Timely Information Leads to Rescue of Vulnerable Man in Manjeshwar

/

ಮಂಜೇಶ್ವರ ಆಟೋ ಚಾಲಕರ ಮಾನವೀಯ ಸ್ಪಂದನೆಗೆ ಸ್ಪಂದಿಸಿದ ಸ್ನೇಹಾಲಯ

ಮಂಜೇಶ್ವರ, ಜನವರಿ 22, 2026: “ಕೆಲವೊಮ್ಮೆ ಒಂದು ಜೀವ ಉಳಿಯಲು ದೊಡ್ಡ ಶಬ್ದಗಳ ಅಗತ್ಯವಿಲ್ಲ… ಗಮನಿಸುವ ಹಾಗೂ ಕಣ್ಣು ಸ್ಪಂದಿಸುವ ಒಂದು ಮನಸ್ಸು ಸಾಕು.”
ಜನವರಿ 21, 2026. ಮಂಜೇಶ್ವರ ಬಸ್ ನಿಲ್ದಾಣದ ಗದ್ದಲದ ಮಧ್ಯೆ, ಯಾರಿಗೂ ಪರಿಚಯವಿಲ್ಲದ ಒಂದು ಅಲೆದಾಡುವ ಬದುಕು… ದಿಕ್ಕಿಲ್ಲದ ಹೆಜ್ಜೆಗಳು, ಗೊಂದಲಗೊಂಡ ಮನಸ್ಸು, ಅಸುರಕ್ಷಿತ ಸ್ಥಿತಿಯಲ್ಲಿ ನಿಂತಿದ್ದ ಒಬ್ಬ ಮನುಷ್ಯ.
ಅವರ ಹೆಸರು ಶ್ರೀ ಶಂಕರ್ ಪಾರ್ಥ್ತೂರ್, ಪಶ್ಚಿಮ ಬಂಗಾಳದ ಹುಗಿಲಿ ಜಿಲ್ಲೆಯ ಗೋರಂಗಪುರದ ಮೂಲದವರು ಎಂದು ಗುರುತಿಸಲಾಗಿದೆ.
ಸ್ವಯಂ ಮಾತಾಡುವ ನಡೆ, ವೈಯಕ್ತಿಕ ಆರೈಕೆಯ ಕೊರತೆ, ಅಲೆದಾಡುವ ದೃಷ್ಟಿ, ಕೋಪದ ಅಲೆಯಂತೆ ಬರುವ ವರ್ತನೆ,
ಈ ಎಲ್ಲವೂ ಒಂದು ಪ್ರಶ್ನೆಯನ್ನು ಮೂಡಿಸಿತು: “ಈ ಜೀವ ಈಗ ಸುರಕ್ಷಿತವೇ?” ಆ ಪ್ರಶ್ನೆಗೆ ಉತ್ತರವಾಗಿ, ಮಾನವೀಯತೆಯ ಧ್ವನಿಯೊಂದು ಎದ್ದಿತು. ಮಂಜೇಶ್ವರದ ಆಟೋ ಚಾಲಕರಾದ ಶ್ರೀ ಬದ್ರುದ್ದೀನ್ ಅವರ ಸ್ಥಿತಿಯನ್ನು ಗಮನಿಸಿ, ಕ್ಷಣಮಾತ್ರವೂ ವಿಳಂಬವಿಲ್ಲದೆ ಸ್ನೇಹಾಲಯದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡಿದರು.
“ಒಬ್ಬ ಜೀವದ ಸುರಕ್ಷತೆ ಮತ್ತು ಮಾನವೀಯತೆಯ ವಿಷಯದಲ್ಲಿ ತಡವಿಲ್ಲದೇ ಕ್ರಮ ಕೈಗೊಳ್ಳುವುದು ಬಹುಮುಖ್ಯ,” ಎಂದು ಬ್ರೊ. ಜೋಸೆಫ್ ಕ್ರಾಸ್ಟಾ ಹೇಳಿದ್ದಾರೆ. ಮಾಹಿತಿಯ ಮೇಲೆ ತಕ್ಷಣ ಕ್ರಮ ಕೈಗೊಂಡ ಸ್ನೇಹಾಲಯ ರಕ್ಷಣಾ ತಂಡ ಶಂಕರ್ ಅವರ ಸ್ಥಳಕ್ಕೆ ತಲುಪಿತು ಮತ್ತು ಅವರು ಸುರಕ್ಷಿತವಾಗಿ ರಕ್ಷಣೆಗೊಳಿಸಲ್ಪಟ್ಟರು.
