Manjeshwar, October 19, 2025: A man identified as Mr. Arjun was rescued by Br. Joseph Crasta and team from Mangalore Junction Railway Station on October 16, 2025, at around 1:30 a.m. The information regarding his condition and location was initially shared by RPF Police Officer Mr. Sudheer, leading to a prompt response by the rescue team.
According to Snehalaya staff, Mr. Arjun was found wandering aimlessly at the station in a disoriented and confused state, suggesting signs of mental illness. He appeared distressed and unable to provide any personal details or communicate coherently.
Following the rescue, he was brought to the Snehalaya PsychoSocial Rehabilitation Centre in Manjeshwar, where he is now receiving psychiatric treatment, medical care, and emotional support from trained professionals.
Efforts are currently underway to trace his family and background to facilitate a safe reunion in the coming days.
If anyone has information regarding Mr. Arjun’s identity or family, please contact the Snehalaya team at 9446547033 / 7994087033. Your cooperation could help reunite him with his loved ones and ensure his continued care and rehabilitation.

ಮಂಗಳೂರು ಜಂಕ್ಷನ್ನಲ್ಲಿ ಅಸ್ಥಿರ ಸ್ಥಿತಿಯಲ್ಲಿದ್ದ ಅರುಣ್ರನ್ನು ಸ್ನೇಹಾಲಯ ತಂಡದಿಂದ ಹೃದಯಸ್ಪರ್ಶಿ ರಕ್ಷಣೆ
ಮಂಜೇಶ್ವರ, ಅಕ್ಟೋಬರ್ 19, 2025: ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಕ್ಟೋಬರ್ 16, 2025ರ ರಾತ್ರಿ ಸುಮಾರು 1:30 ಕ್ಕೆ ಅರುಣ್ ಎಂಬ ವ್ಯಕ್ತಿಯನ್ನು ಬ್ರದರ್ ಜೋಸೆಫ್ ಕ್ರಾಸ್ತಾ ಅವರ ನೇತ್ರತ್ವದಲ್ಲಿ ಸ್ನೇಹಾಲಯ ರಕ್ಷಣಾ ತಂಡವು ರಕ್ಷಿಸಿತು.
ಆರ್ ಪಿ ಎಫ್ ಪೊಲೀಸ್ ಅಧಿಕಾರಿ ಶ್ರೀ ಸುಧೀರ್ ಅವರಿಂದ ಅರುಣ್ ಅವರ ಸ್ಥಿತಿ ಮತ್ತು ಸ್ಥಳದ ಬಗ್ಗೆ ದೊರಕಿದ ಮಾಹಿತಿ ಮೇರೆಗೆ ಸ್ನೇಹಾಲಯ ತಂಡದ ವತಿಯಿಂದ ತಕ್ಷಣ ಆತನ ರಕ್ಷಣಾ ಕ್ರಮ ಕೈಗೊಳ್ಳಲಾಯಿತು.
ಸ್ನೇಹಾಲಯ ಸಿಬ್ಬಂದಿಯ ಪ್ರಕಾರ, ಶ್ರೀ ಅರುಣ್ ಅವರು ರೈಲ್ವೇ ನಿಲ್ದಾಣದಲ್ಲಿ ಅಸ್ಥಿರ ಸ್ಥಿತಿಯಲ್ಲಿ ಗೊಂದಲಗೊಂಡು ಅಲೆಯುತ್ತಿದ್ದರು. ಅವರ ವರ್ತನೆ ಮಾನಸಿಕ ಅಸ್ಥಿರತೆಯ ಲಕ್ಷಣಗಳನ್ನು ತೋರಿಸುತ್ತಿತ್ತು. ಅವರು ತೀವ್ರ ಆತಂಕದಿಂದ ಬಳಲುತ್ತಿದ್ದರು ಮತ್ತು ತಮ್ಮ ವೈಯಕ್ತಿಕ ವಿವರಗಳನ್ನು ನೀಡಲು ಅಥವಾ ಸರಿಯಾಗಿ ಮಾತನಾಡಲು ಅಸಮರ್ಥರಾಗಿದ್ದರು.
ರಕ್ಷಣೆಯ ನಂತರ ಅವರನ್ನು ಮಂಜೇಶ್ವರದ ಸ್ನೇಹಾಲಯ ಮನೋ ಸಾಮಾಜಿಕ ಪುನರ್ವಸತಿ ಕೇಂದ್ರದ ಪುರುಷರ ವಿಭಾಗದಲ್ಲಿ ದಾಖಲಿಸಲಾಗಿದೆ ಹಾಗೂ ಸ್ನೇಹಾಲಯದಲ್ಲಿ ಅವರಿಗೆ ಸಮಗ್ರ ಮಾನಸಿಕ ಚಿಕಿತ್ಸೆ ವೈದ್ಯಕೀಯ ಆರೈಕೆ, ಶಾರೀರಿಕ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡಲಾಗುತ್ತದೆ.
ಶ್ರೀ ಅರುಣ್ ಅವರ ಕುಟುಂಬ ಮತ್ತು ಹಿನ್ನೆಲೆಯನ್ನು ಪತ್ತೆಹಚ್ಚಿ ಅವರನ್ನು ಸುರಕ್ಷಿತವಾಗಿ ಅವರ ಕುಟುಂಬಕ್ಕೆ ಪುನಃ ಸೇರಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ನಮ್ರ ನಿವೇದನೆ ಏನೆಂದರೆ, ಯಾರಾದರೂ ಶ್ರೀ ಅರುಣ್ ಅವರ ಗುರುತು ಅಥವಾ ಕುಟುಂಬದ ಬಗ್ಗೆ ಮಾಹಿತಿ ಹೊಂದಿದ್ದರೆ, ದಯವಿಟ್ಟು ಸ್ನೇಹಾಲಯ ತಂಡವನ್ನು ಈ ಸಂಖ್ಯೆಗಳ ಮೂಲಕ ಸಂಪರ್ಕಿಸಿ: 9446547033 / 7994087033.
ನಿಮ್ಮ ಸಹಕಾರದಿಂದ ಅವರು ತಮ್ಮ ಪ್ರಿಯಜನರೊಂದಿಗೆ ಪುನರ್ಮಿಲನಗೊಂಡು ಕುಟುಂಬದ ನಿರಂತರ ಆರೈಕೆ ಮತ್ತು ಸುರಕ್ಷತೆಯನ್ನು ಪಡೆಯಲು ನೆರವಾಗಬಹುದು.
