರ್ಸಿ) ತಂಡವು ಯಶಸ್ವಿಯಾಗಿ ರಕ್ಷಿಸಿದೆ.
ಈ ರಕ್ಷಣಾ ಕಾರ್ಯವನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥಾಪಕ ಬ್ರದರ್ ಜೋಸೆಫ್ ಕ್ರಾಸ್ತರವರ ಸುವಿವೇಕ ದಕ್ಷತೆ ಮತ್ತು ನಿಪುಣ ಮಾರ್ಗದರ್ಶನದಲ್ಲಿ ನಡೆಸಲಾಯಿತು. ರಕ್ಷಣೆಯ ಸಮಯದಲ್ಲಿ ಸರಿತಾ ಆತ್ಮವಿಶ್ವಾಸ ಕಳೆದುಕೊಂಡ ಹಾಗೂ ದೇಹ ಶ್ರಮದಿಂದ ಬಳಲಿದ ಸ್ಥಿತಿಯಲ್ಲಿ ಕಂಡುಬಂದರು. ತಾಯಿ ಮತ್ತು ಮಗುವನ್ನು ಈಗ ಸ್ನೇಹಾಲಯ ಮಹಿಳಾ ಮತ್ತು ಶಿಶು ಆರೈಕೆ ಘಟಕಕ್ಕೆ ದಾಖಲಿಸಲಾಗಿದ್ದು, ಅಲ್ಲಿ ಅವರು ಅಗತ್ಯ ವೈದ್ಯಕೀಯ ಚಿಕಿತ್ಸೆ, ಅತ್ಯುತ್ತಮ ಆರೈಕೆ ಹಾಗೂ ಮಾನಸಿಕ ಬೆಂಬಲವನ್ನು ಪಡೆಯುತ್ತಿದ್ದಾರೆ.
ಸರಿತಾ ಅವರ ಕುಟುಂಬ ಸದಸ್ಯರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಪುನರ್ಮಿಲನಗೊಳಿಸಲು ಸ್ನೇಹಾಲಯ ತಂಡ ಶ್ರಮಿಸುತ್ತಿದೆ. ಸರಿತಾ ಅವರ ಕುಟುಂಬ ಅಥವಾ ಅವರ ಹಿನ್ನೆಲೆ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿರುವವರು ಮಾಹಿತಿಯನ್ನು ಸ್ನೇಹಾಲಯದೊಂದಿಗೆ ಹಂಚಿಕೊಳ್ಳುವಂತೆ ಟ್ರಸ್ಟ್ ಜನಸಾಮಾನ್ಯರಿಗೆ ವಿನಂತಿಸಿದೆ. ಸರಿತಾ ಮತ್ತು ಅವರ ಮಗುವನ್ನು ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು ಉಪಯುಕ್ತವಾಗುವ ಮಾಹಿತಿ ಯಾರಿಗಾದರೂ ತಿಳಿದಿದ್ದರೆ, ದಯವಿಟ್ಟು 9446547033 ಅಥವಾ 7994087033 ಗೆ ಸಂಪರ್ಕಿಸಿ. ನಿಮ್ಮ ಅಲ್ಪ ಮಾಹಿತಿ ಕೂಡ ಅವರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಬಹುದು.
ಕಳೆದ ಹದಿನಾರು ವರ್ಷಗಳಿಂದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಸರಿತಳಂತಹ ಸಾವಿರಾರು ಜನರನ್ನು ರಕ್ಷಿಸಿ ಅವರಿಗೆ ಸಾಂತ್ವನ, ಪುನರ್ವಸತಿ, ಮತ್ತು ಮಾನವೀಯ ಗೌರವವನ್ನು ಪುನಃಸ್ಥಾಪಿಸಲು ತನ್ನ ಸೇವಾಭಾವದ ಕಾರ್ಯವನ್ನು ಮುಂದುವರಿಸುತ್ತಿದೆ.
