Manjeshwar: A autobiography celebrating a life of compassion has been unveiled in Hosangadi. Titled Hebronile Snehathoovalakal (in Malayalam), the book records the remarkable journey of Joseph Crasta, the visionary founder of the Snehalaya Charitable Trust. The release event took place in the serene setting of Infant Jesus Church, Hosangadi, where faith and service intertwined to honour a lifetime devoted to helping others.
The atmosphere was warm and reverent as the Vicar, Rev. Fr. Louis mariadas, stepped forward to formally release the memoir. His gesture marked not just the unveiling of a book, but a recognition of years spent in the quiet, steadfast work of charity. The congregation, guided by the gentle cadence of the service, listened as Br. Joseph Crasta’s story unfolded an crusade of small acts of kindness that accumulated into a lasting legacy of hope for those in need.
The gathering Parishioners provided a fitting backdrop for the momentous occasion. Mr. Thomas, the Parish Coordinator, welcomed attendees with a heartfelt note of gratitude and anticipation, inviting everyone to journey through Br. Joseph Crasta’s experiences, trials, and triumphs. The ceremony carried a celebratory yet contemplative mood, inviting readers to draw inspiration from a life lived in service, courage, and humility.
Hebronile Snehathoovalagal promises to provide readers with intimate glimpses into the motivations, challenges, and moments of grace that shaped Crasta’s path. It stands as a beacon for aspiring volunteers and donors alike, inviting them to partake in a shared mission of compassion and community support.


സ്നേഹാലയ ചാരിറ്റബിൾ ട്രസ്റ്റ് സ്ഥാപകൻ ജോസഫ് ക്രാസ്റ്റയുടെ ആത്മകഥ പ്രകാശനം ചെയ്തു
മഞ്ചേശ്വരം: സ്നേഹാലയ ചാരിറ്റബിൾ ട്രസ്റ്റ് സ്ഥാപകൻ ജോസഫ് ക്രാസ്റ്റയുടെ പുതിയ ആത്മകഥയായ “ഹെബ്രോണിലെ സ്നേഹത്തൂവാലകൾ” (Hebronile Snehathoovalakal) ഹൊസൻഗാഡി ഇൻഫന്റ് ജീസസ് പള്ളിയിൽ വെച്ച് 26/10/2025 ന് പ്രകാശനം ചെയ്തു.
വികാരി റവ.ഫാ. ലൂയിമരിയദാസ് പുസ്തകം പ്രകാശനം ചെയ്തു. ഇടവക കോ-ഓർഡിനേറ്റർ തോമസ് പരിപാടിയിൽ പങ്കെടുത്തവരെ സ്വാഗതം ചെയ്തു. ജീവകാരുണ്യ പ്രവർത്തനങ്ങൾക്ക് ജീവിതം ഉഴിഞ്ഞുവെച്ച ജോസഫ് ക്രാസ്റ്റയുടെ ജീവിതാനുഭവങ്ങളാണ് ഈ ആത്മകഥയിലൂടെ വായനക്കാരിലേക്ക് എത്തുന്നത്.

ಹೊಸಂಗಡಿಯಲ್ಲಿ ಬ್ರದರ್ ಜೋಸೆಫ್ ಕ್ರಾಸ್ಟ ಅವರ ಆತ್ಮಚರಿತ್ರೆ ಮಲಯಾಳಂ ಭಾಷೆಯಲ್ಲಿ ಬಿಡುಗಡೆಗೊಂಡಿದ್ದು- ಕರುಣೆ, ಸೇವೆ ಮತ್ತು ನಂಬಿಕೆಯ ಜೀವಂತ ಚಿತ್ರಣ
ಮಂಜೇಶ್ವರ 2025 ಸಪ್ಟೆಂಬರ್ 28: ಕರುಣೆ ಮತ್ತು ಸಮರ್ಪಿತ ಸೇವೆಯ ಜೀವಿತದ ಕಥೆಯನ್ನು ಹೊಂದಿರುವ ಒಂದು ಹ್ರದಯಸ್ಪರ್ಷಿ ಆತ್ಮಚರಿತ್ರೆ ಹೊಸಂಗಡಿಯಲ್ಲಿ ಅನಾವರಣಗೊಂಡಿತು. “ಹೆಬ್ರೋನಿಲೆ ಸ್ನೇಹತೂವಲಗಳು” ಮಲಯಾಳಂ ಭಾಷೆಯಲ್ಲಿ ಶೀರ್ಷಿಕೆಯ ಈ ಕೃತಿ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ, ದೂರಗಾಮಿ ಜೋಸೆಫ್ ಕ್ರಾಸ್ತಾ ಅವರ ಅಮೋಘ ಜೀವನಯಾನವನ್ನು ಚಿತ್ರಿಸುತ್ತದೆ. ಈ ಪುಸ್ತಕದ ಬಿಡುಗಡೆ ಸಮಾರಂಭವು ಹೊಸಂಗಡಿಯ ಇನ್ಫಂಟ್ ಜೀಸಸ್ ದೇವಾಲಯದಲ್ಲಿ, ನಂಬಿಕೆ ಮತ್ತು ಸೇವೆಯ ಸಮ್ಮಿಲನದ ಮಧ್ಯೆ ಭಕ್ತಿ ಪೂರ್ಣ ವಾತಾವರಣದಲ್ಲಿ ನಡೆಯಿತು.
