Manjeshwar, November 01, 2025: A man identified as Mr. Parashuram was rescued by Br. Joseph Crasta and the dedicated team from Perla City main bus stand after receiving information from Mr. Jerald D’Souza, the owner of the Mummy Daddy clothing store.
According to reports, Mr. Parashuram was found wandering in a disoriented state, exhibiting symptoms of psychiatric distress, including self-talking and self-smiling. Recognizing his vulnerable condition, the Snehalaya team promptly intervened and brought him to safety.
He has been admitted to the Snehalaya Psycho-Social Rehabilitation Centre, Manjeshwar, where he will receive medical attention, psychological care, and holistic rehabilitation support.
Efforts are ongoing to trace his family and facilitate a safe reunion.
For any information regarding Mr. Parashuram, please contact Snehalaya at 9446547033 / 8590339570 / 6282495137.
Snehalaya continues its compassionate mission of rescuing, rehabilitating, and restoring dignity to the lives of the mentally ill, destitute, and abandoned individuals.

ಪೆರ್ಲ ನಗರದಲ್ಲಿ ರಕ್ಷಣಾ ಕಾರ್ಯ: ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಸ್ನೇಹಾಲಯದ ಜೀವದಾಯಿ ಸಹಾಯ
ಮಂಜೇಶ್ವರ, ನವೆಂಬರ್ 01, 2025: ಮಮ್ಮಿ ಡ್ಯಾಡಿ ವಸ್ತ್ರದಂಗಡಿಯ ಮಾಲಿಕರಾದಂತಹ ಜೆರಾಲ್ಡ್ ಡಿ’ಸೋಜಾ ಅವರಿಂದ ದೊರಕಿದ ಮಾಹಿತಿ ಮೇರೆಗೆ ಪೆರ್ಲಾ ನಗರದ ಮುಖ್ಯ ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ ಪರಶುರಾಮ್ ಎಂಬ ವ್ಯಕ್ತಿಯನ್ನು ಬ್ರದರ್ ಜೋಸೆಫ್ ಕ್ರಾಸ್ತಾ ಮತ್ತು ಅವರ ನಿಷ್ಠಾವಂತ ಸ್ನೇಹಾಲಯ ತಂಡವು ರಕ್ಷಿಸಿತು.
ಅಧಿಕೃತ ವರದಿಗಳ ಪ್ರಕಾರ, ಪರಶುರಾಮ್ ಅವರು ಮಾನಸಿಕ ಅಸ್ಥಿರತೆಯ ಲಕ್ಷಣಗಳಾದ ಸ್ವಯಂ ಮಾತು, ತನ್ನಷ್ಟಕ್ಕೆ ಮುಗುಳ್ನಗುವುದು ಮುಂತಾದ ವರ್ತನೆ ತೋರಿಸುತ್ತಾ ಬೀದಿಯಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದರು. ಅವರ ನಾಜೂಕಾದ ಸ್ಥಿತಿಯನ್ನು ಅರಿತು, ಸ್ನೇಹಾಲಯದ ತಂಡವು ತಕ್ಷಣ ಅವರ ಸಹಾಯಕ್ಕೆ ಧಾವಿಸಿ ಅವರನ್ನು ರಕ್ಷಿಸಿತು.
ಪ್ರಸ್ತುತ ಅವರನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನಶ್ಚೇತನ ಕೇಂದ್ರದಲ್ಲಿ ದಾಖಲಿಸಲಾಗಿದೆ, ಅಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಆರೈಕೆ ಹಾಗೂ ಸಮಗ್ರ ಪುನಶ್ಚೇತನ ಸಹಾಯವನ್ನು ನೀಡಲಾಗುತ್ತದೆ.
ಪರಶುರಾಮ್ ಅವರ ಕುಟುಂಬದ ಸದಸ್ಯರನ್ನು ಪತ್ತೆಹಚ್ಚಿ ಅವರನ್ನು ಸುರಕ್ಷಿತವಾಗಿ ತಮ್ಮ ಮನೆ ಸೇರಿಸುವ ಪ್ರಯತ್ನಗಳು ಮುಂದುವರಿದಿವೆ.
ಪರಶುರಾಮ್ ಕುರಿತು ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಸ್ನೇಹಾಲಯವನ್ನು ಈ ಸಂಖ್ಯೆಗಳಲ್ಲಿ ಸಂಪರ್ಕಿಸಿ: 9446547033 / 8590339570 / 6282495137.
ಮಾನಸಿಕ ಅಸ್ವಸ್ಥರು, ನಿರಾಶ್ರಿತರು ಮತ್ತು ತ್ಯಜಿಸಲ್ಪಟ್ಟವರ ಜೀವಿತದಲ್ಲಿ ಗೌರವ ಮತ್ತು ಮಾನವೀಯತೆ ಪುನರುಜ್ಜೀವನಗೊಳಿಸಲು ಸ್ನೇಹಾಲಯ ತನ್ನ ಕರುಣೆಯ ಸೇವೆಯನ್ನು ನಿರಂತರವಾಗಿ ಮುಂದುವರೆಸುತ್ತಿದೆ.