ಶಂಕರ್ ಅವರು ದಿಕ್ಕುತಪ್ಪಿರುವವರಾಗಿದ್ದು, ಸ್ವಯಂ ಮಾತಾಡುವುದು, ವೈಯಕ್ತಿಕ ಆರೈಕೆಯಲ್ಲಿ ಕೊರತೆ, ತಂಬಾಕು ಬಳಕೆ ಸೇರಿದಂತೆ ವಿವಿಧ ಸಮಸ್ಯೆಗಳಿದ್ದವು. ಸಾರ್ವಜನಿಕ ಸ್ಥಳದಲ್ಲಿ ಅವರ ಜೀವ ಹಾಗೂ ಭದ್ರತೆ ಕುರಿತು ತೀವ್ರ ಆತಂಕ ಉಂಟಾಗಿತ್ತು
ರಕ್ಷಣೆಯ ನಂತರ, ಶ್ರೀ ಶಂಕರ್ ಅವರನ್ನು ಸುರಕ್ಷಿತವಾಗಿ ಸ್ನೇಹಾಲಯಕ್ಕೆ ದಾಖಲಿಸಿ, ಅಲ್ಲಿ ಅವರಿಗೆ ಆರೈಕೆ, ರಕ್ಷಣೆ ಮತ್ತು
ಅಗತ್ಯವಾದ ವೈದ್ಯಕೀಯ ಮತ್ತು ಮಾನಸಿಕ ಬೆಂಬಲ ನೀಡಲಾಯಿತು.. ಅವರು ಸುರಕ್ಷಿತ ಮತ್ತು ಗೌರವಯುತ ವಾತಾವರಣದಲ್ಲಿ ಇರಿಸಲ್ಪಟ್ಟಿದ್ದು, ತಕ್ಷಣದ ಅಗತ್ಯಗಳ ಪೂರೈಕೆ ಮತ್ತು ವೈದ್ಯಕೀಯ ಹಾಗೂ ಮಾನಸಿಕ-ಸಾಮಾಜಿಕ ಬೆಂಬಲವನ್ನು ನೀಡಲು ವ್ಯವಸ್ಥೆಯನ್ನು ಮಾಡಲಾಗಿದೆ. ಸಮುದಾಯದ ಜಾಗೃತಿ ಮತ್ತು ತಕ್ಷಣದ ಸಹಕಾರವೇ ಈ ರಕ್ಷಣೆಗೆ ಕಾರಣವಾಗಿದೆ ಎಂದು ಬ್ರ. ಜೋಸೆಫ್ ಕ್ರಾಸ್ತಾ ಹೇಳಿದ್ದಾರೆ.
ಸ್ನೇಹಾಲಯ ಸಂಸ್ಥೆಯು 2009ರಲ್ಲಿ ಆರಂಭವಾಯಿತು ಈ ಒಂದು ಸೇವೆಯು ಯುವಾವಸ್ಥೆಯ ಗಡಿಯಲ್ಲಿ ಮುನ್ನಡೆಯುತ್ತಿರುವಾಗ ಇಂತಹ ಅನೇಕ ನಿರಾಧಾರರು, ನಿರ್ಗತಿಕರು, ನಿರ್ಲಕ್ಷಿತರು, ಮಾನಸಿಕವಾಗಿ ಅಸ್ವಸ್ಥರಾದವರು, ಸಮಾಜದಲ್ಲಿ ತಿರಸ್ಕೃತರಾದವರು, ತೊರೆದುಹಾಕಲ್ಪಟ್ಟವರಿಗೆ ಇವರಿಗೆ ಕರುಣೆಯಿಂದ ಸೇವೆ ನೀಡಿ, ಆಪ್ತಾ ಸಮಾಲೋಚನೆ ಮಾಡಿ , ಚಿಕಿತ್ಸೆ ನೀಡಿ, ಕುಟುಂಬದವರ ವಿಳಾಸ ಹುಡುಕಾಟ ಮಾಡಿ, ಅವರನ್ನು ಅವರ ಮನೆಗೆ ಮರುಸ್ಥಾಪಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ ಸ್ನೇಹಾಲಯ.
ಶಂಕರ್ ಅವರ ಕುಟುಂಬದ ಕುರಿತು ಮಾಹಿತಿ ನೀಡಲು ದಯವಿಟ್ಟು ಸಂಪರ್ಕಿಸಿ:
📞 9446547033 / 85903 39570 / 6282495137
ಬಸ್ ನಿಲ್ದಾಣದ ಗದ್ದಲದಲ್ಲಿ ಕಳೆದುಹೋದ ಒಬ್ಬ ವ್ಯಕ್ತಿಗೆ, ಸ್ನೇಹಾಲಯ ಇಂದು ಶಾಂತಿಯ ನೆಲೆ.
ಈ ಕಥೆಯ ಅಂತ್ಯವಲ್ಲ… ಇದು ಒಂದು ಹೊಸ ಆರಂಭ.