ಇನ್ಫಂಟ್ ಜೀಸಸ್ ಚರ್ಚಿನ ಗುರುಗಳಾದ ವಂದನೀಯ ಫಾ. ಲೂಯಿಮರಿಯದಾಸ್ ಅವರು ಆತ್ಮಚರಿತ್ರೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಅವರ ಈ ಕೃತ್ಯವು ಪುಸ್ತಕದ ಅನಾವರಣದಷ್ಟೇ ಅಲ್ಲ, ಜನಸೇವೆಯ ಅಸಂಖ್ಯ ವರ್ಷಗಳ ಶ್ರದ್ಧೆಯ ಕಾರ್ಯಗಳಿಗೂ ಗೌರವ ಸಲ್ಲಿಸಿತು. ಸೇವೆಯ ಸಫಲತೆಯ ಕಥೆಯನ್ನು ಆಲಿಸಲು ಸೇರಿದ್ದ ಭಕ್ತಾಧಿಗಳು, ಬ್ರ. ಜೊಸೆಫ್ ಕ್ರಾಸ್ತಾ ಅವರ ಜೀವನದ ಹಾದಿಯ ಮುಖಾಂತರ ಕರುಣೆ ಮತ್ತು ಸೇವೆಯ ಶಕ್ತಿಯನ್ನು ಪ್ರತ್ಯಕ್ಷವಾಗಿ ಕಂಡು ನಿಸ್ವಾರ್ಥ ಸೇವೆಯ ಈ ಮಹಾನ್ ನಾಯಕನನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಪ್ಯಾರಿಷ್ ಸಂಕುಲನದ ಮಧ್ಯೆ ನಡೆದ ಈ ಸಮಾರಂಭವು ಹಬ್ಬದಂತೆಯೂ, ಧ್ಯಾನಮಯ ವಾತಾವರಣದಂತೆಯೂ ಇತ್ತು. ಚರ್ಚಿನ ಸಂಯೋಜಕರಾದ ಶ್ರೀ ತಾಮಸ್, ಅತಿಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿ, ಕೃತಿಯ ಮೂಲಕ ಕ್ರಾಸ್ತಾ ಅವರ ಅನುಭವಗಳು, ಹೋರಾಟಗಳು ಮತ್ತು ಯಶಸ್ಸುಗಳನ್ನು ಹಂಚಿಕೊಂಡರು. ಈ ಪುಸ್ತಕವು ಮಾನವೀಯತೆಯ ಘನತೆಯನ್ನು ಆಚರಿಸುವಂತಿದ್ದಿತು — ಸೇವೆ, ಧೈರ್ಯ ಮತ್ತು ವಿನಯದಿಂದ ತುಂಬಿದ ಬದುಕಿನ ಸಾಕ್ಷಿಯಾಗಿ ಮೂಡಿಬಂತು.
“ಹೆಬ್ರೋನಿಲೆ ಸ್ನೇಹತೂವಲಗಳು” ಓದುಗರಿಗೆ ಕ್ರಾಸ್ತಾ ಅವರ ಜೀವನದ ಆಂತರಿಕ ಪ್ರೇರಣೆಗಳು, ಜೀವನದ ಸವಾಲುಗಳು ಕಷ್ಟ ನಷ್ಟಗಳ ನಡುವೆಯೂ ದೇವರ ಮೇಲೆ ಬ್ರ. ಜೊಸೆಫ್ ಅವರ ಅಖಂಡ ವಿಶ್ವಾಸ ಮತ್ತು ದೇವರ ಕೃಪೆಯ ಕ್ಷಣಗಳನ್ನು ಹತ್ತಿರದಿಂದ ಪರಿಚಯಿಸುತ್ತದೆ. ಇದೊಂದು ಸ್ಫೂರ್ತಿದಾಯಕ ಕೃತಿಯಾಗಿ, ಜನ ಸೇವಕರಲ್ಲಿ, ಸಮಾಜ ಕಲ್ಯಾಣ ಕಾರ್ಯಕರ್ತರಲ್ಲಿ ಮತ್ತು ದಾನಿಗಳಲ್ಲಿ ಮಾನವೀಯತೆಯ ನಂಟನ್ನು ಮತ್ತೊಮ್ಮೆ ಬಲಪಡಿಸುತ್ತದೆ.
