Bro. Joseph Crasta Leads Another Compassionate Rescue Mission

/

Manjeshwar, November 2, 2025: Brother Joseph Crasta, the founder of Snehalaya, along with his dedicated team, rescued a man named Mr. Lokindara near the Bekur bus stand after receiving information from a local resident, Mr. Keshav Kulal.

During the rescue, the team observed that Mr. Lokindara was suffering from mental illness he spoke very little, appeared depressed, and was wandering aimlessly. Recognizing his serious mental condition, the Snehalaya team immediately took necessary action and admitted him to the Snehalaya Psycho-Social Rehabilitation Centre in Manjeshwar.

Medical examinations later confirmed that Mr. Lokindara is suffering from severe mental stress. His family background and place of origin are still unknown.

Snehalaya continues its compassionate mission of rescuing, rehabilitating, and providing shelter to individuals who are mentally ill, homeless, or abandoned. The organization has requested the public to inform Snehalaya if they come across anyone in distress.

For any information about Mr. Lokindara, please contact Snehalaya at:
📞 9446547033 / 8590339570 / 6282495137

Your timely help brings hope and care to those in distress.

 

snehalaya-lokidara-rescue-02nov2025-02. snehalaya-lokidara-rescue-02nov2025-03. snehalaya-lokidara-rescue-02nov2025-04.

ಸಾರ್ವಜನಿಕರ ಸಹಕಾರದಿಂದ ಮತ್ತೊಂದು ಜೀವ ಉಳಿಸಿದ ಸ್ನೇಹಾಲಯ ತಂಡ

ಮಂಜೇಶ್ವರ, ನವೆಂಬರ್ 02, 2025: ಸ್ನೇಹಾಲಯ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಮತ್ತು ಅವರ ಸಮರ್ಪಿತ ತಂಡವು, ಬೆಕೂರಿನ ಸಾರ್ವಜನಿಕರಾದ ಶ್ರೀ ಕೇಶವ ಕುಳಾಲ್ ಅವರಿಂದ ಪಡೆದ ಮಾಹಿತಿ ಪ್ರಕಾರ ಬೆಕೂರು ಬಸ್ ನಿಲ್ದಾಣದ ಬಳಿಯಿಂದ ಶ್ರೀ ಲೋಕಿಂದರ ಎಂಬ ವ್ಯಕ್ತಿಯನ್ನು ರಕ್ಷಿಸಿದರು.

ರಕ್ಷಣೆಯ ಸಮಯದಲ್ಲಿ, ತಂಡವು ಶ್ರೀ ಲೋಕಿಂದರವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದನ್ನು ಗಮನಿಸಿತು ಅವರ ಮಾತಿನ ಪ್ರಮಾಣ ಕಡಿಮೆಯಾಗಿತ್ತು, ಮನೋಧೈರ್ಯ ಕುಂದಿತ್ತು ಮತ್ತು ದಿಕ್ಕಿಲ್ಲದಂತೆ ಅಲೆದಾಡುವ ವರ್ತನೆ ತೋರಿಸುತ್ತಿದ್ದರು. ಅವರ ಗಂಭೀರ ಮಾನಸಿಕ ಸ್ಥಿತಿಯನ್ನು ಮನಗಂಡ, ಸ್ನೇಹಾಲಯ ತಂಡವು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಂಡು, ಅವರನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿತು.
ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಲೋಕಿಂದರವರು ತೀವ್ರವಾದ ಮಾನಸಿಕ ಒತ್ತಡದಿಂದ ಬಳಲುತ್ತಿರುವುದು ಕಂಡು ಬಂದಿದೆ. ಮತ್ತು ಲೋಕಿಂದರವರು ಯಾವ ಮೂಲದವರು ಎಂಬುವುದಾಗಿ ಇನ್ನು ಪತ್ತೆಯಾಗಿಲ್ಲ,

ಸ್ನೇಹಾಲಯವು ಮನೋವೈಕಲ್ಯದಿಂದ ಬಳಲುವ ಮತ್ತು ನಿರಾಶ್ರಿತರಾದ ವ್ಯಕ್ತಿಗಳನ್ನು ರಕ್ಷಿಸುವುದು, ಪುನರ್ವಸತಿ ಮಾಡುವುದು ಮತ್ತು ಆಶ್ರಯ ಒದಗಿಸುವ ತನ್ನ ಕರುಣೆಯ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿದೆ. ಇಂತಹ ಸಂಕಷ್ಟದಲ್ಲಿರುವ ಯಾರನ್ನಾದರೂ ಕಂಡರೆ, ಜನಸಾಮಾನ್ಯರು ತಕ್ಷಣ ಸ್ನೇಹಾಲಯಕ್ಕೆ ಮಾಹಿತಿ ನೀಡುವಂತೆ ಸಂಸ್ಥೆಯು ವಿನಂತಿಸಿದೆ.

ಶ್ರೀ ಲೋಕಿಂದರ ಅವರ ಬಗ್ಗೆ ಯಾವುದೇ ಮಾಹಿತಿಗಾಗಿ ಸ್ನೇಹಾಲಯವನ್ನು 9446547033 / 8590339570 / 6282495137 ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.

ನಿಮ್ಮ ಸಮಯೋಚಿತ ಸಹಾಯವು ಸಂಕಷ್ಟದಲ್ಲಿರುವವರಿಗೆ ಭರವಸೆ ಮತ್ತು ಆರೈಕೆ ನೀಡುತ್ತದೆ.

Leave a Reply

Your email address will not be published. Required fields are marked *

Need Help?