Timely Intervention by Snehalaya Saves Distressed Woman at Mangalore Junction

/

Mangaluru, November 23, 2025: A woman identified as Swapna was rescued on November 20, 2025, by the Snehalaya Charitable Trust team from Mangalore Junction Railway Station after being found wandering in a distressed and disoriented state.

According to information received by Br. Joseph Crasta, the founder of Snehalaya, Swapna appeared mentally unstable and was unable to share any personal information. Noticing her vulnerable condition, the Snehalaya rescue team acted promptly, ensuring her safe rescue and transportation to the centre.

Swapna has been admitted to Snehalaya, Manjeshwar, where she is currently receiving medical care, psychological support, and rehabilitation services. The team is also working to trace her family members to facilitate a safe and timely reunion.

If anyone has information regarding Swapna, please contact: 9446547033 / 8590339570 / 6282495137.

Snehalaya Charitable Trust remains committed to its mission of compassion — rescuing, rehabilitating, and reuniting mentally ill, homeless, and abandoned individuals, helping them regain dignity and rebuild their lives with hope and care.

snehalaya-Swapna-rescue-23nov2025-02. snehalaya-Swapna-rescue-23nov2025-03. snehalaya-Swapna-rescue-23nov2025-04. snehalaya-Swapna-rescue-23nov2025-05. snehalaya-Swapna-rescue-23nov2025-06. snehalaya-Swapna-rescue-23nov2025-07.

ಮಂಗಳೂರು ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಸ್ವಪ್ನಾಳ ರಕ್ಷಣೆಗೆ ಧಾವಿಸಿದ ಸ್ನೇಹಾಲಯ ತಂಡ

ಮಂಗಳೂರು, ನವೆಂಬರ್ 23, 2025: ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಸ್ವಪ್ನಾ ಎಂಬ ಮಹಿಳೆಯನ್ನು ನವೆಂಬರ್ 20, 2025 ರಂದು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ತಂಡವು ರಕ್ಷಿಸಿದೆ.

ಮಾನಸಿಕ ಅಸ್ಥಿರತೆ ಹಾಗೂ ಗೊಂದಲದ ಸ್ಥಿತಿಯಲ್ಲಿ ಕಂಡುಬಂದ ಇವರನ್ನು ಕಂಡ ಮಂಗಳೂರು ಜಂಕ್ಷನ್ ರೈಲ್ವೆ ಸಿಬಂಧಿಯಿಂದ ಸ್ನೇಹಾಲಯದ ಸಂಸ್ಥಾಪಕರಾದ ಬ್ರೊ. ಜೋಸೆಫ್ ಕ್ರಾಸ್ತಾ ಅವರಿಗೆ ಲಭಿಸಿದ ಮಾಹಿತಿಯ ಪ್ರಕಾರ,
ಸ್ವಪ್ನಾ ಮಾನಸಿಕವಾಗಿ ಅಸ್ಥಿರವಾಗಿದ್ದು, ತನ್ನ ಬಗ್ಗೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಅಸಮರ್ಥಳಾಗಿದ್ದಳು.ಇದನ್ನು ಗಮನಿಸಿದ ಸ್ನೇಹಾಲಯದ ರಕ್ಷಣಾ ತಂಡವು ತಕ್ಷಣ ಕ್ರಿಯಾಶೀಲವಾಗಿ, ಅವಳನ್ನು ಸುರಕ್ಷಿತವಾಗಿ ರಕ್ಷಿಸಿ ಕೇಂದ್ರಕ್ಕೆ ಸ್ಥಳಾಂತರಿಸಿದರು.

ಪ್ರಸ್ತುತ ಸ್ವಪ್ನಾಳನ್ನು ಮಂಜೇಶ್ವರದ ಸ್ನೇಹಾಲಯ ಮಹಿಳೆಯರ ವಿಭಾಗದಲ್ಲಿ ದಾಖಲಿಸಲಾಗಿದ್ದು, ಅವರು ವೈಧ್ಯಕ ಚಿಕಿತ್ಸೆ, ಮಾನಸಿಕ ಬೆಂಬಲ ಹಾಗೂ ಪುನರ್ವಸತಿ ಸೇವೆಗಳನ್ನು ಪಡೆಯುತ್ತಿದ್ದಾರೆ. ಕುಟುಂಬದವರನ್ನು ಪತ್ತೆಹಚ್ಚುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದ್ದು, ಶೀಘ್ರ ಮತ್ತು ಸುರಕ್ಷಿತ ಮಿಲನ ಸಾಧ್ಯವಾಗಲೆಂದು ತಂಡ ಶ್ರಮಿಸುತ್ತಿದೆ.
ಸ್ವಪ್ನಾ ಕುರಿತು ಯಾರಿಗಾದರೂ ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ಸ್ನೇಹಾಲಯಕ್ಕೆ
ಸಂಪರ್ಕಿಸಿರಿ : 📞 9446547033 / 8590339570 / 6282495137.

ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮಾನವೀಯತೆ ಮತ್ತು ಕರುಣೆಯ ತನ್ನ ಧ್ಯೇಯದಲ್ಲಿ ಸದಾ ನಿಷ್ಠೆಯಿಂದ ಮುಂದುವರಿಯುತ್ತಿದ್ದು ಮಾನಸಿಕ ಅಸ್ವಸ್ಥರು, ನಿರಾಶ್ರಿತರು ಮತ್ತು ಬಿಟ್ಟುಹೋಗಲಾದ ವ್ಯಕ್ತಿಗಳನ್ನು ರಕ್ಷಿಸಿ, ಪುನರ್ವಸತಿ ನೀಡಿ, ಅವರ ಕುಟುಂಬವೊಂದಿಗಿನ ಮಿಲನಕ್ಕೆ ಸಹಕರಿಸುವ ಮೂಲಕ, ಅವರಿಗೆ ಮರೆಯಾದ ಗೌರವವನ್ನು ಮರುಸ್ಥಾಪಿಸಿ ಹೊಸ ಜೀವನಕ್ಕಾಗಿ ಭರವಸೆಯ ಬೆಳಕನ್ನು ನೀಡುತ್ತಿದೆ.

Leave a Reply

Your email address will not be published. Required fields are marked *

Need Help?