Manjeshwar, November 03, 2025: On October 23, 2025, a woman identified as Mrs. Mithul Mahanthy (50 years old) was found in a distressed and unhealthy condition near the Central Railway Station, Mangalore. Responding with compassion and urgency, the Snehalaya Psycho-Social Rehabilitation Centre (SPSRC) team safely rescued her and brought her under their care.
During the rescue, it was observed that Mrs. Mithul appeared weak, disoriented, and mentally disturbed, indicating long-term neglect and psychiatric challenges. Following the rescue, she was admitted to the Snehalaya Psycho-Social Rehabilitation Centre, Manjeshwar, where she is currently receiving medical care, psychiatric evaluation, and rehabilitation services.
The Snehalaya team is now working to trace Mrs. Mithul’s background and reconnect her with her family.
If you have any information regarding Mrs. Mithul Mahanthy or her family, please contact the Snehalaya team at 9446547033 / 85903 39570 / 6282495137.
Your support can help reunite her with her loved ones and offer her a chance to rebuild her life with dignity.

ನಿರಾಸೆಯಿಂದ ಗೌರವದ ಬದುಕಿಗೆ: ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಿಂದ ವ್ಯಕ್ತಿಯ ರಕ್ಷಣೆ
ಮಂಜೇಶ್ವರ, ನವೆಂಬರ್ 25, 2025: ದಿನಾಂಕ ಅಕ್ಟೋಬರ್ 23, 2025 ರಂದು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ 50 ವರ್ಷದ ಮಿಥುಲ್ ಮಹಾಂತಿ ಎಂಬ ಮಹಿಳೆಯು ಅಸಹಾಯಕ ಮತ್ತು ಅನಾರೋಗ್ಯದ ಸ್ಥಿತಿಯಲ್ಲಿ ಪತ್ತೆಯಾದರು. ಕರುಣೆ ಮತ್ತು ತುರ್ತು ಪ್ರತಿಕ್ರಿಯೆಯಿಂದ, ಸ್ನೇಹಾಲಯ ತಂಡವು ಅವರನ್ನು ಸುರಕ್ಷಿತವಾಗಿ ರಕ್ಷಿಸಿ ತಮ್ಮ ಆರೈಕೆಯಲ್ಲಿ ತೆಗೆದುಕೊಂಡಿತು.
ರಕ್ಷಣಾ ಕ್ರಮದ ವೇಳೆ ಮಿಥುಲ್ ಅವರು ಶಾರೀರಿಕವಾಗಿ ದುರ್ಬಲರಾಗಿದ್ದು, ಮಾನಸಿಕ ಅಶಾಂತತೆಯಿಂದ ಬಳಲುತ್ತಿದ್ದರೆಂದು ಗಮನಿಸಲಾಯಿತು. ಇದು ದೀರ್ಘಾವಧಿಯ ನಿರ್ಲಕ್ಷ್ಯ ಮತ್ತು ಮಾನಸಿಕ ಸಮಸ್ಯೆಗಳ ಸೂಚನೆಯಾಗಿತ್ತು. ರಕ್ಷಣೆಯ ನಂತರ ಅವರನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮನೋ ಸಾಮಾಜಿಕ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗದಲ್ಲಿ ದಾಖಲಿಸಲಾಯಿತು. ಪ್ರಸ್ತುತ ಅವರು ಅಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ, ಮನೋವೈಜ್ಞಾನಿಕ ಮೌಲ್ಯಮಾಪನ ಮತ್ತು ಪುನರ್ವಸತಿ ಸೇವೆಗಳನ್ನು ಪಡೆಯುತ್ತಿದ್ದಾರೆ.
ಸ್ನೇಹಾಲಯ ತಂಡವು ಈಗ ಮಿಥುಲ್ ಅವರ ಹಿನ್ನೆಲೆಯನ್ನು ಪತ್ತೆಹಚ್ಚಲು ಹಾಗೂ ಅವರನ್ನು ಅವರ ಕುಟುಂಬದೊಂದಿಗೆ ಮರುಸಂಪರ್ಕಿಸಲು ಕೆಲಸ ಮಾಡುತ್ತಿದೆ.
ಮಿಥುಲ್ ಮಹಾಂತಿ ಅಥವಾ ಅವರ ಕುಟುಂಬದ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಸ್ನೇಹಾಲಯನ್ನು 9446547033 / 85903 39570 / 6282495137 ಈ ಸಂಖ್ಯೆಗಳ ಮೂಲಕ ಸಂಪರ್ಕಿಸಿ.
ನಿಮ್ಮ ಸಹಕಾರವು ಅವರನ್ನು ಅವರ ಪ್ರೀತಿಪಾತ್ರರೊಂದಿಗೆ ಮರು ಸೇರುವಂತೆ ಮಾಡಲು ಸಹಾಯ ಮಾಡಬಹುದು.
