Br. Joseph Crasta and Team Rescue Mentally ill Man from Deralakatte Area

/

Manjeshwar, October 31, 2025: A man identified as Mr.Rahul Dev was rescued by Br.Joseph Crasta and team from near Deralakatte Street following a report by a public person named Ansar Montepadav. The rescue took place on October 27, 2025, and the patient was subsequently admitted to the Snehalaya Psycho-Social Rehabilitation Centre, Manjeshwar.

According to the Snehalaya team, Rahul Dev was found wandering aimlessly in a disoriented state. He exhibited psychiatric symptoms, poor insight into his condition, lack of personal hygiene, and repetitive speech. Observing his vulnerable condition, the team intervened promptly and ensured his safe transfer for care and rehabilitation.

At present, Rahul Dev is under medical observation and receiving appropriate psychiatric treatment and personal care at Snehalaya. The organization continues to appeal to the public for any information that could help trace his family or background.

For assistance or information, please contact 9446547033 / 85903 39570 / 6282495137.

ದಾರಿ ತಪ್ಪಿದ ಜೀವಕ್ಕೆ ಆಶಾಕಿರಣ – ಸ್ನೇಹಾಲಯ ತಂಡದ ಮಾನವೀಯ ಸ್ಪರ್ಶಃ

ದೇರಳಕಟ್ಟೆ ಸಮೀಪ ಅಸಹಾಯಕರ ಸ್ಥಿತಿಯ ವ್ಯಕ್ತಿಗೆ ಸ್ನೇಹಾಲಯದಿಂದ ಜೀವದಾನ.

ಮಂಜೇಶ್ವರ, ಅಕ್ಟೋಬರ್ 31, 2025: ಸಾರ್ವಜನಿಕರಿಂದ ದೊರೆತ ವರದಿಯ ಮೇರೆಗೆ ಅಕ್ಟೋಬರ್ 27, 2025 ರಂದು ದೇರಳಕಟ್ಟೆ ರಸ್ತೆಯ ಸಮೀಪದಲ್ಲಿರುವ ಮೊಂಟೆಪದವಿನಿಂದ ಮನೋವೈಕಲ್ಯದಿಂದ ಬಳಲುತ್ತಿದ್ದ ಅಸಹಾಯಕ, ರಾಹುಲ್ ದೇವ್ ಎಂಬ ವ್ಯಕ್ತಿಯನ್ನು ಬ್ರದರ್ ಜೊಸಫ್ ಕ್ರಾಸ್ತಾ ಮತ್ತು ಅವರ ತಂಡವು ರಕ್ಷಿಸಿ ಬಳಿಕ ಅವರನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.

ಸ್ನೇಹಾಲಯ ತಂಡದ ಮಾಹಿತಿ ಪ್ರಕಾರ, ರಾಹುಲ್ ದೇವ್ ಅತಿಯಾದ ಗೊಂದಲದಿಂದ ಕೂಡಿದ ಸ್ಥಿತಿಯಲ್ಲಿ, ಗೊತ್ತು-ಗುರಿಯಿಲ್ಲದೆ ಅಲೆಮಾರಿತನದಲ್ಲಿ ಕಂಡುಬಂದರು. ಅವರಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು, ತಮ್ಮ ನೈಜ ಸ್ಥಿತಿಯ ಅರಿವಿನ ಕೊರತೆ, ವೈಯಕ್ತಿಕ ಸ್ವಚ್ಛತೆಯ ಅಭಾವ ಮತ್ತು ಪುನರಾವರ್ತಿತ ಮಾತು ಇತ್ಯಾದಿ ಲಕ್ಷಣಗಳು ಕಂಡುಬಂದವು. ಅವರ ದುರ್ಬಲ ಸ್ಥಿತಿಯನ್ನು ಗಮನಿಸಿದ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿ, ಅವರಿಗೆ ಸೂಕ್ತ ಆರೈಕೆ ಮತ್ತು ಪುನರ್ವಸತಿಯು ನಿಡುವ ವ್ಯವಸ್ಥೆ ಮಾಡಿತು.

ಪ್ರಸ್ತುತಃ ರಾಹುಲ್ ದೇವ್ ಸ್ನೇಹಾಲಯದಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಡಿ ಇದ್ದು, ಸೂಕ್ತ ಮಾನಸಿಕ ಚಿಕಿತ್ಸೆ ಮತ್ತು ವೈಯಕ್ತಿಕ ಆರೈಕೆಯನ್ನು ಪಡೆಯುತ್ತಿದ್ದಾರೆ. ಅವರ ಕುಟುಂಬ ಅಥವಾ ಹಿನ್ನೆಲೆ ಕುರಿತು ಮಾಹಿತಿ ನೀಡಲು ಸ್ನೇಹಾಲಯ ಸಂಸ್ಥೆ ಜನಸಾಮಾನ್ಯರಲ್ಲಿ ವಿನಂತಿ ಮಾಡಿದೆ. ತಮ್ಮಲ್ಲಿ ಯಾರಿಗಾದರೂ ಈ ವ್ಯಕ್ತಿಯ ಯಾವುದೇ ಮಾಹಿತಿ ಅಥವಾ ಸುಳಿವು ಇದ್ದಲ್ಲಿ ದಯವಿಟ್ಟು ಈ ಸಂಖ್ಯೆಗಳನ್ನು ಸಂಪರ್ಕಿಸಿ: 9446547033 / 85903 39570 / 6282495137. ನಿಮ್ಮ ಸಮಯೋಚಿತ ಸಣ್ಣ ಸಹಾಯದಿಂದ ರಾಹುಲ್ ದೇವ್ ಪುನಃ ಆತನ ಪ್ರಿಯ ಜನರೊಂದಿಗೆ ಪುನರ್ಮಿಲನಗೊಳ್ಳಲು ದೊಡ್ದ ಸಹಾಯ ಆಗಬಹುದು.

Leave a Reply

Your email address will not be published. Required fields are marked *

Need Help?