Manjeshwar, January 03, 2026: Joginder, a native of Malan village in Kangra district of Himachal Pradesh, was joyfully reunited with his family after nearly nine years of separation. Suffering from mental health challenges, he had gone missing after visiting a local festival near his village. His family had filed a missing complaint at the time and continued to wait with hope for his return over the years.
On August 9, 2025, Joginder was found in a helpless condition in the Maani area near Bantwal Bus Stand. Local residents extended immediate support by providing him with food, clothing, and assistance for personal hygiene. Mr. Victor Pinto informed Br. Joseph Crasta, Founder of Snehalaya, following which the Snehalaya team promptly rescued him. At that time, Joginder was unable to recall details about his family and was observed talking to himself, indicating a prolonged mental health condition. Snehalaya Charitable Trust, in collaboration with Shraddha Foundation, initiated sustained efforts to trace his identity and family.
The efforts proved successful on September 12, 2025, when Joginder was emotionally reunited with his mother, brothers, and other family members at his native village, facilitated by Shraddha Foundation. The reunion was marked by tears of joy and immense relief for the family.
This incident stands as a powerful testament to the compassion, dedication, and unwavering humanitarian service of Snehalaya Charitable Trust and Shraddha Foundation, exemplifying how collective efforts can restore lost hope and reunite families torn apart by circumstances.

ಸ್ನೇಹಾಲಯ ಸಂಸ್ಥೆಯ ಮಾನವೀಯ ಪ್ರಯತ್ನದಿಂದ ಹಿಮಾಚಲ ಪ್ರದೇಶದ ಜೋಗಿಂದರ್ ಕುಟುಂಬಕ್ಕೆ ಮರಳಿದ ಕ್ಷಣ
ಮಂಜೇಶ್ವರ, ಜನವರಿ 03, 2026: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಮಾಲನ್ ಗ್ರಾಮದ ನಿವಾಸಿಯಾದ ಶ್ರೀ. ಜೋಗಿಂದರ್ ಅವರು ಸುಮಾರು ಒಂಬತ್ತು ವರ್ಷಗಳ ನಂತರ ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಪುನರ್ಮಿಲನಗೊಂಡಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ತಮ್ಮ ಗ್ರಾಮದ ಸಮೀಪ ನಡೆದ ಸ್ಥಳೀಯ ಮೇಳಕ್ಕೆ ತೆರಳಿದ ಬಳಿಕ ಕಾಣೆಯಾಗಿದ್ದರು. ಅವರ ಕುಟುಂಬವು ಆ ಸಮಯದಲ್ಲೇ ನಾಪತ್ತೆ ದೂರು ದಾಖಲಿಸಿದ್ದು, ಅನೇಕ ವರ್ಷಗಳ ಕಾಲ ಆತನಿಗಾಗಿ ನಿರಂತರವಾಗಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದರು.
ದಿನಾಂಕ 2025ರ ಆಗಸ್ಟ್ 9ರಂದು, ಬಂಟ್ವಾಳ ಬಸ್ ನಿಲ್ದಾಣದ ಸಮೀಪದ ಮಾಣಿ ಪ್ರದೇಶದಲ್ಲಿ ಜೋಗಿಂದರ್ ಅವರು ಅಸಹಾಯಕ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ಸ್ಥಳೀಯರು, ಅವರಿಗೆ ಆಹಾರ, ಬಟ್ಟೆ ಹಾಗೂ ಸ್ನಾನಕ್ಕೆ ಸಹಾಯ ಮಾಡಿದರು. ಈ ವಿಷಯವನ್ನು ಶ್ರೀ ವಿಕ್ಟರ್ ಪಿಂಟೊ ಅವರು ಸ್ನೇಹಾಲಯ ಸಂಸ್ಥೆಯ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರಿಗೆ ತಿಳಿಸಿದರು. ತಕ್ಷಣವೇ ಸ್ನೇಹಾಲಯದ ತಂಡವು ಅವರನ್ನು ರಕ್ಷಣೆಗೊಳಪಡಿಸಿತು. ಆ ಸಂದರ್ಭದಲ್ಲಿ ಜೋಗಿಂದರ್ ತಮ್ಮ ಕುಟುಂಬದ ವಿವರಗಳನ್ನು ನೆನಪಿಸಿಕೊಳ್ಳಲಾಗದೆ, ಸ್ವತಃ ಮಾತನಾಡುತ್ತಿದ್ದುದು ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುತ್ತಿತ್ತು. ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮತ್ತು ಶ್ರದ್ಧಾ ಫೌಂಡೇಶನ್ ಸಂಸ್ಥೆಗಳ ಸಂಯುಕ್ತ ಪ್ರಯತ್ನದ ಮೂಲಕ ಅವರ ಗುರುತು ಪತ್ತೆಹಚ್ಚುವ ಕಾರ್ಯ ಆರಂಭವಾಯಿತು.
2025ರ ಸೆಪ್ಟೆಂಬರ್ 12ರಂದು, ಜೋಗಿಂದರ್ ಅವರು ತಮ್ಮ ತಾಯಿ, ಸಹೋದರರು ಮತ್ತು ಕುಟುಂಬದವರೊಂದಿಗೆ ತಮ್ಮ ಸ್ವಗ್ರಾಮದಲ್ಲಿ ಶ್ರದ್ಧಾ ಫೌಂಡೇಶನ್ ಸಂಸ್ಥೆಯ ಮುಕಾಂತಾರ ಭಾವನಾತ್ಮಕವಾಗಿ ಪುನರ್ಮಿಲನಗೊಂಡರು. ಈ ಕ್ಷಣವು ಕುಟುಂಬದವರಲ್ಲಿ ಸಂತೋಷದ ಕಣ್ಣೀರಾಗಿಸಿತು.
ಈ ಘಟನೆಯು ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮತ್ತು ಶ್ರದ್ಧಾ ಫೌಂಡೇಶನ್ಗಳ ಮಾನವೀಯತೆ, ಸಮರ್ಪಣೆ ಮತ್ತು ನಿರಂತರ ಸೇವಾಭಾವನೆಯ ಜೀವಂತ ಸಾಕ್ಷಿಯಾಗಿ, ಕಳೆದುಹೋದ ಆಶೆಯನ್ನು ಮತ್ತೆ ಜೀವಂತಗೊಳಿಸಿದ ಮಹತ್ವದ ಉದಾಹರಣೆಯಾಗಿದೆ.
