Manjeshwar October, 28,2025: A man identified as Mr. Nithesh Kumar was rescued by the Snehalaya team from Manjeshwar Junction on October 22, 2025, at around 3:30 p.m., following information provided by Mr. Zachariya from Manjeshwar Auto Stand. After the rescue, he was safely admitted to the Snehalaya Psycho-Social Rehabilitation Centre, Manjeshwar, for care and rehabilitation.
According to Snehalaya staff, Mr. Nithesh Kumar was found in a vulnerable and distressed condition, appearing disoriented and without shelter or support. He was unable to provide clear information about his identity or family, indicating that he may be suffering from a psychosocial or mental health condition.
At Snehalaya, he is now receiving psychiatric evaluation, medical care, and emotional support under the guidance of trained professionals. The team is ensuring his safety, recovery, and overall well-being through continuous care and supervision.
Efforts are currently underway to trace his family and background in hopes of facilitating a safe and timely reunion.
If anyone has information regarding Mr. Nithesh Kumar’s identity or family, they are kindly requested to contact the Snehalaya team at 9446547033 / 85903 39570 / 6282495137.
Your support could help reunite him with his loved ones and ensure his continued care and rehabilitation.

ದುಖದಾಯಕ ಪರಿಸ್ಥಿತಿಯಿಂದ ನವಚೇತನಕ್ಕೆ: ಕುಟುಂಬವನ್ನ ಹುಡುಕಿ ಪುನರ್ಮಿಲನಕ್ಕೆ ಪ್ರಯತ್ನ
ಮಂಜೇಶ್ವರ, ಅಕ್ಟೋಬರ್ 28, 2025: ದಿನಾಂಕ ಅಕ್ಟೋಬರ್ 22, 2025 ರಂದು ಮಧ್ಯಾಹ್ನ 3:30ರ ಸುಮಾರಿಗೆ ಮಂಜೇಶ್ವರ ಆಟೋ ಸ್ಟ್ಯಾಂಡ್ನ ಶ್ರೀ ಜಕಾರಿಯಾ ನೀಡಿದ ಮಾಹಿತಿಯ ಆಧಾರದಲ್ಲಿ ಮಂಜೇಶ್ವರ ಜಂಕ್ಷನ್ನಲ್ಲಿ ಕಂಡುಬಂದ ಶ್ರೀ ನಿತೇಶ್ ಕುಮಾರ ರನ್ನು ಸ್ನೇಹಾಲಯ ತಂಡ ರಕ್ಷಿಸಿತು. ರಕ್ಷಣೆಯ ನಂತರ ಅವರನ್ನು ಆರೈಕೆ ಹಾಗೂ ಪುನಶ್ಚೇತನಕ್ಕಾಗಿ ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಲಾಯಿತು.
ಶ್ರೀ ನಿತೇಶ್ ಕುಮಾರರನ್ನು ಅಸಹಾಯ ಹಾಗೂ ಸಂಕಷ್ಟದ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರು ತೀವ್ರ ಮಾನಸಿಕ ಗೊಂದಲದಿಂದ ಬಳಲುತ್ತಿದ್ದರು ಹಾಗೂ ಅವರಿಗೆ ವಾಸಸ್ಥಳ ಅಥವಾ ಬೆಂಬಲ ಇರಲಿಲ್ಲ. ತಮ್ಮ ಸ್ವಗುರುತು ಅಥವಾ ಕುಟುಂಬದ ಕುರಿತು ಸ್ಪಷ್ಟ ಮಾಹಿತಿ ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ, ಇದರಿಂದ ಅವರು ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.
ಸ್ನೇಹಾಲಯದಲ್ಲಿ ಅವರು ಈಗ ನುರಿತ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಮನೋವೈದ್ಯಕೀಯ ಪರಾಮರ್ಶೆ, ವೈದ್ಯಕೀಯ ಚಿಕಿತ್ಸೆ ಹಾಗೂ ಭಾವನಾತ್ಮಕ ಬೆಂಬಲ ಪಡೆಯುತ್ತಿದ್ದಾರೆ. ತಂಡವು ಅವರ ಭದ್ರತೆ, ಚೇತರಿಕೆ ಹಾಗೂ ಸಮಗ್ರ ಕಲ್ಯಾಣದ ಕಡೆ ನಿರಂತರವಾಗಿ ಗಮನ ಹರಿಸುತ್ತಿದೆ.
ಅವರ ಕುಟುಂಬದವರನ್ನು ಹುಡುಕುವ ಹಾಗೂ ಸುರಕ್ಷಿತ ಪುನರ್ಮಿಲನಕ್ಕಾಗಿ ಪ್ರಯತ್ನಗಳು ಪ್ರಸ್ತುತ ನಡೆಯುತ್ತಿವೆ. ಯಾರಾದರೂ ಶ್ರೀ ನಿತೇಶ್ ಕುಮಾರರ ಕುರಿತು ಅಥವಾ ಅವರ ಕುಟುಂಬದ ಕುರಿತು ಯಾವುದೇ ಮಾಹಿತಿ ಹೊಂದಿದ್ದರೆ, ದಯವಿಟ್ಟು ಸ್ನೇಹಾಲಯ ತಂಡವನ್ನು 9446547033 / 85903 39570 / 6282495137 ಈ ಸಂಖ್ಯೆಗಳ ಮೂಲಕ ಸಂಪರ್ಕಿಸಿ.
