From Wandering Alone to Being Wrapped in Care — Hashim’s Journey from the Streets to Safety Begins with Compassion

/

ಏಕಾಂತದಲ್ಲಿ ಕಳೆದುಹೋದ ಹಾಶಿಂ… ಕರುಣೆಯಲ್ಲಿ ಹೊಸ ಬದುಕಿನ ಬೆಳಕು

ಮಂಜೇಶ್ವರ, ಫೆಬ್ರವರಿ 22, 2026: ಬಸ್‌ಗಳ ಗದ್ದಲ… ಜನರ ಓಡಾಟ… ತಮ್ಮ ತಮ್ಮ ಗುರಿಯತ್ತ ದಾವಿಸುವ ಹೆಜ್ಜೆಗಳು…

ಆ ಗದ್ದಲದ ಮಧ್ಯೆ, ಮಂಜೇಶ್ವರ ಬಸ್ ನಿಲ್ದಾಣದ ಬಳಿ, ಒಬ್ಬ ವ್ಯಕ್ತಿ, ಮೌನದಲ್ಲಿ ಕಳೆದುಹೋಗಿದ್ದನು.

ಆತನ ಹೆಸರು ಹಾಶಿಂ. ಬಿಹಾರ ಮೂಲದ ಈ ಯುವಕ, ತನ್ನ ಸುತ್ತಲಿನ ಲೋಕದಿಂದ ಸಂಪೂರ್ಣವಾಗಿ ದೂರವಾಗಿದ್ದಂತೆ ಕಂಡನು. ಅವನ ಕಣ್ಣುಗಳಲ್ಲಿ ಅನಿರ್ವಚನೀಯ ಖಾಲಿತನ…ಅವನ ನಡೆಗಳಲ್ಲಿ ದಿಕ್ಕುತಪ್ಪಿದ ಅಲೆಮಾರಿ…

ಅವನ ಮುಖದಲ್ಲಿ ಅಸಮಯದ ನಗು…“ಅವನು ಏನೋ ತನ್ನೊಳಗೆ ಮಾತನಾಡುತ್ತಿದ್ದ… ಆದರೆ ಯಾರೂ ಕೇಳುತ್ತಿರಲಿಲ್ಲ…” ಅವನ ವೈಯಕ್ತಿಕ ಸ್ವಚ್ಛತೆ ಕುಂದಿತ್ತು. ಅವನ ವರ್ತನೆ ಅವನ ಮನಸ್ಸು ಮೌನವಾಗಿ ಕೂಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿತ್ತು.

ಅವನು ಸಮಸ್ಯೆಯಲ್ಲ… ಅವನು ಸಹಾಯಕ್ಕಾಗಿ ಕಾಯುತ್ತಿರುವ ಒಬ್ಬ ಮನುಷ್ಯ.

ಅದೇ ಸಮಯದಲ್ಲಿ, ಕರುಣೆಯ ಹೃದಯವಿದ್ದ ಆಟೋ ಚಾಲಕ ಅಶ್ರಫ್ ಅವರ ಕಣ್ಣುಗಳಿಗೆ ಹಾಶಿಂ ಕಾಣಿಸಿಕೊಂಡನು.

ಅವರ ಜಾಗೃತಿಯಿಂದ ವಿಷಯವು ತಕ್ಷಣ ಸ್ನೇಹಾಲಯ ಸಂಸ್ಥೆಯ ಬ್ರ ಜೋಸೆಫ್ ಕ್ರಾಸ್ತಾ ತಿಳಿಸಲಾಯಿತು.

ಸುದ್ದಿ ತಲುಪುತ್ತಿದ್ದಂತೆಯೇ, ಸ್ನೇಹಾಲಯ ತಂಡವು ತಕ್ಷಣ ಸ್ಪಂದಿಸಿ ಮಂಜೇಶ್ವರ ಬಸ್ ನಿಲ್ದಾಣದ ಬಳಿ ತೆರಳಿ, ಹಾಶಿಂ ಅವರನ್ನು ಸುರಕ್ಷಿತವಾಗಿ ತಮ್ಮ ಆಶ್ರಯಕ್ಕೆ ಕರೆತಂದಿತು.

19-02-2026 ರಂದು ಅವರನ್ನು ಅಧಿಕೃತವಾಗಿ ದಾಖಲಿಸಿ, ಸಮಗ್ರ ಮನೋವೈದ್ಯಕೀಯ ಮೌಲ್ಯಮಾಪನ, ಔಷಧೋಪಚಾರ ಮತ್ತು ಪುನರ್ವಸತಿ ಪ್ರಕ್ರಿಯೆ ಆರಂಭಿಸಲಾಯಿತು.

ಜೋಸೆಫ್ ಕ್ರಾಸ್ತಾ ಅವರ ಕರುಣೆಯ ಮಾರ್ಗದರ್ಶನದಲ್ಲಿ, ಸ್ನೇಹಾಲಯವು ಅಸಹಾಯಕರಿಗೆ ಆಶ್ರಯವಲ್ಲ ಆತ್ಮಗೌರವವನ್ನು ಮರುಸ್ಥಾಪಿಸುವ ತಾಣವಾಗಿದೆ.