snehalaya-Shankar-rescue-22jan2026-02. snehalaya-Shankar-rescue-22jan2026-03. snehalaya-Shankar-rescue-22jan2026-04. snehalaya-Shankar-rescue-22jan2026-05. snehalaya-Shankar-rescue-22jan2026-06.

Timely Information Leads to Rescue of Vulnerable Man in Manjeshwar

Manjeshwar, January 22, 2026: A vulnerable man was rescued from the Manjeshwar Bus Stand on January 21, 2026, after being found wandering in a disoriented and unsafe condition. The individual has been identified as Mr. Shankar Parthtur, a native of Gorangpur, Hugili District, West Bengal.

The rescue operation was initiated following timely information provided by Mr. Badruddin, an auto driver from Manjeshwar, who noticed Mr. Shankar’s condition and immediately informed Br. Joseph Crasta, Founder of Snehalaya. Acting swiftly on the information received, the Snehalaya rescue team, under the guidance of Br. Joseph Crasta, reached the location and carried out the rescue operation with care and compassion.

Mr. Shankar was found to be suffering from poor personal care, self-talking behavior, disoriented wandering, episodes of aggressive behavior, and tobacco use, raising serious concerns about his safety and well-being in a public place.

Following the rescue, Mr. Shankar was safely admitted on January 21, 2026, for further care, protection, and assessment. He was placed in a secure and dignified environment where his immediate needs could be addressed, and appropriate medical and psychosocial support could be arranged based on his condition.

This intervention highlights the importance of community vigilance and timely coordination between responsible citizens and humanitarian organizations. The alertness shown by Mr. Badruddin and the prompt action taken by Br. Joseph Crasta and the Snehalaya rescue team ensured that Mr. Shankar was protected from further risk and given an opportunity for care, recovery, and stability.

The incident stands as another example of compassionate community action and reflects the ongoing commitment of Snehalaya, under the leadership of Br. Joseph Crasta, to safeguarding vulnerable individuals and restoring dignity and hope to those in distress.

For further information or to share details regarding Mr. Shankar or his family, please contact:
📞 9446547033 / 85903 39570 / 6282495137

Leave a Reply

Your email address will not be published. Required fields are marked *

Need Help?