Manjeshwar, September 29, 2025: After three months of uncertainty and anxiety, Mr. Sunil Koneri was successfully reunited with his cousin in Ankale village, Belgaum district. The emotional reunion brought immense relief and joy to his family members, who had been deeply worried during his absence.
Sunil, a postgraduate in MHMS, had earlier been employed as a doctor in Mumbai, leading a stable and respectable life. However, following the onset of mental illness, both his professional and personal life were disrupted, eventually leading to his disappearance. During this period, no official missing complaint was registered, leaving his family distressed and helpless.
On June 22, 2025, social worker Kiran Kumar from Karkala found Sunil wandering in a distressed state near Bunts Hostel Circle and immediately informed Br. Joseph Crasta, founder of Snehalaya Charitable Trust. The Snehalaya Psycho-Social Rehabilitation Team swiftly rescued him and admitted him to their rehabilitation centre in Manjeshwar, where he received medical treatment, counseling, and essential care.
Later, on September 21, 2025, with the timely intervention and continued care of Snehalaya Charitable Trust, and in collaboration with Shraddha Foundation, Mumbai, his identity was confirmed, and he was safely reunited with his family.
The family expressed heartfelt gratitude, while villagers warmly welcomed him back, extending their support. Belonging to a well-respected family, Sunil has three brothers, all gainfully employed—one of whom serves in the police department. His family remains hopeful that with proper treatment and care, Sunil will regain stability and rebuild his life.
This reunion stands as a testament to the healing power of compassion, community support, and timely humanitarian intervention.

ಮೂರು ತಿಂಗಳ ನಂತರ ಸುನಿಲ್ ಕೋಣೆರಿ ಕುಟುಂಬದೊಡನೆ ಯಶಸ್ವಿ ಮಿಲನ
ಮಂಜೇಶ್ವರ, ಸೆಪ್ಟೆಂಬರ್ 29, 2025: ಮೂರು ತಿಂಗಳ ಅನಿಶ್ಚಿತತೆ ಮತ್ತು ಆತಂಕದ ನಂತರ, ಶ್ರೀ ಸುನಿಲ್ ಕೋನೆರಿ ಅವರು ಬೆಳಗಾವಿ ಜಿಲ್ಲೆಯ ಅಂಕಲೆ ಗ್ರಾಮದಲ್ಲಿ ತನ್ನ ತಮ್ಮ ಸಂಬಂಧಿಯೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡಿದ್ದಾರೆ. ಈ ಭಾವನಾತ್ಮಕ ಮಿಲನವು ಅವರ ಕುಟುಂಬದವರಲ್ಲಿ ಅಪಾರ ಸಂತೋಷ ಮತ್ತು ತೃಪ್ತಿ ಮೂಡಿಸಿದೆ. ಎಂ.ಎಚ್.ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದಿದ್ದ ಸುನಿಲ್ ಅವರು ಮುಂಬೈನಲ್ಲಿ ವೈದ್ಯರಾಗಿ ಉತ್ತಮ ಉದ್ಯೋಗ ಮಾಡಿ ಸ್ಥಿರ ಜೀವನ ನಡೆಸುತ್ತಿದ್ದರು. ಆದರೆ, ಮಾನಸಿಕ ಅಸ್ವಸ್ಥತೆ ಆರಂಭವಾದ ಬಳಿಕ ಅವರ ವೃತ್ತಿ ಹಾಗೂ ಕುಟುಂಬ ಜೀವನದಲ್ಲಿ ಅಡಚಣೆ ಉಂಟಾಗಿ, ಅಂತಿಮವಾಗಿ ಅವರು ಕಾಣೆಯಾಗಿದ್ದರು. ಈ ಅವಧಿಯಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗದೆ ಕುಟುಂಬವು ಆತಂಕದಲ್ಲೇ ಕಾಲ ಕಳೆಯಬೇಕಾಯಿತು.
ಜೂನ್ 22, 2025ರಂದು ಬಂಟ್ಸ್ ಹಾಸ್ಟೆಲ್ ಸರ್ಕಲ್ ಬಳಿ ಇದ್ದಂತಹ, ಕರ್ಕಳದ ನಿವಾಸಿ ಸಮಾಜಸೇವಕ ಕಿರಣ್ ಕುಮಾರ್ ಅವರು ಅಸ್ವಸ್ಥ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಸುನಿಲ್ ಕೋಣೆರಿಯನ್ನು ಕಂಡು ತಕ್ಷಣವೇ ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ನ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ಟಾ ಅವರಿಗೆ ಮಾಹಿತಿ ನೀಡಿದರು. ನಂತರ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ತಂಡವು ತಕ್ಷಣವೇ ಅವರನ್ನು ರಕ್ಷಿಸಿ, ಮಂಜೇಶ್ವರದಲ್ಲಿರುವ ತಮ್ಮ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿತು. ಅಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ, ಸಮಾಲೋಚನೆ ಮತ್ತು ಅಗತ್ಯ ಆರೈಕೆ ಒದಗಿಸಲಾಯಿತು.
ಸಪ್ಟೆಂಬರ್ 21,2025 ರಂದು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ಸಮಯೋಚಿತ ಹಸ್ತಕ್ಷೇಪ ಮತ್ತು ನಿರಂತರ ಕಾಳಜಿ ಆರೈಕೆಯ ಮೂಲಕ ಅವರ ಗುರುತನ್ನು ದೃಢಪಡಿಸಿದ ನಂತರ ಮುಂಬೈ ನ ಶ್ರದ್ಧಾ ಫೌಂಡೇಶನ್ ನ ಸಂಯೋಗದಿಂದ ಸುರಕ್ಷಿತವಾಗಿ ಮನೆಗೆ ಹಿಂತಿರುಗುವಂತೆ ನೆರವಾಯಿತು. ಕುಟುಂಬ ಸದಸ್ಯರು ಕೃತಜ್ಞತೆ ವ್ಯಕ್ತಪಡಿಸಿದ್ದು, ಗ್ರಾಮಸ್ಥರೂ ಸಹ ಆನಂದ ವ್ಯಕ್ತಪಡಿಸಿ ಬೆಂಬಲದ ಕೈ ಚಾಚಿದ್ದಾರೆ.
ಸುನಿಲ್ ಅವರು ಸುಸಂಸ್ಕೃತ ಕುಟುಂಬಕ್ಕೆ ಸೇರಿದ್ದು, ಮೂವರು ಸಹೋದರರು ಸ್ಥಿರ ಉದ್ಯೋಗದಲ್ಲಿದ್ದಾರೆ. ಅವರಲ್ಲಿ ಒಬ್ಬರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರಿಯಾದ ಚಿಕಿತ್ಸೆ ಮತ್ತು ಆರೈಕೆಯೊಂದಿಗೆ ಸುನಿಲ್ ಮತ್ತೆ ಸ್ಥಿರತೆ ಹೊಂದಿ ಬದುಕನ್ನು ಪುನರ್ ನಿರ್ಮಿಸಿಕೊಳ್ಳುವರು ಎಂಬ ಭರವಸೆಯಲ್ಲಿ ಕುಟುಂಬವಿದೆ.
ಈ ಮಿಲನವು ಮಾನವೀಯ ಹಸ್ತಕ್ಷೇಪ, ಸಮುದಾಯದ ಬೆಂಬಲ ಮತ್ತು ಕರುಣೆ ಒಟ್ಟುಗೂಡಿದಾಗ ಸಂಭವಿಸುವ ಚೇತರಿಕೆಯ ಶಕ್ತಿಯನ್ನು ನೆನಪಿಸುತ್ತದೆ.