“ಇಲ್ಲಿ ಯಾರನ್ನೂ ತಿರಸ್ಕರಿಸಲಾಗುವುದಿಲ್ಲ…ಪ್ರತಿಯೊಬ್ಬರಿಗೂ ಬದುಕಿನ ಮತ್ತೊಂದು ಅವಕಾಶ ಇದೆ…” ಎಂದು ಸಂಸ್ಥೆಯ ಸಂದೇಶ ಸ್ಪಷ್ಟವಾಗಿ ಹೇಳುತ್ತದೆ.

ಹಾಶಿಂ ಈಗ ಮೇಲ್ವಿಚಾರಣೆಯಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೋಸ್ಥಿತಿ ಮೌಲ್ಯಮಾಪನ, ಔಷಧ ನಿರ್ವಹಣೆ ಮತ್ತು ಕ್ರಮಬದ್ಧ ಪುನರ್ವಸತಿ ಮೂಲಕ, ಅವರ ಜೀವನದಲ್ಲಿ ಮತ್ತೆ ಸ್ಥಿರತೆ ಮತ್ತು ಗೌರವವನ್ನು ಮರುಕಳಿಸಲು ಪ್ರಯತ್ನ ನಡೆಯುತ್ತಿದೆ.

ಈ ಘಟನೆ ನಮಗೆ ಒಂದು ಪಾಠ ಕಲಿಸುತ್ತದೆ …ರಸ್ತೆಗಳಲ್ಲಿ ಅಲೆಮಾರಿ ನಡೆಯುವವರು ಸಮಸ್ಯೆಯಲ್ಲ…

ಅವರು ಸಹಾಯಕ್ಕಾಗಿ ಕಾಯುತ್ತಿರುವ ಜೀವಗಳು.

ಸ್ನೇಹಾಲಯ ತನ್ನ ಧ್ಯೇಯದಲ್ಲಿ ಅಚಲ, ರಕ್ಷಣೆ, ಪುನರ್ವಸತಿ ಮತ್ತು ಪುನಃಸಂಯೋಜನೆ.

ಅದು ಕೇವಲ ಆಶ್ರಯ ನೀಡುವುದಲ್ಲ…ಅದು ಆಶೆ ನೀಡುತ್ತದೆ…ಆರೈಕೆ ನೀಡುತ್ತದೆ. ಮತ್ತೊಂದು ಬದುಕಿನ ಅವಕಾಶ ನೀಡುತ್ತದೆ.

ನೀವು ಯಾರನ್ನಾದರೂ ಸಂಕಷ್ಟದಲ್ಲಿರುವಂತೆ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತೆ ಕಂಡರೆ — ದಯವಿಟ್ಟು ಜವಾಬ್ದಾರಿಯಿಂದ ಕ್ರಮ ಕೈಗೊಳ್ಳಿ.

📞 9446547033 / 85903 39570 / 6282495137

ಒಂದು ಕರೆ… ಒಂದು ಕರುಣೆ… ಒಂದು ಬದುಕು ಉಳಿಸಬಹುದು.

snehalaya-hashim-rescue-22feb2026-02. snehalaya-hashim-rescue-22feb2026-03.

From Wandering Alone to Being Wrapped in Care — Hashim’s Journey from the Streets to Safety Begins with Compassion

Manjeshwar, February 19, 2026: Near the Manjeshwar Bus Stop, amidst the noise of passing vehicles and hurried footsteps, a silent story of pain was unfolding. A man identified as Hashim, a native of Bihar, was found wandering alone — disconnected from his surroundings, vulnerable, and quietly battling an unseen storm within his mind.

With unkempt appearance, poor personal hygiene, wandering behaviour, and an unexplained self-smile, Hashim was not simply loitering — he was struggling. Behind his distant gaze was a human being in need of understanding, protection, and care.

It was Mr. Ashraf, a compassionate auto driver, who noticed that something was not right. Instead of ignoring him like many others might have, he chose empathy over indifference. His timely concern became the turning point in Hashim’s life that day.

Responding without delay, the Snehalaya team reached the location and gently brought Hashim into safe hands. On 19/02/2026 , he was admitted for comprehensive psychiatric evaluation, treatment, and rehabilitation support — a step away from the streets and toward healing.

Under the compassionate leadership of Br. Joseph Crasta, Snehalaya continues to stand as a refuge for those forgotten by circumstance. Hashim is now under supervised care, receiving medical attention, structured rehabilitation, and the dignity every human being deserves.

This incident reminds us that people wandering on the streets are not a disturbance to be avoided — they are lives silently crying for help. Sometimes, all it takes is one person to notice, one call to act, and one institution willing to care.

Snehalaya remains committed to restoring hope where it seems lost, bringing healing where there is suffering, and offering second chances where the world has turned away.

If you see someone wandering in distress, do not walk past them. Your awareness could save a life.

📞 9446547033 / 85903 39570 / 6282495137

Leave a Reply

Your email address will not be published. Required fields are marked *

Need Help?