How a Stranger’s Kindness Reconnected a Family

/

Manjeshwar, October 16, 2025: In collaboration with the Snehalaya Charitable Trust, Manjeshwar, and the Shraddha Foundation, Mumbai, Mr. Manoj Paswan, a native of East Champaran District, Bihar (near the Nepal border), has been successfully reunited with his family after four years of separation.

Mr. Paswan was rescued by the Snehalaya Charitable Trust team from the streets of Manjeshwar on July 14, 2025. He has an eight-year history of mental illness, during which he received treatment for about one year. However, the treatment was discontinued as he was not residing at home regularly.

The onset of his illness followed the death of his mother a deeply distressing event that left him emotionally shattered. Prior to this loss, he was mentally stable, socially active, and gainfully employed. Following the tragedy, his behavior became erratic, and he eventually went missing, often sleeping at railway stations and bus stops.

His family had searched for him extensively but, after years without contact, had begun to believe that he had passed away. When the Snehalaya team, in collaboration with the Shraddha Foundation, successfully traced and reunited him with his family, they were overwhelmed with emotion and gratitude. The family expressed their heartfelt thanks to both the Snehalaya Charitable Trust and the Shraddha Foundation for their tireless efforts and compassion.

snehalaya-manojpaswan-reunion-16oct2025-02. snehalaya-manojpaswan-reunion-16oct2025-03. snehalaya-manojpaswan-reunion-16oct2025-04. snehalaya-manojpaswan-reunion-16oct2025-05.

ನಾಲ್ಕು ವರ್ಷಗಳ ಅಗಲಿಕೆಯ ನಂತರ ಒಂದು ಹೃದಯಭರಿತ ಮಿಲನ

ಮಂಜೇಶ್ವರ, ಅಕ್ಟೋಬರ್ 16, 2025: ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಹಾಗೂ ಮುಂಬೈನ ಶ್ರದ್ಧಾ ಫೌಂಡೇಶನ್ ಅವರ ಸಹಯೋಗದಲ್ಲಿ, ಬಿಹಾರದ ಈಸ್ಟ್ ಚಂಪಾರನ್ ಜಿಲ್ಲೆ (ನೇಪಾಳ ಗಡಿಭಾಗದ ಸಮೀಪ) ಮೂಲದ ಶ್ರೀ ಮನೋಜ್ ಪಾಸ್ವಾನ್ ಅವರು ನಾಲ್ಕು ವರ್ಷಗಳ ವಿಚ್ಛೇದನದ ನಂತರ ತಮ್ಮ ಕುಟುಂಬದೊಡನೆ ಯಶಸ್ವಿಯಾಗಿ ಸೇರಿಕೊಂಡರು.
ಶ್ರೀ ಪಾಸ್ವಾನ್ ಅವರನ್ನು 2025ರ ಜುಲೈ 14ರಂದು ಮಂಜೇಶ್ವರದ ಬೀದಿ ಬದಿಯಿಂದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ತಂಡವು ರಕ್ಷಿಸಿತ್ತು.

ಶ್ರೀ ಮನೋಜ್ ಪಾಸ್ವಾನ್ ರವರು ಎಂಟು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಲ್ಲಿ ಬಳಲುತಿದ್ದು , ಒಂದು ವರ್ಷದವರೆಗೆ ಚಿಕಿತ್ಸೆ ಪಡೆದಿದ್ದರು. ಆದರೆ ಅವರು ನಿಯಮಿತವಾಗಿ ಮನೆಯಲ್ಲಿರದ ಕಾರಣ ಚಿಕಿತ್ಸೆ ಮಧ್ಯೆ ನಿಂತಿತ್ತು.
ತಾಯಿಯ ನಿಧನವು ಅವರ ಜೀವನದಲ್ಲಿ ಭಾರೀ ಮಾನಸಿಕ ಆಘಾತವನ್ನುಂಟುಮಾಡಿತು ಮತ್ತು ಅವರ ಅಸ್ವಸ್ಥತೆಗೆ ಪ್ರಾರಂಭಿಕ ಕಾರಣವಾಯಿತು. ಈ ದುಃಖದ ಘಟನೆಗೂ ಮುನ್ನ ಅವರು ಮಾನಸಿಕವಾಗಿ ಸ್ಥಿರರಾಗಿದ್ದರು, ಸಾಮಾಜಿಕವಾಗಿ ಚುರುಕಾಗಿದ್ದರು ಹಾಗೂ ಉದ್ಯೋಗದಲ್ಲಿದ್ದರು. ತಾಯಿಯ ಸಾವಿನ ನಂತರ ಅವರ ವರ್ತನೆ ಅಸ್ಥಿರವಾಯಿತು ಮತ್ತು ಅವರು ಮನೆ ಬಿಟ್ಟು ಹೋಗಿ ರೈಲು ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ರಾತ್ರಿ ಕಳೆಯಲು ಪ್ರಾರಂಭಿಸಿದರು.
ಅವರ ಕುಟುಂಬವು ಅವರನ್ನು ಹುಡುಕಲು ಬಹಳ ಪ್ರಯತ್ನಿಸಿದರೂ ವರ್ಷಗಳ ಕಾಲ ಯಾವುದೇ ಮಾಹಿತಿ ಸಿಗದೆ ಅವರು ಮೃತಪಟ್ಟಿರಬಹುದು ಎಂದು ನಂಬಿದ್ದರು.

ಕೊನೆಗೂ, ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ತಂಡಗಳು ಅವರನ್ನು ಪತ್ತೆಹಚ್ಚಿ ಕುಟುಂಬದೊಡನೆ ಸೇರಿಸಿದಾಗ, ಕುಟುಂಬದ ಸದಸ್ಯರು ಭಾವೋದ್ರೇಕಗೊಂಡು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಕುಟುಂಬವು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ತಂಡಗಳ ಅಸಾಧಾರಣ ಸೇವೆ ಮತ್ತು ಕರುಣೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *

Need Help?