Manjeshwar, October 3, 2025: After four months of uncertainty and distress, the heartfelt reunion of Mr. Senathipathi T, a 33-year-old man from Kulithalai, Karur district, Tamil Nadu, with his family brought immense relief, joy, and emotional closure to his loved ones.
Mr. Senathipathi, son of Mrs. Vennila Saminathan, had been struggling with severe alcohol addiction, which led to episodes of irritability, disorientation, and self-talk. His condition worsened to the point where he was found wandering the streets of Kasaragod in a vulnerable and unstable state.
On June 10, 2025, the Kasaragod police, recognizing his deteriorating condition, brought him to the Snehalaya Psycho-Social Rehabilitation Center for Men. There, under the care of medical professionals and counselors, he began receiving the treatment and psychological support he urgently needed.
As his condition improved, Mr. Senathipathi was eventually able to share his identity and home address. A psychiatric social worker at Snehalaya then took proactive steps to trace and contact his family. Thanks to this dedicated effort, and with the emotional strength of his loved ones, a long-awaited reunion was made possible.
On the night of October 2, 2025, at 9:30 pm, Mr. Senathipathi was warmly welcomed back by his mother, Mrs. Vennila Saminathan, and his cousin brother, Mr. R. Saravanam. The moment was filled with tears, hugs, and gratitude, as the family finally embraced their lost member.
This story stands as a powerful reminder of how compassionate care, timely intervention, and community collaboration can bring transformative change in the lives of individuals battling addiction and mental health challenges. The family has expressed deep gratitude to Snehalaya and all those who played a role in reuniting them.

ನಾಲ್ಕು ತಿಂಗಳ ವಿಯೋಗದ ನಂತರ ತಾಯಿಯ ಮಡಿಲಲ್ಲಿ ನೆಮ್ಮದಿ ಪಡೆದ ಸೇನಾತಿಪತಿ
ಮಂಜೇಶ್ವರ, ಅಕ್ಟೋಬರ್ 3, 2025: ತಮಿಳುನಾಡಿನ ಕರೂರು ಜಿಲ್ಲೆಯ ಕುಳಿತ್ತಳೈ ಮೂಲದ 33 ವರ್ಷದ ಸೇನಾತಿಪತಿ, ನಾಲ್ಕು ತಿಂಗಳ ಅಗಲಿಕೆಯ ಬಳಿಕ ಪುನ ತನ್ನ ಮನೆಮಂದಿಯ ಜೊತೆ ಸೇರಿಕೊಂಡರು. ಮದ್ಯ ವ್ಯಸನದಿಂದ ಉಂಟಾದ ಆರೋಗ್ಯ ಸಮಸ್ಯೆಯಿಂದ ದೂರ ವಾಸವಾಗಿದ್ದ ಅವರನ್ನು ಕುಟುಂಬವು ಮತ್ತೆ ಪಡೆದು ಆನಂದಭಾಷ್ಪಗಳನ್ನು ಸುರಿಸಿತು.
ಸೇನೆತಿಪತಿ, ಶ್ರೀಮತಿ ವೆಣ್ಣಿಳಾ ಸಾಮಿನಾಥನ್ ಅವರ ಪುತ್ರ. ಮದ್ಯಪಾನದ ವ್ಯಸನದಿಂದ ಬಳಲುತ್ತಿದ್ದ ಅವರು ಕಿರಿಕಿರಿ, ಗೊಂದಲ ಮತ್ತು ಸ್ವತಃ ಮಾತಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದರು. ಕೊನೆಗೆ, ಕಾಸರಗೋಡು ಬೀದಿಗಳಲ್ಲಿ ಅಲೆದಾಡುತ್ತಿರುವ ಅವರನ್ನು ಅಸಹಾಯಕ ಸ್ಥಿತಿಯಲ್ಲಿ ಪೊಲೀಸರು ಕಂಡುಹಿಡಿದರು.
ಈ ಕುರಿತು 2025ರ ಜೂನ್ 10ರಂದು ಕಾಸರಗೋಡು ಪೊಲೀಸರು ಸೇನಾತಿಪತಿಯನ್ನು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಪುರುಷರ ವಿಭಾಗದಲ್ಲಿ ದಾಖಲಿಸಿದರು. ಅಲ್ಲಿ ವೈದ್ಯರು ಮತ್ತು ಸಮಾಲೋಚಕರ ಸಹಾಯದಿಂದ ಅವರಿಗೆ ಬೇಕಾದ ಉತ್ತಮ ವೈದ್ಯಕೀಯ ಚಿಕಿತ್ಸೆ ಹಾಗೂ ಮಾನಸಿಕ ಬೆಂಬಲ ದೊರೆಯಿತು.
ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡ ನಂತರ, ಸೇನಾತಿಪತಿ ತಮ್ಮ ನೆಲೆ ಮತ್ತು ಗುರುತನ್ನು ಹಂಚಿಕೊಂಡರು. ಅವರ ವಿಳಾಸವನ್ನು ತಿಳಿದುಕೊಂಡ ಸ್ನೇಹಾಲಯದ ಸಾಮಾಜಿಕ ಕಾರ್ಯಕರ್ತರು ಆತನ ಕುಟುಂಬವನ್ನು ಸಂಪರ್ಕಿಸಿದರು. ಇಂತಹ ಶ್ರಮದ ಫಲವಾಗಿ ಕುಟುಂಬವು ತಮ್ಮ ಕಳೆದುಹೋದ ಮಗನನ್ನು ಪುನ ಪಡೆಯುವಂತಾಯಿತು.
ಅಕ್ಟೋಬರ್ 2ರ ರಾತ್ರಿ 9:30ಕ್ಕೆ, ತಾಯಿ ವೆಣ್ಣಿಳಾ ಸಾಮಿನಾಥನ್ ಮತ್ತು ತಮ್ಮ ಆರ್. ಸರವನಂ ಅವರು ಸೇನಾಪತಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಭಾವನಾತ್ಮಕ ಮಿಲನವು ಕಣ್ಣೀರು ಮತ್ತು ಕೃತಜ್ಞತೆಯಿಂದ ತುಂಬಿದ ಒಂದು ಅದ್ಭುತ ಕ್ಷಣವಾಗಿತ್ತು.
ಈ ಘಟನೆಯು, ವ್ಯಸನ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸುತ್ತಿರುವವರ ಬದುಕಿನಲ್ಲಿ ಸಮಯೋಚಿತ ಚಿಕಿತ್ಸೆ, ಕಾಳಜಿ ಮತ್ತು ಸಮಾಜದ ಸಹಕಾರವು ಎಷ್ಟು ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂಬುದಕ್ಕೆ ಒಂದು ಜೀವಂತ ಸಾಕ್ಷಿಯಾಗಿದೆ. ಸೇನೆತಿಪತಿಯ ಕುಟುಂಬವು ಸ್ನೇಹಾಲಯ ಮತ್ತು ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿತು.
